*ಅವಿನಾಶ್ ಆರ್ ಭೀಮಸಂದ್ರ
ಬೆಂಗಳೂರು: ರಾಜ್ಯದಲ್ಲಿ ಕರೋನ ಸೋಂಕು ಮತ್ತೆ ಹೆಚ್ಚಳ ಕಾಣುತ್ತಿದ್ದು, ಈ ನಿಟ್ಟಿನಲ್ಲಿ ರಾಜ್ಯ ಆರೋಗ್ಯ ಇಲಾಖೆ ಮತ್ತೆ ಮಾಸ್ಕ್ ಕಡ್ಡಾಯ ಮಾಡಿ ಆದೇಶವನ್ನು ಹೊರಡಿಸಿದೆ. ಸರ್ಕಾರಿ ಹಾಗೂ ಖಾಸಗಿ ಕಚೇರಿಗಳು ಲಾಡ್ಜ್,, ಹೋಟೆಲ್, ಕ್ಲಬ್, ರೆಸ್ಟೋರೆಂಟ್, ಪಬ್, ಛತ್ರಗಳು, ಸಿನಿಮಾ ಹಾಲ್, ವಿದ್ಯಾಸಂಸ್ಥೆಗಳು, ಸಾರ್ವಾಜನಿಕ ಸಾರಿಗೆ ವ್ಯವಸ್ಥೆಗಳಾದ ಬಸ್, ಮೆಟ್ರೋ, ಟ್ರೈನ್, ಶಾಪಿಂಗ್ ಮಾಲ್ಗಳಲ್ಲಿ ಸೇರಿದಂತೆ ಮಾರುಕಟ್ಟೆಗಳಲ್ಲಿ ಮಾಸ್ಕ್ ಕಡ್ಡಾಯ ಮಾಡಲಾಗಿದೆ ಅಂತ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ನಿರ್ದೇಶಗಳಲ್ಲಿ ಉಲ್ಲೇಖ ಮಾಡಿದೆ.
ಕರ್ನಾಟಕದಲ್ಲಿ ಕೋವಿಡ್ ಸೋಂಕಿತರ ಇಂದಿನ ಸಂಖ್ಯೆ ಹೀಗಿದೆ
▪️ರಾಜ್ಯದಲ್ಲಿ ಹೊಸ ಪ್ರಕರಣಗಳು: 659
▪️ಬೆಂಗಳೂರು ಹೊಸ ಪ್ರಕರಣಗಳು: 450
▪️ಪಾಸಿಟಿವಿಟಿ ದರ: 5.29%
▪️ಡಿಸ್ಚಾರ್ಜ್: 1,192 (ಬೆಂಗಳೂರು637)
▪️ಸಾವು: 2
▪️ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳು: 7,324
▪️ಬೆಂಗಳೂರು ಸಕ್ರಿಯ ಪ್ರಕರಣಗಳು: 4,723
▪️ಟೆಸ್ಟ್: 12,442