ಬೀದರ್ : ಬೀದರ್ ನಲ್ಲಿ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪಿಯೊಬ್ಬನನ್ನು ಬಂಧಿಸಿರುವ ಭಾಲ್ಕಿ ಪೊಲೀಸರು, ಆತನಿಂದ ಬರೋಬ್ಬರಿ 14 ಲಕ್ಷ ರೂಪಾಯಿ ಮೌಲ್ಯದ ಗಾಂಜಾ ವಶಕ್ಕೆ ಪಡೆದಿದ್ದಾರೆ.ಬಂಧಿತ ಆರೋಪಿಯನ್ನು ಪವನ್ ಎಂದು ತಿಳಿದುಬಂದಿದೆ.
ಈತ ಹೈದ್ರಾಬಾದ್ ಮೂಲದವನು ಎಂದು ತಿಳಿದುಬಂದಿದೆ.ಪವನ್ ರೈಲು ಮೂಲಕ ಮಹಾರಾಷ್ಟ್ರದಿಂದ ಹೈದರಾಬಾದ್ಗೆ ಅಕ್ರಮ ಗಾಂಜಾ ಸಾಗಾಟ ಮಾಡುತ್ತಿದ್ದರ ಬಗ್ಗೆ ಖಚಿತ ಮಾಹಿತಿ ತಿಳಿದು ದಾಳಿ ಮಾಡಿದ ಭಾಲ್ಕಿ ಪೊಲೀಸರು, ಆತನ ಬ್ಯಾಗನಲ್ಲಿದ್ದ 14 ಲಕ್ಷ ರೂಪಾಯಿ ಮೌಲ್ಯದ ಅಕ್ರಮ ಗಾಂಜಾ ಜಪ್ತಿ ಮಾಡಿಕೊಂಡಿದ್ದಾರೆ.