ಬೀದರ್: ಜಿಲ್ಲೆಯ ಕಟ್ಟಡವೊಂದರ ಮೂರನೇ ಮಹಡಿಯಿಂದ ಕೆಳಗೆ ಬಿದ್ದು ಕಾರ್ಮಿಕನೋರ್ವ ಸಾವನ್ನಪ್ಪಿರುವಂತ ಘೋರ ಘಟನೆ ನಡೆದಿದೆ. ಈ ಘಟನೆಗೆ ಮಾಲೀಕರು, ಗುತ್ತಿಗೆದಾರರೇ ಕಾರಣ ಎಂಬುದಾಗಿ ಪೋಷಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಬೀದರ್ ಜಿಲ್ಲೆಯ ವಿದ್ಯಾನಗರದಲ್ಲಿ ಮೂರು ದಿನಗಳ ಹಿಂದೆ ನಡೆದಿದ್ದಂತ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಇಲ್ಲಿನ ಮೂರನೇ ಮಹಡಿಯ ಕಟ್ಟಡವೊಂದರಿಂದ ಕಾರ್ಮಿಕ ಇಮ್ಯಾನುಯೆಲ್ (23) ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ.
ಕಾರ್ಮಿಕ ಇಮ್ಯಾನುಯೆಲ್ ಕಟ್ಟಡದ ಮೂರನೇ ಮಹಡಿಯಿಂದ ಕೆಳಗೆ ಬೀಳುತ್ತಿರುವಂತ ದೃಶ್ಯ ಸಮೀಪದ ಸಿಸಿಟಿವಿಯೊಂದರಲ್ಲಿ ಸೆರೆಯಾಗಿದೆ.
ಈ ದುರಂತಕ್ಕೆ ಗುತ್ತಿಗೆದಾರರು, ಮನೆಯ ಮಾಲೀಕರು, ಇಂಜಿನಿಯರ್ ಕಾರಣ. ಮನೆ ಕೆಲಸಕ್ಕೆ ಮಗನನ್ನು ಕರೆದುಕೊಂಡು ಹೋಗಿ ಕೊಲೆ ಮಾಡಿರುವುದಾಗಿ ಪೋಷಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಅಲ್ಲದೇ ಸೂಕ್ತ ಕಾನೂನು ಕ್ರಮಕ್ಕೂ ಆಗ್ರಹಿಸಿದ್ದಾರೆ.
ಸಂಡೂರು ವಿಧಾನಸಭೆ ಉಪಚುನಾವಣೆ: ಮಾದರಿ ನೀತಿ ಸಂಹಿತೆ ಉಲ್ಲಂಘನೆ ಸಂಬಂಧ 8 ಪ್ರಕರಣ ದಾಖಲು-DC
BIG NEWS: ಗ್ರಾಮ ಪಂಚಾಯಿತಿ ತೆರವಾದ ಸ್ಥಾನಗಳಿಗೆ ‘ಉಪ ಚುನಾವಣಾ ವೇಳಾಪಟ್ಟಿ’ ಪ್ರಕಟ