ನವದೆಹಲಿ : ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್ (ICSE ) ನಾಳೆ ಸಂಜೆ 5 ಗಂಟೆಗೆ 10ನೇ ತರಗತಿಯ ಫಲಿತಾಂಶವನ್ನು ಪ್ರಕಟಿಸುವುದಾಗಿ CISCE ಘೋಷಿಸಿದೆ.
ವೈಯಕ್ತಿಕ ಅಭ್ಯರ್ಥಿಗಳು ಕೌನ್ಸಿಲ್ನ ವೆಬ್ಸೈಟ್ www.cisce.org ಅಥವಾ www.results.cisce.org ಗೆ ಭೇಟಿ ನೀಡುವ ಮೂಲಕ ಫಲಿತಾಂಶ ನೋಡಬೋದು.
ICSE Class 10th result to be declared tomorrow at 5 pm pic.twitter.com/mjE0fUP8MR
— ANI (@ANI) July 16, 2022
ಸಿಐಎಸ್ಇ ತರಗತಿ 10ನೇ ತರಗತಿ ಫಲಿತಾಂಶ ಪರಿಶೀಲಿಸುವುದು ಹೇಗೆ..?
ಹಂತ 1: ಕೌನ್ಸಿಲ್ನ ವೆಬ್ಸೈಟ್ ಮುಖಪುಟದಲ್ಲಿ, ‘ಫಲಿತಾಂಶಗಳು 2022’ ಲಿಂಕ್ ಕ್ಲಿಕ್ ಮಾಡಿ
ಹಂತ 2: ಐಸಿಎಸ್ಇ / ಐಎಸ್ಸಿ ವರ್ಷ 2022 ರ ಪರೀಕ್ಷಾ ಫಲಿತಾಂಶಗಳನ್ನ ಪ್ರವೇಶಿಸಲು, ಅಭ್ಯರ್ಥಿಯು ಕೋರ್ಸ್ ಆಯ್ಕೆಯಿಂದ ಅನ್ವಯವಾಗುವಂತೆ ಐಸಿಎಸ್ಇ ಆಯ್ಕೆ ಮಾಡಬೇಕು.
ಹಂತ 3: ಐಸಿಎಸ್ಇ ವರ್ಷ 2022ರ ಪರೀಕ್ಷಾ ಫಲಿತಾಂಶಗಳನ್ನ ಪ್ರವೇಶಿಸಲು, ಅಭ್ಯರ್ಥಿಯು ಅವನ / ಅವಳ ವಿಶಿಷ್ಟ ಐಡಿ, ಸೂಚ್ಯಂಕ ಸಂಖ್ಯೆಯನ್ನ ನಮೂದಿಸಬೇಕು. ನಂತ್ರ ಪರದೆಯ ಮೇಲೆ ತೋರಿಸಿರುವಂತೆ ಕ್ಯಾಪ್ಚಾ ನಮೂದಿಸಿ.
ಹಂತ 4: ಈಗ ಪರದೆಯ ಮೇಲೆ ಫಲಿತಾಂಶ ಕಾಣಿಸುತ್ತೆ.