ಬೆಳಗಾಗಿ: ಉಮೇಶ್ ಕತ್ತಿ ಸಹೋದರ ರಮೇಶ್ ಕತ್ತಿ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು, ಸದ್ಯ ಅವರನ್ನು ಸ್ಥಳದಲ್ಲಿರುವ ವೈದ್ಯರು ಇಸಿಜಿ ಟೆಸ್ಟ್ ಮಾಡಿರೋದಾಗಿ ತಿಳಿದು ಬಂದಿದೆ. ಸದ್ಯ ಉಮೇಶ್ ಕತ್ತಿಯವರ ಪಾರ್ಥಿವ ಶರೀರವನ್ನು ಅವರ ಫಾರ್ಮ್ ಹೌಸ್ನಲ್ಲಿರುವ ಮನೆಗೆ ತೆಗೆದುಕೊಂಡು ಹೋಗಲಾಗಿದ್ದು, ಅಲ್ಲಿ ಕುಟುಂಬಸ್ಥರು, ಸ್ವಾಮೀಜಿಯವರು ಕುಟಂಬದ ಪದ್ದತಿಯಂತೆ ಪೂಜೆಯನ್ನು ನಡೆಸಿದ ಬಳಿಕ ಮತ್ತೆ ಉಮೇಶ್ ಕತ್ತಿರುವ ಅಂತ್ಯಸಂಸ್ಕಾರಕ್ಕಾಗಿ ನಿಗದಿ ಮಾಡಿರುವ ಜಾಗದಲ್ಲಿ ಅಂತಿಮ ವಿಧಿವಿದಾನ ನೇರವೇರಲಿದೆ.
ಉಮೇಶ್ ಕತ್ತಿಯವರ ಫಾರ್ಮ್ ಹೌಸ್ನಲ್ಲಿ ಅವರ ತಂದೆ ತಾಯಿ ಅವರ ಸಮಾಧಿ ಪಕ್ಕದಲ್ಲಿ ಅವರ ಅಂತ್ಯಕ್ರಿಯೆಯನ್ನು ವೀರಶೈವ ಲಿಂಗಾಯತ ಸಂಪ್ರದಾಯದಂತೆ ಗುರು ಹಿರಿಯರು, ಕುಟುಂಬ ವರ್ಗದವರು ಸೇರಿದಂತೆ ಸಾವಿರಾರು ಮಂದಿಯ ಅಶ್ರುತರ್ಪಣದಲ್ಲಿ ನೇರವೇರಿರಲಿದೇ ವೇಳೆ ಅಂತ್ಯ ಸಂಸ್ಕಾರದ ವೇಳೇ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂಗಳಾದ ಬಿ.ಎಸ್ ಯಡಿಯ್ಯೂರಪ್ಪ, ಸಿದ್ದರಾಮಯ್ಯ, ಸಚಿವರಾದ ಅರಗ ಜ್ಞಾನೇಂದ್ರ ಸೇರಿದಂತೆ ಇತರ ಶಾಸಕರು, ಸಚಿವರು ನೂರಾರು ರಾಜಕೀಯ ನಾಯಕರು ಇರಲಿದ್ದಾರೆ.