ಬೀದರ್ : ನೀರಿನ ಟ್ಯಾಂಕ್ ಗೆ ಬಿದ್ದು ಅಲೆಮಾರಿ ಜನಾಂಗದ ವ್ಯಕ್ತಿ ಒಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೀದರ್ ತಾಲೂಕಿನ ಅಣದೂರು ಗ್ರಾಮದಲ್ಲಿ ನಡೆದಿರುವ ಘಟನೆಯಾಗಿದೆ.
ಹೌದು ನೀರಿನ ಟ್ಯಾಂಕಿಗೆ ಬಿದ್ದು ಅಲೆಮಾರಿ ಜನಾಂಗದ ರಾಜು ಎನ್ನುವ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗುತ್ತಿದೆ. ಕಳೆದ ಹತ್ತು ವರ್ಷದಿಂದ ಅಣದೂರಿನಲ್ಲಿ ಅಲೆಮಾರಿ ಜನಾಂಗ ವಾಸವಿತ್ತು ಎನ್ನಲಾಗುತ್ತಿದೆ.ಕಳೆದ ಐದು ಆರು ದಿನಗಳ ಹಿಂದೆ ಟ್ಯಾಂಕಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗುತ್ತಿದೆ.
ಐದಾರು ದಿನಗಳಿಂದ ಗ್ರಾಮಸ್ಥರು ಕೂಡ ಅದೇ ನೀರನ್ನು ಕುಡಿಯುತ್ತಿದ್ದಾರೆ. ಕುಡಿಯುವ ನೀರು ವಾಸನೆ ಬಂದ ಹಿನ್ನೆಲೆಯಲ್ಲಿ ಟ್ಯಾಂಕ್ ಪರಿಶೀಲನೆ ನಡೆಸಿದ್ದಾರೆ. ಟ್ಯಾಂಕ್ ನಲ್ಲಿ ಶವ ಇರುವುದನ್ನು ನೋಡಿ ಹಣದೂರು ಗ್ರಾಮಸ್ಥರು ಶಾಕ್‌ಗೆ ಒಳಗಾಗಿದ್ದಾರೆ. ತಕ್ಷಣ ಸ್ಥಳಕ್ಕೆ ಆರೋಗ್ಯ ಇಲಾಖೆಯ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ.