ಬಳ್ಳಾರಿ: ಗಣಿನಾಡು ಬಳ್ಳಾರಿ ನಗರದ ವಿಧಾನಸಭಾ ಕ್ಷೇತ್ರದ ಟಿಕೆಟ್ ಗಾಗಿ ಬಿಗ್ ಫೈಟ್ ಶುರುವಾಗಿದೆ.ಹಲವು ನಾಯಕರು ಹಾಗೂ ಮುಖಂಡರ ಮಧ್ಯೆ ಪೈಪೋಟಿ ಶುರುವಾಗಿದೆ. ಅಷ್ಟರ ಮಟ್ಟಿಗೆ ಬಳ್ಳಾರಿಯಲ್ಲಿ ಕಾಂಗ್ರೇಸ್ ಪೈಪೋಟಿಯಿದೆ. ಇದೀಗ ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೇಸ್ ಟಿಕೆಟ್ ಗಾಗಿ ಬಿಗ್ ಪೈಟ್ ಶುರುವಾಗಿದೆ.
BIGG NEWS : ಶಂಕಿತ ಉಗ್ರ ‘ಶಾರೀಕ್ ಆಸ್ಪತ್ರೆಯಲ್ಲಿ ಸಾವು- ಬದುಕಿನ ನರಳಾಟ’ : ಪೊಲೀಸರಲ್ಲಿ ಹೆಚ್ಚಿದ ಟೆನ್ಷನ್
ಕೆಪಿಸಿಸಿ ಟಿಕೆಟ್ ಆಕ್ಷಾಂಕಿಗಳಿಂದ ಅರ್ಜಿ ಆಹ್ವಾನ ಮಾಡುತ್ತಿದ್ದಂತೆ, ಕೈ ನಾಯಕರು ಟಿಕೇಟ್ಗಾಗಿ ಪೈಪೋಟಿ ಶುರು ಮಾಡಿದ್ದಾರೆ. ಬಳ್ಳಾರಿ ನಗರ ಕ್ಷೇತ್ರದ ಟಿಕೇಟ್ ಗಾಗಿ ಮಾಜಿ ಶಾಸಕರು, ಮಾಜಿ ಶಾಸಕರ ಪುತ್ರರು, ಮೇಯರ್, ಮಾಜಿ ಮೇಯರ್. ಅಷ್ಟೇ ಅಲ್ಲದೆ ಡಿಕೆಶಿ, ಸಿದ್ದರಾಮಯ್ಯ, ಖರ್ಗೆ ಆಪ್ತರು ಟಿಕೆಟ್ಗೆ ಅರ್ಜಿ ಸಲ್ಲಿಕೆ ಮಾಡಿ ತಮಗೆ ಟಿಕೆಟ್ ಸಿಗುತ್ತೆ ಎಂದು ಪೈಪೋಟಿಗೆ ಇಳಿದಿದ್ದಾರೆ. ಕಾಂಗ್ರೆಸ್ ಟಿಕೆಟ್ಗಾಗಿ ಈಗಾಗಲೇ ಅರ್ಜಿ ಸಲ್ಲಿಕೆ ಮಾಡಿರುವ ಕೈ ನಾಯಕರು ತಮಗೇ ಟಿಕೇಟ್ ಸಿಗುತ್ತದೆ ಎನ್ನುತ್ತಿದ್ದಾರೆ. ಜೊತೆಗೆ ಚುನಾವಣೆ ಘೋಷಣೆಗೂ ಮುನ್ನವೇ ಈಗಿನಿಂದಲೇ ನಗರದೆಲ್ಲೆಡೆ ಪ್ರಚಾರವನ್ನು ಶುರು ಮಾಡಿದ್ದಾರೆ. ಕೆಲವರು ಡಿಕೆಶಿವಕುಮಾರ್. ಸಿದ್ದರಾಮಯ್ಯ. ಖರ್ಗೆ ಪ್ರಭಾವದಿಂದ ಟಿಕೇಟ್ ಸಿಗುತ್ತೆ ಎಂದು ಕಾಯುತ್ತಿದ್ದಾರೆ.