ಬೆಂಗಳೂರು : ಕಳೆದ ಒಂದು ತಿಂಗಳಿನಲ್ಲಿ ಬೆಂಗಳೂರಿನಲ್ಲಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಇದುವರೆಗೂ 140 ಕೆಜಿ ಗಾಂಜಾ ವನ್ನು ಜಪ್ತಿ ಮಾಡಿಕೊಂಡಿದ್ದು, ಪ್ರಕರಣಕ್ಕೆ ಸಂಬಂಧಪಟ್ಟಂತೆ 10 ವಿದೇಶಿ ಪ್ರಜೆಗಳು ಸೇರಿದಂತೆ 64 ಜನರನ್ನು ಅರೆಸ್ಟ್ ಮಾಡಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ್ ಮಾಹಿತಿ ನೀಡಿದರು.
ಇಂದು ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪ್ರಕರಣಕ್ಕೆ ಸಂಬಂಧಿಸಿದಂತೆ 42 ಪ್ರಕರಣ ದಾಖಲಾಗಿವೆ. ಬಂಧಿತ ಎಲ್ಲ ಆರೋಪಿಗಳಿಂದ 140 ಕೆಜಿ ಗಾಂಜಾ, 1 ಕೆಜಿ ಗಾಂಜಾ ಆಯಿಲ್, 609 ಗ್ರಾಂ ಆಫೀಮು, 770 ಗ್ರಾಂ ಹೆರಾಯಿನ್, 2ಕೆಜಿ 436 ಗ್ರಾಂ ಚರಸ್, 509 ಗ್ರಾಂ ಕೊಕೇನ್, 5 ಕೆಜಿ 397 ಗ್ರಾಂ ಎಂಡಿಎಂಎ, 2569 LSD ಸ್ಟ್ರಿಪ್, 6 ಕೆಜಿ 725 ಗ್ರಾಂ ಅಂಫಟಮೈನ್, 11,908 ಎಕ್ಸ್ ಟೆಸಿ ಮಾತ್ರೆ ಜಪ್ತಿ ಮಾಡಲಾಗಿದೆ ಎಂದು ತಿಳಿಸಿದರು.








