ನವದೆಹಲಿ: ರಾಷ್ಟ್ರಪತಿ ಚುನಾವಣೆಯ ಮತಗಳ ಎಣಿಕೆ ನಡೆಯುತ್ತಿದೆ, ಎಲ್ಲರ ಚಿತ್ತ ದೇಶದ ಸಂಸತ್ತಿನ ಕಡೆಗೆ ನೆಟ್ಟಿದೆ. ಈ ನಡುವೆ ಮತ ಪತ್ರಗಳ ಏಣಿಕೆ ಕಾರ್ಯ ಸುಗಮವಾಗಿ ಸಾಗಿದೆ. ಸಂಸದರ ಮತಗಳನ್ನು ಮೊದಲು ಎಣಿಕೆ ಮಾಡಿದ್ದರಿಂದ ಎನ್ಡಿಎಯ ದ್ರೌಪದಿ ಮುರ್ಮು ಗಮನಾರ್ಹ ಮುನ್ನಡೆಯನ್ನು ಪಡೆದುಕೊಂಡಿದ್ದಾರೆ ಎನ್ನಲಾಗಿದೆ.
ಒಟ್ಟು 748 ಮತಗಳಲ್ಲಿ ದ್ರೌಪದಿ ಮುರ್ಮು 540 ಮತಗಳನ್ನು ಪಡೆದರೆ, ಯಶವಂತ್ ಸಿನ್ಹಾ 204 ಮತಗಳನ್ನು ಪಡೆದಿದ್ದರು. ಮಧ್ಯಾಹ್ನ 1.30ರ ಸುಮಾರಿಗೆ ಸಂಸತ್ ಭವನದಲ್ಲಿ ಮತ ಎಣಿಕೆ ಪ್ರಾರಂಭವಾಯಿತು. ಸಂಜೆ 4ಗಂಟೆ ಸುಮಾರಿಗೆ ಫಲಿತಾಂಶಗಳನ್ನು ನಿರೀಕ್ಷಿಸಲಾಗಿದೆ. ಇಂದು ಬೆಳಿಗ್ಗೆ 11 ಗಂಟೆಗೆ ಪ್ರಕ್ರಿಯೆ ಪ್ರಾರಂಭವಾಯಿತು, ಮತ್ತು ಎಣಿಕೆಯನ್ನು ಪ್ರಾರಂಭಿಸುವ ಮೊದಲು ಎಲ್ಲಾ ರಾಜ್ಯಗಳ ಮತಪೆಟ್ಟಿಗೆಗಳನ್ನು ತೆರೆಯಲಾಯಿತು.
ದ್ರೌಪದಿ ಮುರ್ಮು 3,78,000 ಮೌಲ್ಯದ 540 ಮತಗಳನ್ನು ಗಳಿಸಿದ್ದಾರೆ ಮತ್ತು ಯಶವಂತ್ ಸಿನ್ಹಾ 1,45,600 ಮೌಲ್ಯದ 208 ಮತಗಳನ್ನು ಪಡೆದಿದ್ದಾರೆ. ಒಟ್ಟು ೧೫ ಮತಗಳು ಅಸಿಂಧುವಾಗಿದ್ದವು. ಇವು ಸಂಸತ್ತಿನ ಅಂಕಿಅಂಶಗಳು ಆಗಿದ್ದು (ಮತಗಳು), ದಯವಿಟ್ಟು ಮುಂದಿನ ಘೋಷಣೆಗಾಗಿ ಕಾಯಿರಿ – ರಾಜ್ಯಸಭೆಯ ಪ್ರಧಾನ ಕಾರ್ಯದರ್ಶಿ, ಪಿ.ಸಿ.ಮೋದಿ ಹೇಳಿದ್ದಾರೆ.