ಬೀದರ್ : ಕೊಟ್ಟ ಸಾಲವನ್ನು ವಾಪಸ್ ಕೇಳಿದ್ದಕ್ಕೆ ಸ್ನೇಹಿತನಿಗೆ ವ್ಯಕ್ತಿ ಒಬ್ಬ ಹಾಡು ಹಗಲೇ ಚಾಕು ಇರಿದಿರುವ ಘಟನೆ ಬೀದರ್ ಜಿಲ್ಲೆಯ ಬಸವಕಲ್ಯಾಣ ಪಟ್ಟಣದಲ್ಲಿ ನಡೆದಿದೆ.
ಅಶೋಕ್ ಪಾಟೀಲ್ ಎನ್ನುವವರು ತನ್ನ ಸ್ನೇಹಿತ ದಯಾನಂದ ಶಿಂಧೆಗೆ 10,000 ಸಾಲ ನೀಡಿದ್ದರು. ಇದೇ ಸಾಲವನ್ನು ವಾಪಸ್ ಕೇಳಿದ್ದಕ್ಕಾಗಿ ಅಶೋಕ್ ಪಾಟೀಲ್ ಸ್ನೇಹಿತರ ಜೊತೆ ಬಾರ್ ನಲ್ಲಿ ಕುಳಿತಿದ್ದಾಗ ಹಾಡು ಹಗಲೇ ಬಾರ್ ಗೆ ನುಗ್ಗಿ ದಯಾನಂದ್ ಶಿಂದೆ ಚಾಕು ಇರಿದು ಪರಾರಿಯಾಗಿದ್ದಾನೆ.
ಅಶೋಕ್ ಆರೋಪಿ ದಯಾನಂದನಿಗೆ 10 ಸಾವಿರ ರೂ. ಸಾಲ ನೀಡಿದ್ದ. ಕೊಟ್ಟ ಸಾಲವನ್ನು ವಾಪಸ್ ಕೇಳಿದ್ದಕ್ಕೆ ಈ ಕೃತ್ಯ ಎಸಗಿದ್ದಾನೆ.ಚಾಕು ಇರಿದ ಭಯಾನಕ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿದೆ. ಗಾಯಾಳು ಅಶೋಕ್‌ನನ್ನು ಕಲಬುರಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸ್ಥಿತಿ ಚಿಂತಾಜನಕವಾಗಿದೆ.