ನವದೆಹಲಿ : ಪಾಕಿಸ್ತಾನದಿಂದ ಏರ್ ಸ್ಟ್ರೈಕ್ ಹಿನ್ನೆಲೆ ಐಪಿಎಲ್ ಪಂದ್ಯಗಳನ್ನು ಮುಂದೂಡಲಾಗಿತ್ತು. ಇದೀಗ ಮೇ 16 ರಿಂದ ಐಪಿಎಲ್ ಮುಂದಿನ ಪಂದ್ಯಗಳು ಪುನಾರಂಭವಾಗುವ ಸಾಧ್ಯತೆ ಇದೆ. ಈ ಕುರಿತು ಬಿಸಿಸಿಐಯಿಂದ ಅಧಿಕೃತ ಮಾಹಿತಿಯಷ್ಟೇ ಹೊರಬೀಳಬೇಕಿದೆ. ಈಗಾಗಲೇ ಬಹುತೇಕ ಐಪಿಎಲ್ ಪಂದ್ಯಗಳು ಮುಗಿದಿದ್ದು ಇನ್ನೂ 16 ಪಂದ್ಯಗಳು ಮಾತ್ರ ಬಾಕಿ ಇವೆ. ಇದೀಗ ಮೇ 16ರಂದು ಮತ್ತೆ ಐಪಿಎಲ್ ಪಂದ್ಯಗಳು ಪುನರಾರಂಭ ಹಾಗೂ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ಕದನ ವಿರಾಮ ಒಪ್ಪಂದದ ಒಂದು ದಿನದ ನಂತರ ಮತ್ತು ಒಂದು ವಾರದವರೆಗೆ ಸ್ಥಗಿತಗೊಳಿಸಿದ ಎರಡು ದಿನಗಳ ನಂತರ ಇಂಡಿಯನ್ ಪ್ರೀಮಿಯರ್ ಲೀಗ್‌ನ 18 ನೇ ಆವೃತ್ತಿಯನ್ನು ಪುನರಾರಂಭಿಸುವ ಸಾಧ್ಯತೆ ಇದೆ ಎಂದು ಬಲಮೂಲಗಳಿಂದ ತಿಳಿದು ಬಂದಿದೆ. ಭದ್ರತಾ ಕಾರಣಗಳಿಂದಾಗಿ ಧರ್ಮಶಾಲಾದಲ್ಲಿ ಪಂಜಾಬ್ ಕಿಂಗ್ಸ್ ಮತ್ತು ದೆಹಲಿ ಕ್ಯಾಪಿಟಲ್ಸ್ ಪಂದ್ಯವನ್ನು ಅರ್ಧಕ್ಕೆ ರದ್ದುಗೊಳಿಸಬೇಕಾದ ಕಾರಣ ಐಪಿಎಲ್ ಸ್ಥಗಿತಗೊಂಡಿದೆ.
ಅಲ್ಲದೆ ಬಿಸಿಸಿಐ ವಿದೇಶಿ ಆಟಗಾರರಿಗೆ ತಮ್ಮ ತಾಯ್ನಾಡಿಗೆ ತೆರಳುವಂತೆ ಸೂಚನೆ ನೀಡಿತ್ತು. ಇದೀಗ ನಿನ್ನೆ ಪಾಕಿಸ್ತಾನ ಮತ್ತು ಭಾರತ ನಡುವೆ ಕದನ ವಿರಾಮ ಗೌರಿ ಸಿದ್ದರ ಹಿನ್ನೆಲೆಯಲ್ಲಿ ಇದೀಗ ಮೇ 16ರಂದು ಐಪಿಎಲ್ ಉಳಿದ ಪಂದ್ಯಗಳು ಪುನರಂಭವಾಗಲಿವೆ. ಹಾಗೂ ಮೇ 31ರಂದು ಫೈನಲ್ ಪಂದ್ಯ ನಡೆಯುವ ಸಾಧ್ಯತೆ ಇದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಒಂದು ವಾರಗಳ ಕಾಲ ಐಪಿಎಲ್ ಟೂರ್ನಿಯನ್ನು ಬಿಸಿಸಿಐ ಮುಂದೂಡಿತ್ತು. ಆಟಗಾರರ ಸುರಕ್ಷತೆ ದೃಷ್ಟಿಯಿಂದ ಐಪಿಎಲ್ ಟೂರ್ನಿಯನ್ನು ಮುಂದೂಡಲಾಗಿತ್ತು.
ಇನ್ನೂ ಐಪಿಎಲ್ ಟೂರ್ನಿಯ 16 ಪಂದ್ಯಗಳು ನಡೆಯಬೇಕಿದೆ. ಮೇ 16 ಅಥವಾ ಮೇ 17ರಂದು ಆರ್ಸಿಬಿ ಮತ್ತು ಲಕ್ನೌ ನಡುವೆ ಪಂದ್ಯ ನಡೆಯುವ ಸಾಧ್ಯತೆ ಇದೆ. ಮೈ 8 ರಂದು ಪಂಜಾಬ್ ಮತ್ತು ದೆಹಲಿ ಪಂದ್ಯ ಅರ್ಧಕ್ಕೆ ಮೊಟಕುಗೊಳಿಸಲಾಗಿತ್ತು. ಮೇ 8 ರಂದು ಧರ್ಮಶಾಲಾ ಮೈದಾನದಲ್ಲಿ ಐಪಿಎಲ್ ಪಂದ್ಯ ನಡೆಯುತ್ತಿದ್ದ ವೇಳೆ ಅರ್ಧಕ್ಕೆ ನಿಲ್ಲಿಸಲಾಗಿತ್ತು. ಹಾಗಾಗಿ ಇದೀಗ ಮೇ 16 ರಿಂದ ಐಪಿಎಲ್ ಟೂರ್ನಿಯ ಪಂದ್ಯಗಳು ಪುನರಾರಂಭ ಹಾಗೂ ಸಾಧ್ಯತೆ ಇದೆ ಎನ್ನಲಾಗುತ್ತಿದೆ.