ಬೆಂಗಳೂರು: ಶಿಕ್ಷಕರ ಅರ್ಹತಾ ಪರೀಕ್ಷೆಯ (TET) ಫಲಿತಾಂಶವನ್ನು ಕೆಲ ಹೊತ್ತಿನಲ್ಲಿ ಪ್ರಕಟಿಸಲಾಗುವುದು ಅಂತ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಅವರು ಹೇಳಿದ್ದಾರೆ. ಈ ಬಗ್ಗೆ ಅವರು ಟ್ವಿಟ್ ಮಾಡಿದ್ದು, ಶಿಕ್ಷಕರ ಅರ್ಹತಾ ಪರೀಕ್ಷೆಯ (TET) ಫಲಿತಾಂಶವನ್ನು ಕೆಲ ಹೊತ್ತಿನಲ್ಲಿ ಪ್ರಕಟಿಸಲಾಗುವುದು. ಪತ್ರಿಕೆ 1ರಲ್ಲಿ 20,070 ಅಭ್ಯರ್ಥಿಗಳು ಹಾಗೂ ಪತ್ರಿಕೆ 2ರಲ್ಲಿ 41,857 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ ಅಂತ ತಿಳಿಸಿದ್ದಾರೆ.
ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ ರಾಜ್ಯಾದ್ಯಂತ ನವೆಂಬರ್ 06 ರಂದು ಸಾಂಗವಾಗಿ ನಡೆದಿತ್ತು. ಅಂದು 332913 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದಾರೆ. 28,471 ಅಭ್ಯರ್ಥಿಗಳು ಪರೀಕ್ಷೆಗೆ ಗೈರಾಗಿದ್ದಾರೆ ಎಂದು ರಾಜ್ಯ ಶಿಕ್ಷಣ ಇಲಾಖೆ ಮಾಹಿತಿ ನೀಡಿದೆ. ಬೆಂಗಳೂರು ದಕ್ಷಿಣದಲ್ಲಿ 3871, ಬೆಂಗಳೂರು ಉತ್ತರದಲ್ಲಿ 3555, ಬೆಂಗಳೂರು ಗ್ರಾಮೀಣ ಪ್ರದೇಶದಲ್ಲಿ 788 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಚಿತ್ರದುರ್ಗದಲ್ಲಿ 5492, ದಾವಣಗೆರೆಯಲ್ಲಿ 5473, ಕೋಲಾರ 3266, ಶಿವಮೊಗ್ಗ 4152, ತುಮಕೂರಿನಲ್ಲಿ 4229, ಚಿಕ್ಕಬಳ್ಳಾಪುರದಲ್ಲಿ 2495 ಮಧುಗಿರಿಯಲ್ಲಿ 1076, ಬಾಗಲಕೋಟೆಯಲ್ಲಿ 5438, ಬೆಳಗಾವಿ-5686, ವಿಜಯಪುರ- 9844, ಧಾರವಾಡ- 6640, ಗದಗ-3861 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಹಾವೇರಿಯಲ್ಲಿ 4233, ಉತ್ತರ ಕನ್ನಡದಲ್ಲಿ 1361 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು.