*ಅವಿನಾಶ್ ಆರ್ ಭೀಮಸಂದ್ರ
ಬೆಂಗಳೂರು: ತಮ್ಮ ಪುತ್ರ ವಿಜೇಂದ್ರ ಶಿಕಾರಿಪುರ ವಿಧಾನಸಭ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧೆ ಮಾಡಲಿದ್ದಾರೆ ಅಂತ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ಹೇಳಿದ್ದು, ಈ ಮೂಲಕ ತಮ್ಮ ರಾಜಕೀಯ ನಿವೃತ್ತಿ ಬಗ್ಗೆ ಪರೋಕ್ಷ ನಿವೃತ್ತಿಯನ್ನು ಸೂಚನೆ ನೀಡಿದ್ದಾರೆ. ಅವರು ಇಂದು ಶಿಕಾರಿಪುರ ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡುತ್ತ ಈ ಬಗ್ಗೆ ತಿಳಿಸಿದ್ದು, ನಾನು ಶಿಕಾರಿಪುರವನ್ನು ಖಾಲಿ ಮಾಡುತ್ತಿದ್ದು, ನನ್ನ ಪುತ್ರ ವಿಜೇಂದ್ರ ಶಿಕಾರಿಪುರದಿಂದ ಸ್ಪರ್ಧೆ ಮಾಡಲಿದ್ದಾರೆ ಅಂತ ತಿಳಿಸಿದ್ದಾರೆ.
2023ರಲ್ಲಿ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಲ್ಲಿರುವ ಹಿರಿಯ ನಾಯಕರುಗಳಿಗೆ ಟಿಕೇಟ್ ಸಿಗುವುದು ಅನುಮಾನ ಎನ್ನಲಾಗುತ್ತಿದ್ದು, ಈ ನಿಟ್ಟಿನಲ್ಲಿ ಹಲವು ಬಿಜೆಪಿ ಹಿರಿಯ ನಾಯಕರುಗಳು ತಮ್ಮ ಪುತ್ರರಿಗೆ ಟಿಕೆಟ್ ದೊರಕಿಸಲು ಮುಂದಾಗಿದ್ದು, ಈ ನಿಟ್ಟಿನಲ್ಲಿ ಹೈಕಮಾಂಡ್ ಮೇಲೆ ಎಲ್ಲಾ ರೀತಿಯಲ್ಲಿ ತಮ್ಮ ಶಕ್ತಿಯನ್ನು ತೋರಿಸುತ್ತಿದ್ದಾರೆ. ಈ ಹಿಂದೆ ಅಪರೇಶ್ ಕಮಲದ ಬಳಿಕ ನಡೆದ ಉಪಚುನಾವಣೆಯಲ್ಲಿ ಕೆ.ಆರ್ ಪೇಟೆಯಲ್ಲಿ ವಿಜೇಂದ್ರ ಸಕ್ರಿಯವಾಗಿ ಕಾಣಿಸಿಕೊಂಡಿದ್ದರು ಈ ಕಾರಣಿಂದ ಕೆ.ಆರ್ ಪೇಟೆಯಿಂದ ವಿಜೇಂದ್ರ ಅವರು ಸ್ಪರ್ಧೆ ಮಾಡುತ್ತಾರೆ ಅಂತ ಊಹಿಸಲಾಗುತಿತ್ತು, ಆದರೆ ಈಗ ವಿಜೇಂದ್ರ ಅವರಿಗೆ ಶಿಕಾರಿ ಪುರದಿಂದ ಅಧಿಕೃತವಾಗಿ ಟಿಕೆಟ್ ನೀಡುವ ಬಗ್ಗೆ ಮಾಜಿ ಸಿಎಂ ಯಡಿಯೂರಪ್ಪನವರು ಹೇಳಿರುವುದು ಹಲವು ಗೊಂದಲಗಳಿಗೆ ಕಾರಣವಾಗಿದೆ. ಸದ್ಯ ಬಿಎಸ್ ಯಡಿಯೂರಪ್ಪನವರು ಶಿಕಾರಿಪುರದಿಂದ ಸ್ಪರ್ಧೆ ಮಾಡದೇ ಇರುವುದು ಅವರ ರಾಜಕೀಯ ವಿಶ್ರಾಂತಿ ಸೂಚನೆ ಎನ್ನಲಾಗುತ್ತಿದ್ದು, ಮುಂಬರುವ ದಿನದಲ್ಲಿ ಬಿಎಸ್ ಯಡಿಯೂರಪ್ಪನವರೇ ಈ ಬಗ್ಗೆ ಮಾಹಿತಿ ನೀಡಲಿದ್ದಾರೆ ಎನ್ನಲಾಗುತ್ತಿದೆ.
ಮಂಗಳೂರು ವಿದ್ಯಾರ್ಥಿಗಳ ‘ಕಿಸ್ಸಿಂಗ್ ಸ್ಪರ್ಧೆ’ : 8 ವಿದ್ಯಾರ್ಥಿಗಳ ಮೇಲೆ ಪೋಕ್ಸೊ ಪ್ರಕರಣ ದಾಖಲು | POCSO case