ನವದೆಹಲಿ: ಧೂಮಪಾನಿಗಳು ಸಿಗರೇಟುಗಳನ್ನು ಸೇದುವುದನ್ನು ಆನಂದಿಸುತ್ತಾರೆ ಅಲ್ವಾ? ಆದರೆ ಇದು ಎಷ್ಟು ನಷ್ಟಗಳನ್ನು ಉಂಟುಮಾಡಬಹುದು ಎಂದು ಎಲ್ಲರಿಗೂ ತಿಳಿದಿದೆ. ಆದರೆ ಧೂಮಪಾನಿಗಳಿಗೆ ಇದು ಮುಖ್ಯವಲ್ಲ. ಧೂಮಪಾನದಿಂದ ಉಂಟಾಗುವ ಹಾನಿಯ ಬಗ್ಗೆ ಆಘಾತಕಾರಿ ಅಧ್ಯಯದಲ್ಲಿ ಹೊಸ ಮಾಹಿತಿ ಸಿಕ್ಕಿದೆ. ಅಂದ ಹಾಗೇ ಹೊಸ ಅಧ್ಯಯನದ ಪ್ರಕಾರ, ಧೂಮಪಾನಿಗಳು ಜ್ಞಾಪಕ ಶಕ್ತಿ ನಷ್ಟ ಮತ್ತು ಗೊಂದಲದ ಅಪಾಯದಲ್ಲಿದ್ದಾರೆ ಎನ್ನಲಾಗಿದೆ.
ಓಹಿಯೋ ಸ್ಟೇಟ್ ಯೂನಿವರ್ಸಿಟಿಯ ಸಂಶೋಧನೆಯು ಮೊದಲ ಬಾರಿಗೆ ಧೂಮಪಾನ ಮತ್ತು ಅರಿವಿನ ಕುಸಿತದ ನಡುವಿನ ಸಂಬಂಧವನ್ನು ಕಂಡುಕೊಂಡಿದೆ. ಇದು ಹಿಂದಿನ ಸಂಶೋಧನೆಯನ್ನು ಆಧರಿಸಿದೆ ಕೂಡ. ಸಂಶೋಧನೆ ಅಲ್ಝೈಮರ್ ಕಾಯಿಲೆ ಮತ್ತು ಬುದ್ಧಿಮಾಂದ್ಯತೆಗೆ ಸಂಬಂಧಿಸಿದೆ. 45-59 ವರ್ಷ ವಯಸ್ಸಿನ ಧೂಮಪಾನಿಗಳಲ್ಲಿ ಈ ರೋಗಲಕ್ಷಣಗಳು ಹೆಚ್ಚು ಸಾಮಾನ್ಯವಾಗಿವೆ ಎಂದು ಸಂಶೋಧಕರು ಬಹಿರಂಗಪಡಿಸಿದ್ದಾರೆ. ಸಂಶೋಧನೆ ವೇಳೆಯಲ್ಲಿ ಧೂಮಪಾನಿಗಳು ಸಣ್ಣ ಸಣ್ಣ ವಿಷಯಗಳನ್ನು ಸಹ ಮರೆಯಲಾಗುತ್ತಿದೆ ಎನ್ನುವುದನ್ನು ಗಮನಿಸಲಾಗಿದೆ ಧೂಮಪಾನದ ಅಭ್ಯಾಸವನ್ನು ತ್ಯಜಿಸುವುದು ಮೆದುಳಿನ ಆರೋಗ್ಯಕ್ಕೆ ಒಳ್ಳೆಯದು ಎಂದು ತಜ್ಞರು ಸಲಹೆ ನೀಡುತ್ತಾರೆ.
ಧೂಮಪಾನವನ್ನು ತ್ಯಜಿಸುವುದರಿಂದ ಉಸಿರಾಟ, ಹೃದಯ ಮತ್ತು ನರವೈಜ್ಞಾನಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುವುದಲ್ಲದೆ, ಜ್ಞಾಪಕ ಶಕ್ತಿ ನಷ್ಟವನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ. ಸಂಶೋಧನೆಯಲ್ಲಿ 45 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಒಟ್ಟು 1,36,018 ಜನರನ್ನು ಪರೀಕ್ಷಿಸಲಾಯಿತು. ಈ ಪೈಕಿ ಶೇ.11ರಷ್ಟು ಮಂದಿ ಜ್ಞಾಪಕ ಶಕ್ತಿ ನಷ್ಟದಿಂದ ಬಳಲುತ್ತಿದ್ದಾರೆ ಎಂದು ವರದಿಯಾಗಿದೆ. ಇದರರ್ಥ ಧೂಮಪಾನಿಗಳಲ್ಲದವರಿಗೆ ಹೋಲಿಸಿದರೆ ಧೂಮಪಾನ ಮಾಡದವರಲ್ಲಿ ಅರಿವಿನ ಕುಸಿತವು 1.9 ಪಟ್ಟು ಹೆಚ್ಚಾಗಿದೆ. 10 ವರ್ಷಗಳ ಹಿಂದೆ ಧೂಮಪಾನವನ್ನು ತ್ಯಜಿಸಿದವರಲ್ಲಿ 1.5 ಪಟ್ಟು ಹೆಚ್ಚು ಜ್ಞಾಪಕ ಶಕ್ತಿ ನಷ್ಟವಾಗಿದೆಯಂತೆ.
ಧೂಮಪಾನ ತ್ಯಜಿಸಿದ ಧೂಮಪಾನಿಗಳನ್ನು ಸಹ ಈ ಸಂಶೋಧನೆಯಲ್ಲಿ ಪರಿಗಣಿಸಲಾಗಿದೆ. ಧೂಮಪಾನವನ್ನು ತ್ಯಜಿಸುವ ಸಮಯವು ಈ ಅರಿವಿನ ಕುಸಿತದ ಫಲಿತಾಂಶಗಳೊಂದಿಗೆ ಸಂಬಂಧಿಸಿದೆ. ಎರಡರಿಂದ ಮೂರು ನಿಮಿಷಗಳ ಕಾಲ ಸಿಗರೇಟು ಸೇದುವುದರಿಂದ ದೇಹದ ಮುಖ್ಯ ಅಂಗಗಳಿಗೆ ಅಪಾಯವಾಗಬಹುದು ಎನ್ನುವುದನ್ನು ಕಂಡು ಕೊಳ್ಳಲಾಗಿದೆ. ಧೂಮಪಾನವು ಶ್ವಾಸಕೋಶದ ಕ್ಯಾನ್ಸರ್ ಮತ್ತು ಮಧುಮೇಹದಂತಹ ರೋಗಗಳಿಗೆ ಕಾರಣವಾಗಬಹುದು ಎಂದು ಎಲ್ಲರಿಗೂ ತಿಳಿದಿದೆ. ಆದರೆ ಸಿಗರೇಟಿನ ಹೊಗೆಯು ಕಣ್ಣುಗಳ ಮೇಲೂ ಪರಿಣಾಮ ಬೀರಬಹುದು. ಕಣ್ಣಿನ ರಕ್ತನಾಳಗಳ ಮೇಲಿನ ಪರಿಣಾಮದಿಂದಾಗಿ, ಇದು ದೀರ್ಘಕಾಲದ ದೃಷ್ಟಿ ನಷ್ಟಕ್ಕೆ ಕಾರಣವಾಗುತ್ತದೆಯಂತೆ.