ಬೆಳಗಾವಿ : ಬೆಳಗಾವಿಯಲ್ಲಿ 4500 ಕೋಟಿ ರೂಪಾಯಿ ವಂಚನೆ ಆರೋಪ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಾಕ್ಷಿ ನಾಶ ಮಾಡಲು ಯತ್ನಿಸಿದ್ದ ಆರೋಪಿಯನ್ನು ಇದೀಗ ಪೊಲೀಸ್ ಅರೆಸ್ಟ್ ಮಾಡಿದ್ದಾರೆ. ಮಹಾರಾಷ್ಟ್ರ ಮೂಲದ ಓಂಕಾರ್ ಎಂಬ ಯುವಕನನ್ನಿ ಮಾಳ ಮಾರುತಿ ಠಾಣೆ ಪೋಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಆಕ್ಸ್ಯುಮಿನ್ ಆಪ್ ನ ತಾಂತ್ರಿಕ ವಿಭಾಗವನ್ನು ಓಂಕಾರ್ ನೋಡಿಕೊಳ್ಳುತ್ತಿದ್ದ ಈ ಒಂದು ಆಪ್ ನಲ್ಲಿರುವ ಡೇಟಾ ಅಳಿಸಿ ಹಾಕಲು ಓಂಕಾರ್ ಯತ್ನಿಸಿದ್ದಾನೆ. ಆರೋಪಿಯನ್ನು ಸಿಐಡಿ ಅಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಪ್ರಮುಖ ಆರೋಪಿ ಶಿವಾನಂದ ನೀಲಣ್ಣನವರ್ ಎಲ್ಲಾ ಹಣದ ವ್ಯವಹಾರ ಹೂಡಿಕೆದಾರರ ಡೇಟಾ ನಿರ್ವಹಣೆ ಆರೋಪಿ ಓಂಕಾರ್ ಮಾಡುತ್ತಿದ್ದ. ಶಿವಾನಂದ ಮನೆಯ ಮೇಲೆ ದಾಳಿ ಆಗುತ್ತಿದ್ದಂತೆ ಈತ ಆಪ್ ಕ್ಲೋಸ್ ಮಾಡಲು ಯತ್ನಿಸಿದ್ದಾನೆ ಸಾಕ್ಷಿ ನಕ್ಷಕ್ಕೆ ಯತ್ನಿಸುತ್ತಿದ್ದ ಓಂಕಾರ್ ರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.








