ಬೀದರ್ : ಬೀದರ್ ತಾಲೂಕಿನ ಗೋರನಹಳ್ಳಿ ಬಳಿ ರಸ್ತೆ ಪಕ್ಕ ಗಾಂಜಾ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದ ಮಹಿಳೆಯನ್ನು ಬಂಧಿಸಿ ಮಹಿಳೆಯಿಂದ ಸುಮಾರು 43.47 ಲಕ್ಷ ಮೌಲ್ಯದ ಗಾಂಜಾ ವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಬೀದರ್ ತಾಲೂಕಿನ ಗೊರನಳ್ಳಿ ಬಳಿ ಪೊಲೀಸರು ಮಹಿಳೆಯನ್ನು ಬಂಧಿಸಿದ್ದಾರೆ. ಬಂಧಿತ ಮಹಿಳೆಯ ಬಳಿ ಇದ್ದ ಸುಮಾರು 43 ಕೆಜಿ 479 ಗ್ರಾಂ ಗಾಂಜಾ ವಶಕ್ಕೆ ಪಡೆದುಕೊಂಡಿದ್ದಾರೆ. ರಸ್ತೆ ಪಕ್ಕ ನಿಂತಿದ್ದಾಗ ಅನುಮಾನ ಗೊಂಡ ಗಸ್ತು ತಿರುಗುವ ಪೊಲೀಸರು ಆಕೆಯನ್ನು ಪರಿಶೀಲಿಸಿದಾಗ ಗಾಂಜಾ ಮಾರಾಟ ಮಾಡುತ್ತಿರುವುದು ಪತ್ತೆಯಾಗಿದೆ.