ಬೀದರ್: ಜಿಲ್ಲೆಯಲ್ಲಿ ಕಾರಂಜಾ ಡ್ಯಾಂ ನಿರ್ಮಾಣದಿಂದ ರೈತರು ಭೂಮಿ ಕಳೆದುಕೊಂಡಿದ್ದಾರೆ. ಹೀಗಾಗಿ ಅದರ ಪರಿಹಾರಕ್ಕಾಗಿ ಆಗ್ರಹಿಸಿ ರೈತರು ವಿಭಿನ್ನ ಪ್ರತಿಭಟನೆ ಮಾಡಿದ್ದಾರೆ. ರೈತರು ಕೇಶ ಮುಂಡನೆ ಮಾಡಿಸಿಕೊಳ್ಳುವ ಮೂಲಕ ಸರ್ಕಾರ ಗಮನ ಸೆಳೆಯುವ ಸಲುವಾಗಿ ವಿಭಿನ್ನ ಪ್ರತಿಭಟನೆ ಮಾಡಿದ್ದಾರೆ.
BIGG NEWS: ನನಗೆ ಕಾಲು ನೋವಿನಿಂದ ಈ ಸಲ ಸದನದಲ್ಲಿ ಭಾಗವಹಿಸಿಲ್ಲ; ಕೆ.ಎಸ್ ಈಶ್ವರಪ್ಪ ಸ್ಪಷ್ಟನೆ
ಕಾರಂಜಾ ಡ್ಯಾಂ ನಿರ್ಮಾಣದಿಂದ ಭೂಮಿ ಮತ್ತು ಮನೆಗಳು ಮುಳುಗಡೆಯಾಗಿವೆ. ಹೀಗಾಗಿ ಕಳೆದಕೊಂಡ ಭೂಮಿಗಳಗಿಗೆ ವೈಜ್ಞಾನಿಕ ಪರಿಹಾರಕ್ಕೆ ಆಗ್ರಹಿಸಿ ಕಳೆದ 76 ದಿನದಿಂದ ಜಿಲ್ಲಾ ಉಸ್ತುವಾರಿ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಕಚೇರಿ ಎದುರು ಅಹೋ ರಾತ್ರಿ ಧರಣಿ ನಡೆಸುತ್ತಿದ್ದಾರೆ.
ಡ್ಯಾಂ ನಿರ್ಮಾಣದ ವೇಳೆ ಸೂಕ್ತ ವೈಜ್ಞಾನಿಕ ಪರಿಹಾರ ಕೊಡುವುದಾಗಿ ಸರ್ಕಾರ ರೈತರ ಜಮೀನು ಸ್ವಾಧೀನ ಪಡಿಸಿಕೊಂಡಿತ್ತು. ಡ್ಯಾಂ ನಿರ್ಮಾಣದಿಂದ ರೈತರು 15 ಸಾವಿರ ಎಕರೆಯಷ್ಟು ಜಮೀನು ಕಳೆದುಕೊಂಡಿದ್ದರು. ಇದೀಗ ಪರಿಹಾರಕ್ಕಾಗಿ ಆಹೋರಾತ್ರಿ ಧರಣಿ ಮಾಡುತ್ತಿದ್ದಾರೆ.