ಬೆಂಗಳೂರು: ನಾಳೆ ಬಿಡದಿ ಹಾಫ್ ಮ್ಯಾರಥಾನ್ 2025 ನಡೆಯಲಿದೆ. ಈ ಪ್ರಯುಕ್ತ ನಮ್ಮ ಮೆಟ್ರೋ ರೈಲು ಸಂಚಾರ ಮುಂಜಾನೆ 4 ಗಂಟೆಯಿಂದಲೇ ಆರಂಭಗೊಳ್ಳಲಿದೆ.
ಈ ಬಗ್ಗೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಮಾರ್ಚ್ 23, 2025ರ ಭಾನುವಾರದ ನಾಳೆ ನಡೆಯಲಿರುವ ಬಿಡದಿ ಹಾಫ್ ಮ್ಯಾರಥಾನ್ ಪುಯುಕ್ತ ಎಲ್ಲಾ ನಾಲ್ಕು, ಟರ್ಮಿನಲ್‌ಗಳಿಂದ 7.00 ಗಂಟೆಗೆ ಬದಲಾಗಿ ಮುಂಜಾನೆ 5.00 ಗಂಟೆಗೆ ಮೆಟ್ರೋ ರೈಲು ಸೇವೆ ಪ್ರಾರಂಭವಾಗಲಿವೆ ಎಂದು ತಿಳಿಸಿದೆ.
ಆದಾಗ್ಯೂ, ಸಾರ್ವಜನಿಕರು ಮ್ಯಾರಥಾನ್ ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಅನುಕೂಲವಾಗುವಂತೆ, ಮೆಟ್ರೋ ರೈಲು ಸೇವೆ ನಾಡಪ್ರಭು ಕೆಂಪೇಗೌಡ ನಿಲ್ದಾಣ ಮಜೆಸ್ಟಿಕ್ ನಿಂದ ಚಲ್ಲಘಟ್ಟ ಮೆಟ್ರೋ ನಿಲ್ದಾಣದ ಕಡೆಗೆ ಮುಂಜಾನೆ 4.00 ಗಂಟೆಯಿಂದ ಲಭ್ಯವಿರುತ್ತದೆ ಎಂದಿದೆ.
ಬಿಡದಿ ಹಾಫ್ ಮ್ಯಾರಥಾನ್ – 2025ರ ಹಿನ್ನಲೆಯಲ್ಲಿ ಮಾರ್ಚ್ 23 ರಂದು ಮೆಟ್ರೋ ಸೇವೆ ಬೇಗ ಆರಂಭವಾಗಲಿದ್ದು, ಹೆಚ್ಚಿನ ಮಾಹಿತಿಗಾಗಿ ಪತ್ರಿಕಾ ಪ್ರಕಟಣೆಯನ್ನು ಪರಿಶೀಲಿಸಿ pic.twitter.com/gTePArW3c0
— ನಮ್ಮ ಮೆಟ್ರೋ (@OfficialBMRCL) March 21, 2025
BREAKING: ರಾಜ್ಯದಲ್ಲಿ ಬೆಚ್ಚಿ ಬೀಳಿಸೋ ಘಟನೆ: ಹಾಸನದಲ್ಲಿ ಲಾಂಗ್ ಹಿಡಿದು ನಡು ರಸ್ತೆಯಲ್ಲೇ ಮಹಿಳೆ ಓಡಾಟ
ನಾಗ್ಪುರ ಹಿಂಸಾಚಾರ: ಮತ್ತೆ 14 ಮಂದಿ ಬಂಧನ, ಬಂಧಿತರ ಸಂಖ್ಯೆ 105ಕ್ಕೆ ಏರಿಕೆ, 3 ಹೊಸ FIR ದಾಖಲು | Nagpur violence