ತುಮಕೂರು : ತುಮಕೂರಿನಲ್ಲಿ ಲಕ್ಷ ಲಕ್ಷ ಸಾಲ ಮಾಡಿಕೊಂಡು ವ್ಯಕ್ತಿಯೊಬ್ಬ ಟವರ್ ಏರಿದ್ದಾನೆ. ಹಣ ವಾಪಸ್ ನೀಡಲು ಆಗದೆ ವ್ಯಕ್ತಿ ಹುಚ್ಚಾಟ ಮೆರೆದಿದ್ದಾನೆ. 120 ಅಡಿ ಎತ್ತರದ ಹೈಟೆನ್ಶನ್ ವಿದ್ಯುತ್ ಟವರ್ ಏರಿದ್ದಾನೆ.
ಹೌದು ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಬಿಕೆ ಗ್ರಾಮದಲ್ಲಿ 120 ಅಡಿ ಎತ್ತರದ ಏರಿ ಗೋಪಾಲ ಎನ್ನುವ ವ್ಯಕ್ತಿ ಆತ್ಮಹತ್ಯೆಗೆ ಯತ್ನಿಸಿದ್ದ. ಈ ವೇಳೆ ಅಗ್ನಿಶಾಮಕ ದಳ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ಬಂದು ಆತನನ್ನು ರಕ್ಷಣೆ ಮಾಡಿದ್ದಾರೆ. ಲಕ್ಷಾನುಗಟ್ಟಲೆ ಸಾಲ ಮಾಡಿ ಅದನ್ನು ತೀರಿಸಲು ಆಗದೆ ಹೈಟೆನ್ಶನ್ ವಿದ್ಯುತ್ ಟವರ್ ಏರಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.








