ಬೆಂಗಳೂರು : ವೇತನ ಬಾಕಿ ಉಳಿಸಿಕೊಂಡ ಹಿನ್ನೆಲೆಯಲ್ಲಿ ಇದೀಗ 108 ಆಂಬುಲೆನ್ಸ್ ಸಿಬ್ಬಂದಿಗಳು ಮತ್ತೆ ಆರೋಗ್ಯ ಇಲಾಖೆ ವಿರುದ್ಧ ಹೋರಾಟಕ್ಕೆ ಮುಂದಾಗಿದ್ದು ಶೀಘ್ರದಲ್ಲಿ ಬಾಕಿ ವೇತನ ಪಾವತಿಸದೆ ಇದ್ದಲ್ಲಿ ಆಂಬುಲೆನ್ಸ್ ಸೇವೆ ಬಂದ್ ಮಾಡಿ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಆರೋಗ್ಯ ಇಲಾಖೆಗೆ ಎಚ್ಚರಿಕೆ ನೀಡಿದ್ದಾರೆ.
ಹೌದು ಸಂಬಳ ನೀಡದ ಹಿನ್ನೆಲೆ 108 ಆಂಬುಲೆನ್ಸ್ ಸಿಬ್ಬಂದಿ ಮತ್ತೆ ಹೋರಾಟಕ್ಕೆ ಮುಂದಾಗಿದ್ದಾರೆ. ಶನಿವಾರದೊಳಗೆ ವೇತನ ನೀಡದಿದ್ದರೆ ಪ್ರತಿಭಟನೆ ಎಚ್ಚರಿಕೆ ಸಹ ಸಿಬ್ಬಂದಿಗಳು ನೀಡಿದ್ದಾರೆ. ವೇತನ ನೀಡದಿದ್ದರೆ ಸೇವೆಗೆ ಹಾಜರಾಗದಿರಲು ನೌಕರರು ನಿರ್ಧಾರ ಕೈಗೊಂಡಿದ್ದಾರೆ. ಬಾಕಿ ವೇತನ ಪಾವತಿಸುವಂತೆ ನಾಳೆ ಸರ್ಕಾರಕ್ಕೆ 108 ಆಂಬುಲೆನ್ಸ್ ನೌಕರರು ಮನವಿ ಸಲ್ಲಿಸಲಿದ್ದಾರೆ.
ಕಳೆದ ವರ್ಷ ಜುಲೈ ನಲ್ಲಿ ಕೂಡ 108 ಆಂಬುಲೆನ್ಸ್ ಸಿಬ್ಬಂದಿಗಳು ಬಾಕಿ ವೇತನ ಪಾವತಿಸದ ಹಿನ್ನೆಲೆಯಲ್ಲಿ ಸೇವೆ ಬಂದ್ ಮಾಡಿ ಪ್ರತಿಭಟನೆ ಮಾಡಿದ್ದರು. ಈ ವೇಳೆ ಸಚಿವ ದಿನೇಶ್ ಗುಂಡೂರಾವ್ ಅವರು, 108 ಸಿಬ್ಬಂದಿ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ಆರೋಗ್ಯ ಇಲಾಖೆ ಆಯುಕ್ತ ರಂದೀಪ್, ಬಾಕಿ ವೇತನದ ಮೊದಲ ಕಂತಿನ 14 ಕೋಟಿ ಬಿಡುಗಡೆಗೊಳಿಸಿದ್ದರು.