ನವದೆಹಲಿ: ನೀವು ವೆಬ್ಸೈಟ್ನಲ್ಲಿ ಉತ್ತಮ ಉದ್ಯೋಗ ಜಾಹೀರಾತನ್ನು ನೋಡಿದರೆ, ಇದರಲ್ಲಿ ಕೆಲಸ ಕಡಿಮೆ ಮತ್ತು ಸಂಬಳವು ಹೆಚ್ಚಾಗಿರುತ್ತದೆ ಅಲ್ವಾ? ಈ ರೀತಿಯ ಜಾಹಿರಾತು ನೋಡಿ ನಮ್ಮಲ್ಲಿ ಅನೇಕ ಮಂದಿ ಮೋಸಹೋಗಿದ್ದು, ಇದರ ಜೊತೆಗೆ ಹಣ ಸಮಯವನ್ನು ಕಳೆದುಕೊಳ್ಳುತ್ತಿರುವುದು ಕೂಡ ಹೆಚ್ಚಾಗುತ್ತಿದೆ.
ಒಟಿಪಿಯನ್ನು ಕೇಳುವ ಮೂಲಕ ಹಣವನ್ನು ಕದಿಯುವ ವಿಧಾನಗಳು ಈಗ ಹಳೆಯದಾಗಿವೆ. ಈಗ ದರೋಡೆಕೋರರು ಮೋಸ ಮಾಡಲು ಅನೇಕ ಹೊಸ ಮಾರ್ಗಗಳನ್ನು ಕಂಡುಕೊಂಡಿದ್ದಾರೆ. ಆನ್ ಲೈನ್ ವಂಚನೆಯನ್ನು ತಪ್ಪಿಸುವ ಮಾರ್ಗಗಳ ಬಗ್ಗೆ ನಾವು ನಿಮಗೆ ಮಾಹಿತಿಯನ್ನು ನೀಡುತ್ತಿದ್ದೇವೆ.
ಸೈಬರ್ ಕಳ್ಳರು ನಕಲಿ ಉದ್ಯೋಗ ಹುಡುಕುವ ವೆಬ್ ಸೈಟ್ ಗಳನ್ನು ಸೃಷ್ಟಿಸುತ್ತಾರೆ ಮತ್ತು ಅಲ್ಲಿ ನಕಲಿ ಉದ್ಯೋಗಗಳ ಬಗ್ಗೆ ಮಾಹಿತಿಯನ್ನು ಹಾಕುತ್ತಾರೆ. ಅನೇಕ ಜನರು ಈ ಕೆಲಸಗಳಿಗೆ ಅರ್ಜಿ ಸಲ್ಲಿಸುತ್ತಾರೆ. ನಂತರ ದರೋಡೆಕೋರರು ದೊಡ್ಡ ಕಂಪನಿಗಳ ಅಧಿಕಾರಿಗಳಾ ಹಾಗೇ ಜನರನ್ನು ಸಂದರ್ಶಿಸುತ್ತಾರೆ ಮತ್ತು ಅವರಿಗೆ ಉತ್ತಮ ಸಂಬಳದ ಉದ್ಯೋಗಗಳನ್ನು ನೀಡುವುದಾಗಿ ಹೇಳುತ್ತಾರೆ . ನಂತರ, ನೋಂದಣಿ, ತರಬೇತಿ ಅಥವಾ ಲ್ಯಾಪ್ಟಾಪ್ ನೀಡುವ ಹೆಸರಿನಲ್ಲಿ ಜನರನ್ನು ಹಣವನ್ನು ಕೇಳಲಾಗುತ್ತದೆ. ಒಬ್ಬ ವ್ಯಕ್ತಿಯು ಹಣವನ್ನು ವರ್ಗಾಯಿಸಿದ ತಕ್ಷಣ. ದರೋಡೆಕೋರರು ತಮ್ಮ ಮೊಬೈಲ್ ಸಂಖ್ಯೆಯನ್ನು ಸ್ವೀಚ್ ಆಫ್ ಮಾಡಿಕೊಂಡು ಬಿಡುತ್ತಾರೆ.
ಇದನ್ನು ತಪ್ಪಿಸುವುದು ಹೇಗೆ? ಯಾವುದೇ ಉದ್ಯೋಗದ ಪ್ರಸ್ತಾಪವನ್ನು ತೆಗೆದುಕೊಳ್ಳುವ ಮೊದಲು, ಅದನ್ನು ಪರಿಶೀಲಿಸಿ. ಆಫರ್ ಯಾವ ಸಂಖ್ಯೆ ಅಥವಾ ಮೇಲ್ ನಿಂದ ಬಂದಿದೆ ಎಂದು ಪರಿಶೀಲಿಸಿ. ಆನ್ ಲೈನ್ ಕೆಲಸದ ಮೊದಲು ಎಂದಿಗೂ ಪಾವತಿಸಬೇಡಿ. ಯಾವುದೇ ಸರಿಯಾದ ಕಂಪನಿಯು ಕೆಲಸ ನೀಡಿದ ನಂತರ ಹಣವನ್ನು ಕೇಳುವುದಿಲ್ಲ. ಅಜ್ಞಾತ ಉದ್ಯೋಗ ಹುಡುಕಾಟ ವೆಬ್ ಸೈಟ್ ಗಳಲ್ಲಿ ಯಾವುದೇ ಪಾವತಿ ಮಾಡಬೇಡಿ.
Are you seeking a job?
BEWARE!
Miscreants look for opportunities to trick people into #JobFrauds
Whether it is a fake website, fictitious offer letter, or fraud e-mail, here is how you can save yourself from such job frauds@Cyberdost #cybercrime pic.twitter.com/m9pKGH5liA
— PIB India (@PIB_India) October 10, 2022