ಶಿವಮೊಗ್ಗ : ತಮ್ಮ ಮಗನಿಗೆ ಲೋಕಸಭೆ ಟಿಕೆಟ್ ಕೊಡಲಿಲ್ಲವೆಂದು ಅಸಮಾಧಾನ ಗೊಂಡು ಸ್ವತಂತ್ರ ಅಭ್ಯರ್ಥಿಯಾಗಿ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಅವರ ನೂತನ ಚುನಾವಣಾ ಕಚೇರಿ ಎದುರುಗಡೆ ಕಿಡಿಗೇಡಿಗಳಿಂದ ವಾಮಾಚಾರ ಮಾಡಿರುವ ಘಟನೆ ನಡೆದಿದೆ.
ಲೋಕಸಭೆ ಚುನಾವಣೆಗೆ ಸ್ವತಂತ್ರವಾಗಿ ಸ್ಪರ್ಧಿಸುತ್ತಿರುವ ಕೆ ಎಸ್ ಈಶ್ವರಪ್ಪ ಅವರು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿರುವ ಕೆ ಎಸ್ ಈಶ್ವರಪ್ಪ ಚುನಾವಣಾ ಕಚೇರಿ ಎದುರು ನಿಂಬೆಹಣ್ಣು ಕುಂಕುಮ ಹಾಕಿ ವಾಮಾಚಾರ ನಡೆಸಿದ್ದಾರೆ. ಇತ್ತೀಚಿಗೆ ನೂತನ ಚುನಾವಣೆ ಕಚೇರಿಯನ್ನು ತೆರೆದಿದ್ದರು. ಇವತ್ತು ಕಚೇರಿಯ ಮುಂಭಾಗದಲ್ಲಿ ಕಿಡಿಗೇಡಿಗಳು, ಕಚೇರಿ ಎದುರು ನಿಂಬೆಹಣ್ಣು ಕುಂಕುಮ ಹಾಕಿ ವಾಮಾಚಾರ ನಡೆಸಿದ್ದಾರೆ ಎಂದು ಹೇಳಲಾಗೂತ್ತಿದೆ.
ತಮ್ಮ ಮಗನಿಗೆ ಲೋಕಸಭೆ ಟಿಕೆಟ್ ಕೈತಲು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರೇ ಕಾರಣ ಎಂದು ಬಿಎಸ್ ಯಡಿಯೂರಪ್ಪ ಹಾಗೂ ಅವರ ಪತ್ರರಾದ ಬಿ ವೈ ವಿಜಯೇಂದ್ರ ಹಾಗೂ ಬಿ ವೈ ರಾಘವೇಂದ್ರ ವಿರುದ್ಧ ಕೆಎಸ್ ಈಶ್ವರಪ್ಪ ಕಿಡಿ ಕಾರಿದ್ದರು. ಪ್ರಧಾನಿ ಮೋದಿ ಫೋಟೋ ಬಳಕೆ ವಿಚಾರಕ್ಕೆ ಸಂಬಂಧಿಸಿದಂತೆ ಇತ್ತೀಚಿಗೆ ಅವರನ್ನು ಪಕ್ಷದಿಂದ ಉಚ್ಚಾಟನೆ ಕೂಡ ಮಾಡಲಾಗಿತ್ತು.