ಬೆಂಗಳೂರು : ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳ ಕಿರುಕುಳಕ್ಕೆ ಬೇಸತ್ತು ಕಳೆದ ಹಲವು ತಿಂಗಳಿನಿಂದ ಸರಣಿ ಆತ್ಮಾತ್ಯ ಪ್ರಕರಣಗಳು ನಡೆದಿದೆವು ಈ ಒಂದು ಆತ್ಮಹತ್ಯೆ ತಡೆಗೆ ರಜೆ ಸರ್ಕಾರ ಸುಗ್ರೀವಾಜ್ಞೆ ಜಾರಿಗೊಳಿಸಿತ್ತು. ಇದೀಗ ವಿಧಾನಸಭೆಯಲ್ಲಿ ಮೈಕ್ರೋ ಫೈನಾನ್ಸ್ ವಿಧೇಯಕ ಅಂಗೀಕಾರ ಗೊಳಿಸಲಾಯಿತು.
ಹೌದು ಇಂದು ವಿಧಾನಸಭೆಯಲ್ಲಿ ಮೈಕ್ರೋ ಫೈನಾನ್ಸ್ ವಿಧೇಯಕ ಅಂಗೀಕಾರವಾಗಿದ್ದು, ಕಿರು ಮೈಕ್ರೋಸಾಲ, ಸಣ್ಣ ಸಾಲದ ಕಿರುಕುಳ ತಡೆ ಕುರಿತು ವಿಧೇಯಕವನ್ನು ಸ್ಪೀಕರ್ ಯುಟಿ ಖಾದರ್ ಅಂಗೀಕಾರ ಮಾಡಿದರು.ಇತ್ತೀಚಿಗೆ ಸಚಿವ ಪ್ರಿಯಾಂಕ್ ಖರ್ಗೆ ಮೈಕ್ರೋ ಫೈನಾನ್ಸ್ ತಡೆಗೆ ಮಸೂದೆಯನ್ನು ಮಂಡನೆ ಮಾಡಿದ್ದರು. ಇದೀಗ ಮೈಕ್ರೋ ಫೈನಾನ್ಸ್ ವಿದೇಯಕವನ್ನು ಸ್ಪೀಕರ್ ಯುಟಿ ಖಾದರ್ ಅಂಗೀಕರಿಸಿದ್ದಾರೆ.