ನವದೆಹಲಿ: ಇತ್ತೀಚಿಗೆ ಸೈಬರ್ ವಂಚಕರು ವಾಟ್ಸಪ್ಗೆ ಲಿಂಕ್ಗಳನ್ನು ಸೆಂಡ್ ಮಾಡಿ ಆ ಮೂಲಕ ಹಣವನ್ನು ಕದಿಯುತ್ತಿರುವುದು ಹೆಚ್ಚಾಗಿದೆ. ಈ ನಡುವೆ ಇದಕ್ಕೆ ಇನ್ನೊಂದು ಉದಾಹರಣೆ ಕೂಡ ಸೇರಿಕೊಂಡಿದೆ. ಹೌದು, ವಾಟ್ಸಾಪ್ ಲಿಂಕ್ ಮಾಡಿದ ಪರಿಣಾಮ ನಿವೃತ್ತ ಶಿಕ್ಷಕರೊಬ್ಬರು ಕ್ಷಣ ಮಾತ್ರದಲ್ಲಿ ₹ 21 ಲಕ್ಷ ಕಳೆದ ಕೊಂಡ ಘಟನೆ ನಡೆದಿದೆ.
ಅನ್ನಮಯ್ಯ ಜಿಲ್ಲೆಯ ಮದನಪಲ್ಲಿ ಪಟ್ಟಣದ ರೆಡ್ಡಿಪ್ಪನಾಯ್ಡು ಕಾಲೋನಿಯ ನಿವಾಸಿ ವರಲಕ್ಷ್ಮಿ, ತನಗೆ ನಡೆದ ಸೈಬರ್ ವಂಚನೆಯ ಬಗ್ಗೆ ಮಾಹಿತಿ ನೀಡಿದ್ದು, ‘ಹಣವನ್ನು ಕಡಿತಗೊಳಿಸಲಾಗಿದೆ’ ಎಂಬ ಸಂದೇಶಗಳು ನಿರಂತರವಾಗಿ ಬರುತ್ತಿವೆ ಅಂತ ಬ್ಯಾಂಕ್ ಅಧಿಕಾರಿಗಳನ್ನು ಸಂಪರ್ಕಿಸಿದರು ಮತ್ತು ಅವರ ಖಾತೆಯನ್ನು ಹ್ಯಾಕ್ ಮಾಡಲಾಗಿದೆ ಮತ್ತು ಅವರ ಖಾತೆಯಿಂದ 21 ಲಕ್ಷ ರೂ.ಗಳನ್ನು ಕಳುವು ಮಾಡಿರುವುದು ತಿಳಿದುಬಂತು. ವರಲಕ್ಷ್ಮಿ ಶನಿವಾರ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ.
ಸೈಬರ್ ಅಪರಾಧಿಗಳು ವಾಟ್ಸಾಪ್ ಸಂಖ್ಯೆಗಳಿಗೆ ಲಿಂಕ್ಗಳನ್ನು ಕಳುಹಿಸುತ್ತಿದ್ದಾರೆ ಮತ್ತು ಖಾತೆಗಳನ್ನು ಹ್ಯಾಕ್ ಮಾಡುತ್ತಿದ್ದಾರೆ ಮತ್ತು ಅವರ ಮೂಲಕ ಹಣವನ್ನು ಕದಿಯುತ್ತಿದ್ದಾರೆ ಅಂತ ಟೌನ್ ಸರ್ಕಲ್ ಇನ್ಸ್ಪೆಕ್ಟರ್ ಮುರಳೀಕೃಷ್ಣ ಹೇಳಿದ್ದಾರೆ.
‘ಸೈಬರ್ ಅಪರಾಧಿಗಳು ಇತ್ತೀಚೆಗೆ ಮದನಪಲ್ಲಿಯ ಸಾಫ್ಟ್ವೇರ್ ಉದ್ಯೋಗಿ ಜ್ಞಾನಪ್ರಕಾಶ್ ಅವರ ಖಾತೆಯಿಂದ ₹ 12 ಲಕ್ಷವನ್ನು ಕದ್ದಿದ್ದಾರೆ. ಘಟನೆಯ ಬಗ್ಗೆ ಪಟ್ಟಣ ಪೊಲೀಸರು ಶುಕ್ರವಾರ ಪ್ರಕರಣ ದಾಖಲಿಸಿದ್ದರು. ಮರುದಿನವೇ ₹ 21 ಲಕ್ಷ ಕಳವು ಮಾಡಲಾಗಿದೆ ಎಂಬ ದೂರು ಬಂದಿತು. ಇದು ತನಿಖೆಯ ಹಂತದಲ್ಲಿದೆ.
BIGG NEWS: COA ವಿಸರ್ಜಿಸಿದ ಸುಪ್ರೀಂ ಕೋರ್ಟ್;ಫಿಫಾಗೆ ಎಐಎಫ್ಎಫ್ ಸಂವಿಧಾನವನ್ನು ಪರಿಷ್ಕರಿಸಲು ಆದೇಶ