ಬೆಂಗಳೂರು : ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣ (ಕೆಐಎ)ದ ವಿದ್ಯುತ್ ವ್ಯವಸ್ಥೆಯಲ್ಲಿ ನವೀಕರಿಸಬಹುದಾದ ಇಂಧನ ಬಳಕೆ ಹೆಚ್ಚಿಸಲು ಒತ್ತು ನೀಡಲಾಗುತ್ತಿದ್ದು, ಅದಕ್ಕಾಗಿ ಪವನ ಮತ್ತು ಸೌರ ವಿದ್ಯುತ್ ಪೂರೈಕೆಗಾಗಿ ಎನ್ವಿರೋ ಎನರ್ಜಿ ಸಲ್ಯೂಷನ್ಸ್ ಜತೆಗೆ ಒಪ್ಪಂದ ಮಾಡಿಕೊಂಡಿದೆ.
ರಾಜ್ಯದಲ್ಲಿ ₹ 17,836 ಕೋಟಿ ಬಂಡವಾಳ ಹೂಡಿಕೆ: 27,067 ಹೊಸ ಉದ್ಯೋಗ ಸೃಷ್ಟಿ- ಸಿಎಂ ಸಿದ್ಧರಾಮಯ್ಯ
ಕೆಐಎ ಟರ್ಮಿನಲ್ ಸೇರಿದಂತೆ ಇನ್ನಿತರ ಕಡೆಗಳ ಚಾವಣಿ ಯಲ್ಲಿ ಈಗಾಗಲೇ ಸೋಲಾರ್ ಪ್ಯಾನಲ್‌ಗಳನ್ನು ಅಳವಡಿಸಲಾ ಗಿದ್ದು, ಅಲ್ಲಿಂದ ಉತ್ಪತ್ತಿಯಾಗುವ 3.3 ಮೆಗಾ ವ್ಯಾಟ್ ವಿದ್ಯು ತನ್ನು ಬಳಸಲಾಗುತ್ತಿದೆ. ಅದರ ಜತೆಗೆ ನವೀಕರಿಸಬಹುದಾದ ಇಂಧನ ಬಳಕೆಯನ್ನು ಮತ್ತಷ್ಟು ಹೆಚ್ಚಿಸಲು ಮುಂದಾಗಿರುವ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಸ್ಥೆ (ಬಿಐಎಎಲ್) ಪವನ ಮತ್ತು ಸೌರ ವಿದ್ಯುತನ್ನು ಖಾಸಗಿ ಸಂಸ್ಥೆ ಯಿಂದ ಪಡೆದು ಬಳಕೆ ಮಾಡಲು ಮುಂದಾಗಿದೆ.
ಗಮನಿಸಿ: ನಾಳೆಯಿಂದ ರಾಜ್ಯದಲ್ಲಿ 10 ದಿನ ‘ಎಸ್ಕಾಂ’ ಆನ್ ಲೈನ್ ಸೇವೆ ಸ್ಥಗಿತ, ಬಿಲ್ ಪಾವತಿಯೂ ಇಲ್ಲ
ಅದಕ್ಕಾಗಿ ಮುಂದಿನ 25 ವರ್ಷಗಳವರೆಗೆ ಪವನ ಮತ್ತು ಸೌರ ವಿದ್ಯುತ್ ಪೂರೈಕೆ ಮಾಡಲು ಎನ್ನಿರೋ ಎನರ್ಜಿ ಸಲ್ಯೂಷನ್ಸ್ ಜತೆಗೆ ಬಿಐಎಎಲ್ ಒಪ್ಪಂದ ಮಾಡಿಕೊಂಡಿದೆ.ನೂತನ ಒಪದಂದಂತೆ ಮುಂದಿನ 25 ವರ್ಷಗಳವರೆಗೆ ಬಿಐಎಎಲ್‌ಗೆ 45.9 ಮೆಗಾ ವ್ಯಾಟ್ ಸೌರ ಮತ್ತು ಪವನ ವಿದ್ಯುತನ್ನು ಎನ್ವಿರೋ ಎನರ್ಜಿ ಸೆಲ್ಯೂಷನ್ಸ್ ನೀಡಲಿದೆ. ಹೀಗೆ ಪಡೆಯಲಾಗುವ ನವೀಕರಿಸಬಹುದಾದ ವಿದ್ಯುತನ್ನು ಬಿಐಎಎಲ್ ಕೆಐಎ ಕಾರ್ಯಾಚರಣೆಗೆ ಬಳಸಲಿದೆ.