ಬೆಂಗಳೂರು: ರಾಜ್ಯ ಸರ್ಕಾರದಿಂದ ಶೇ.50ರಷ್ಟು ರಿಯಾಯಿತಿಯಲ್ಲಿ ವಾಹನಗಳ ಸಂಚಾರ ನಿಯಮ ಉಲ್ಲಂಘನೆಯ ದಂಡವನ್ನು ಪಾವತಿಸೋದಕ್ಕೆ ಮತ್ತೆ ಅವಕಾಶ ನೀಡಿದೆ. ಈ ಬೆನ್ನಲ್ಲೇ ಆನ್ ಲೈನ್ ವಂಚಕರ ಜಾಲವೂ ಸಕ್ರೀಯವಾಗಿದೆ. ಆರ್ ಟಿ ಓ ಚಲನ್ ಎಂಬುದಾಗಿ ಆಪ್ ಫೈಲ್ ಬಂದಿದ್ದರೇ ಕ್ಲಿಕ್ ಮಾಡಬೇಡಿ ಎಂಬುದಾಗಿ ಇಲಾಖೆ ಎಚ್ಚರಿಸಿದೆ.
ಈ ಕುರಿತಂತೆ ಸಾರಿಗೆ ಇಲಾಖೆಯಿಂದ ಮಾಹಿತಿ ನೀಡಲಾಗಿದ್ದು, ಆರ್.ಟಿ.ಓ ಚಲನ್ ಎಂದು ನಂಬಿಸಿ ವಂಚಿಸುತ್ತಾರೆ. ಎಚ್ಚರ..! ಯಾವುದೇ ಕಾರಣಕ್ಕೂ ಇಂಥ Apk ಫೈಲ್‌ಗಳ ಮೇಲೆ ಕ್ಲಿಕ್ ಮಾಡದಿರಿ ಎಂಬುದಾಗಿ ಮನವಿ ಮಾಡಿದೆ.
ಇನ್ನೂ ಒಂದು ವೇಳೆ ನೀವು ವಾಹನಗಳ ಸಂಚಾರ ನಿಯಮ ಉಲ್ಲಂಘನೆಯ ದಂಡದಲ್ಲಿ ಶೇ.50ರಷ್ಟು ರಿಯಾಯಿತಿ ಪಡೆದು, ಪಾವತಿಸೋದಕ್ಕೆ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡುವಂತೆ ತಿಳಿಸಿದೆ.
ವಾಹನ ಮಾಲೀಕರು ಆರ್ ಟಿ ಓ ಚಲನ್ ಎಂಬುದಾಗಿ ಬಂದಂತ Apk ಫೈಲ್ ಡೌನ್ ಲೋಡ್ ಮಾಡಿಕೊಂಡರೇ, ಮೊಬೈಲ್ ನಲ್ಲಿನ ಗೌಪ್ಯ ದತ್ತಾಂಶಗಳನ್ನು ಆನ್ ಲೈನ್ ಕಳ್ಳರು ಕದಿಯೋ ಸಾಧ್ಯತೆ ಇದೆ. ಆ ಬಳಿಕ ನಿಮ್ಮ ಬ್ಯಾಂಕ್ ಖಾತೆಗೂ ಕನ್ನ ಹಾಕೋ ಸಾಧ್ಯತೆಗಳಿವೆ. ಯಾವುದೇ ಕಾರಣಕ್ಕೂ ಆರ್ ಟಿ ಓ ಚಲನ್ ಗೆ ಸಂಬಂಧಿಸಿದಂತ ಆಪ್ ಡೌನ್ ಲೋಡ್ ಮಾಡಿಕೊಳ್ಳಬೇಡಿ ಅಂತ ಮನವಿ ಮಾಡಿದೆ.
ಆರ್.ಟಿ.ಓ ಚಲನ್ ಎಂದು ನಂಬಿಸಿ ವಂಚಿಸುತ್ತಾರೆ. ಎಚ್ಚರ..!
ಯಾವುದೇ ಕಾರಣಕ್ಕೂ ಇಂಥ Apk ಫೈಲ್‌ಗಳ ಮೇಲೆ ಕ್ಲಿಕ್ ಮಾಡದಿರಿ.#DontClickOnSuspiciousLinks#BeAwareBeSafe pic.twitter.com/2wvu1KlMBg
— DIPR Karnataka (@KarnatakaVarthe) November 21, 2025








