ಬೆಂಗಳೂರು : ಹಿಂದಿನ ಬಿಜೆಪಿ ಸರ್ಕಾರ ಮಾಡಿರುವ ಭೂ ಸುಧಾರಣಾ ಕಾಯ್ದೆ 2020ಕ್ಕೆ ರೈತರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಆದ್ದರಿಂದ ರೈತರ ಹಕ್ಕೋತ್ತಾಯಗಳನ್ನು ಗಂಭೀರವಾಗಿ ಪರಿಗಣಿಸಿ, ಕಾಯ್ದೆಗೆ ತಿದ್ದುಪಡಿ ತರಲಾಗುವುದು. ರೈತ ಸಂಘವು ನೀಡಿದ ಮನವಿಯಲ್ಲಿ ಸಾಧ್ಯವಾಗುವ ಎಲ್ಲ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಸ್ವಾತಂತ್ರ್ಯ ಉದ್ಯಾನವನದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ರೈತನಾಯಕ ಪ್ರೊ. ಎಂ.ಡಿ ನಂಜುಂಡಸ್ವಾಮಿ ಅವರ 88 ನೇ ಜನ್ಮ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ರೈತ ಸಮಾವೇಶದಲ್ಲಿ ಮಾತನಾಡಿದ ಅವರು ರೈತರ ಮನವಿ ಸ್ವೀಕರಿಸಿ ಅವರು ಮಾತನಾಡಿದರು.ಈ ಹಿಂದಿನ ಬಿಜೆಪಿ ಸರ್ಕಾರ ಜಾರಿ ಮಾಡಿರುವ ರೈತ ವಿರೋಧಿ ‘ಭೂ ಸುಧಾರಣೆ ಕಾಯ್ದೆ – 2022’ ಕ್ಕೆ ತಿದ್ದುಪಡಿ ತರಲಾಗುವುದು. ರೈತರ ಬೇಡಿಕೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಭರವಸೆ ನೀಡಿದರು.
ರೈತರು, ಶಿಕ್ಷಕರು. ಸೈನಿಕರನ್ನು ಯಾವಾಗಲು ಸ್ಮರಿಸಬೇಕು, ರೈತರಿಗೆ ವಧು ಸಿಗುತ್ತಿಲ್ಲ. ಕೃಷಿಯನ್ನು ಲಾಭದಾಯಕವಾದರೆ ಸಮಸ್ಯೆಗೆ ಪರಿ ಹಾರ ಸಿಗಬಹುದು ಎಂದು ಅಭಿಪ್ರಾಯಪಟ್ಟರು. ಆರೋಗ್ಯಕರ ಸಮಾಜಕ್ಕೆ ಹೋರಾಟಗಳು ಅಗತ್ಯವಾಗಿದೆ. ಹೋರಾಟದಿಂದ ಸರ್ಕಾರಗಳನ್ನು ಆಗಾಗ್ಗೆ ಎಚ್ಚರಿಸುವುದು ಅಗತ್ಯವಾಗಿದೆ. ನೀವೆಲ್ಲಾ ಕೋಮುವಾದಿಗಳ ವಿರುದ್ಧ ನಿಲುವು ತೆಗೆದುಕೊಂಡಿ ರುವುದು ಸ್ವಾಗತಾರ್ಹವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಎಂ.ಡಿ ನಂಜುಂಡ ಸ್ವಾಮಿಯವರು ಕೊನೆಯವರೆಗೂ ರೈತರೊಂದಿಗೆ ಪರವಾಗಿದ್ದರು. ಇವರು ಬೆಳೆಸಿದ ರೈತ ಚಳವಳಿ ರೈತರ ಸಮಸ್ಯೆ ಮಹಾರಕ್ಕೆ ಆಸರೆ ಆಯಿತು. ರೈತ ಹೋರಾಟ ಮತ್ತು ರೈತ ಸಮಾವೇಶಗಳಲ್ಲಿ ಭಾಗವಹಿಸುವುದು ನನಗೂ ಬಹಳ ಸಂತಸ ಮತ್ತು ಹೆಮ್ಮೆಯ ವಿಷಯವಾಗಿದೆ. ನಂಜುಂಡಸ್ವಾಮಿ ಅವರ ರೈತ ಹೋರಾಟ ನನಗೆ ರಾಜಕೀಯಕ್ಕೆ ಪ್ರೇರಣೆಯಾಗಿದೆ ನಾನು ರಾಜಕೀಯವಾಗಿ ಬೆಳೆಯಲು ನಂಜುಂಡಸ್ವಾಮಿ ಕಾರಣ ಎಂದರು.