ಬೆಂಗಳೂರು : ಬಿಜಿಎಸ್ ಆಸ್ಪತ್ರೆಯಿಂದ ಇಂದು ನಟ ದರ್ಶನ್ ಡಿಸ್ಚಾರ್ಜ್ ಆಗಿದ್ದಾರೆ. ಕಳೆದ ಒಂದುವರೆ ತಿಂಗಳಿನಿಂದ ನಟ ದರ್ಶನ್ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸರ್ಜರಿ ಮಾಡಿಸಿಕೊಳ್ಳದೆ ಆಸ್ಪತ್ರೆಯಿಂದ ದರ್ಶನ್ ಡಿಸ್ಚಾರ್ಜ್ ಆಗಿದ್ದಾರೆ.
ಈಗಾಗಲೇ ಆಸ್ಪತ್ರೆ ಆವರಣದಲ್ಲಿ ಪತ್ನಿ ವಿಜಯಲಕ್ಷ್ಮಿ ಜೊತೆಗೆ ಕಾರಿನಲ್ಲಿ ತಮ್ಮ ನಿವಾಸಕ್ಕೆ ಹೋಗುತ್ತಿದ್ದಾರೆ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿ ದರ್ಶನ್ ಹೊಸಕೆರೆ ಹಳ್ಳಿಯ ಫ್ಲ್ಯಾಟ್ ಗೆ ತೆರಳಲಿದ್ದಾರೆ. ಪತ್ನಿ ವಿಜಯಲಕ್ಷ್ಮಿ ಫ್ಲಾಟ್ ಗೆ ದರ್ಶನವರು ತೆರಳಲಿದ್ದಾರೆ.ಮಧ್ಯಂತರ ಜಾಮಿನು ಪಡೆದುಕೊಂಡು ನಟ ದರ್ಶನ್ ಆಸ್ಪತ್ರೆಯಲ್ಲಿ ಟ್ರೀಟ್ಮೆಂಟ್ ಪಡೆದುಕೊಂಡಿದ್ದಾರೆ.
ಫಿಜಿಯೋಥೆರಫಿ ಮಾಡಿಸಿ ಬೇಲ್ ಸಿಗುತ್ತಿದ್ದಂತೆ ಇದೀಗ ದರ್ಶನ್ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. .ಯಾವಾಗ ಬೇಕಾದರೂ ಸರ್ಜರಿ ಮಾಡಿಸಿಕೊಳ್ಳಬಹುದು ಎಂಬ ಅಭಿಪ್ರಾಯ ವ್ಯಕ್ತವಾದ ಹಿನ್ನೆಲೆಯಲ್ಲಿ, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಇಂದು ಪತ್ನಿ ವಿಜಯಲಕ್ಷ್ಮಿ ಫ್ಲಾಟ್ ಗೆ ತೆರಳಲಿದ್ದಾರೆ. ವೈದ್ಯರ ಸಲಹೆ ಮೇರೆಗೆ ದರ್ಶನ ಡಿಸ್ಚಾರ್ಜ್ ಮಾಡಲಾಗಿದೆ.
ತಂದೆಗೆ ನೆರವಾದ ವಿನೀಶ್!
ವಿನೀಶ್ ದರ್ಶನ್ ಅಪ್ಪ ಡಿಸ್ಚಾರ್ಜ್ ಆಗಿ ಬರುತ್ತಿದ್ದಂತೆ ಜೊತೆಗೆ ನಿಂತಿದ್ದಾರೆ. ನಟ ದರ್ಶನ್ ಕೂಡಾ ಪುತ್ರ ವಿನೀಶ್ ಹೆಗಲ ಮೇಲೆ ಕೈ ಇಟ್ಟುಕೊಂಡು ನಿಧಾನವಾಗಿ ಕಾರಿನ ಕಡೆ ಹೆಜ್ಜೆ ಹಾಕಿದ್ದಾರೆ.ದರ್ಶನ್ ಬ್ಲಾಖ್ ಟೀ ಶರ್ಟ್ ಧರಿಸಿದ್ದರೆ ಅವರ ಮಗ ವಿನೀಶ್ ಬ್ಲಾಕ್ ಪ್ಯಾಂಟ್ ಹಾಗೂ ಕಾಫಿ ಕಲರ್ ಟೀಶರ್ಟ್ ಧರಿಸಿದ್ದರು. ಅವರ ತಂದೆಯನ್ನು ಹಿಡಿದುಕೊಂಡು ಕಾರಿನ ಕಡೆ ಹೆಜ್ಜೆ ಹಾಕಿದ್ದಾರೆ. ದರ್ಶನ್ ನಡೆಯುವಾಗ ಮಗನ ತೋಳಿನ ಮೇಲೆ ಕೈ ಇಟ್ಟು ನಡೆದರೆ ವಿನೀಶ್ ಅಪ್ಪನ ಸೊಂಟ ಹಿಡಿದುಕೊಂಡಿದ್ದರು. ಅಪ್ಪನಿಗೆ ಮಗ ಬೆಂಬಲವಾಗಿ ನಿಂತು ಕಾರಿನ ಕಡೆ ಹೋಗಿದ್ದಾರೆ. ಡಿಸ್ಚಾರ್ಜ್ ನಂತರ ದರ್ಶನ್ ಅವರು ಪತ್ನಿಯ ಫ್ಲಾಟ್ಗೆ ಬಂದಿದ್ದಾರೆ.