ಬೀದರ್ : ಇಲ್ಲಿನ ಚಿಟಗುಪ್ಪ ತಾಲೂಕಿನ ಗ್ರಾಮವೊಂದರ ಬಳಿ ಶುಕ್ರವಾರ ತಡರಾತ್ರಿ ಆಟೋ ರಿಕ್ಷಾ ಮತ್ತು ಟ್ರಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಏಳು ಮಹಿಳೆಯರು ಮೃತಪಟ್ಟು, ಹನ್ನೊಂದು ಮಂದಿ ಗಾಯಗೊಂಡಿದ್ದಾರೆ.
ಘಟನೆ ಕುರಿತು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದು, ದುರಂತದಲ್ಲಿ ಮೃತಪಟ್ಟವರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಈ ಕಡು ದುಃಖವನ್ನು ಭರಿಸುವ ಶಕ್ತಿಯನ್ನು ಆ ದೇವರು ಕುಟುಂಬಗಳಿಗೆ ದಯಪಾಲಿಸಲಿ. ಗಾಯಗೊಂಡ ಎಲ್ಲರೂ ತ್ವರಿತವಾಗಿ ಚೇತರಿಸಿಕೊಳ್ಳಲಿ ಎಂದು ಟ್ವೀಟ್ ಮಾಡಿದ್ದಾರೆ.
ಬೀದರ್ ಜಿಲ್ಲೆಯ ಚಿಟಗುಪ್ಪ ತಾಲೂಕಿನ ಬೆಮಳಖೇಡಾ ಗ್ರಾಮದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ತಾಲೂಕಿನ ಉಡಬನಳ್ಳಿ ಗ್ರಾಮದ 7 ಜನ ಮಹಿಳೆಯರು ದುರ್ಮರಣ ಹೊಂದಿರುವ ಸುದ್ದಿ ಕೇಳಿ ನನಗೆ ತೀವ್ರ ಆಘಾತ ಉಂಟಾಯಿತು. ಎಲ್ಲರೂ ಕೃಷಿ ಕಾರ್ಮಿಕರು. ಕೆಲಸ ಮುಗಿಸಿಕೊಂಡು ಆಟೋದಲ್ಲಿ ಮನೆಗೆ ಮರಳುತ್ತಿದ್ದಾಗ ಈ ದುರಂತ ಸಂಭವಿಸಿದೆ,ಕೂಲಿ ಮಾಡಿಕೊಂಡು ಬದುಕಿದ್ದ ಇವರ ಕುಟುಂಬಗಳಲ್ಲಿ ಈಗ ಕತ್ತಲು ಆವರಿಸಿದೆ. ರಾಜ್ಯ ಸರಕಾರ ಕೂಡಲೇ ಈ ಕುಟುಂಬಗಳ ನೆರವಿಗೆ ಧಾವಿಸಿ ಅಗತ್ಯ ಪರಿಹಾರ, ಮತ್ತಿತೆರೆ ನೆರವು ನೀಡಬೇಕು. ಎಲ್ಲಾ ಗಾಯಾಳುಗಳಿಗೆ ಉತ್ತಮ ಚಿಕಿತ್ಸೆಯನ್ನು ಉಚಿತವಾಗಿ ಒದಗಿಸಬೇಕು. ದುರಂತದಲ್ಲಿ ಮೃತಪಟ್ಟವರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಈ ಕಡು ದುಃಖವನ್ನು ಭರಿಸುವ ಶಕ್ತಿಯನ್ನು ಆ ದೇವರು ಕುಟುಂಬಗಳಿಗೆ ದಯಪಾಲಿಸಲಿ. ಗಾಯಗೊಂಡ ಎಲ್ಲರೂ ತ್ವರಿತವಾಗಿ ಚೇತರಿಸಿಕೊಳ್ಳಲಿ ಎಂದು ಹೆಚ್ಡಿಕೆ ಟ್ವೀಟ್ ಮಾಡಿದ್ದಾರೆ.
ದುರಂತದಲ್ಲಿ ಮೃತಪಟ್ಟವರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಈ ಕಡು ದುಃಖವನ್ನು ಭರಿಸುವ ಶಕ್ತಿಯನ್ನು ಆ ದೇವರು ಕುಟುಂಬಗಳಿಗೆ ದಯಪಾಲಿಸಲಿ. ಗಾಯಗೊಂಡ ಎಲ್ಲರೂ ತ್ವರಿತವಾಗಿ ಚೇತರಿಸಿಕೊಳ್ಳಲಿ.3/3
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) November 5, 2022
BIGG NEWS : ಬೆಚ್ಚಿ ಬೀಳಿಸುವಂತಿದೆ ಮಗನ ಸಾವಿನ ಪ್ರಕರಣದ ಕುರಿತು ಮೃತ ಚಂದ್ರು ತಂದೆ ಮಾಡಿರುವ ಈ ಆರೋಪ..!
‘ದೈವ ನರ್ತಕರಿಗೆ ಸರ್ಕಾರ ಮಾಸಾಶನ ನೀಡಬಾರದಿತ್ತು’ ಎಂಬ ಬಿ.ಟಿ ಲಲಿತಾ ನಾಯಕ್ ಹೇಳಿಕೆಗೆ ಯು.ಟಿ ಖಾದರ್ ತಿರುಗೇಟು