ಕೆಎನ್ ಎನ್ ನ್ಯೂಸ್ ಡೆಸ್ಕ್ : ಹಳ್ಳಿಯ ರೈತರಿಗೆ ಭೂಮಿ ತಾಯಿಯೇ ಒಂಥರಾ ಜೀವಾಳ. ಆಕೆಯೇ ಪ್ರತಿಯೊಬ್ಬರು ಪೂಜೆಸುತ್ತಾರೆ. ಆಕೆ ಇಲ್ಲ ಅಂದರೆ ಹೊಟ್ಟೆಗೆ ಅನ್ನನೂ ಇರೋದಿಲ್ಲ. ಅದಕ್ಕೆ ಅಂತಾನೇ ಹಬ್ಬವೊಂದನ್ನ ಮೀಸಲು ಇಟ್ಟಿರುತ್ತಾರೆ. ಅದನ್ನ ಸೀಗೆ/ಸೀಗಿ ಹುಣ್ಣಿಮೆ ಅಥವಾ ಭೂಮಿ ಹುಣ್ಣಿಮೆ ಅಂತಲೂ ಕರೆಯುತ್ತಾರೆ.
‘ಟಿಪ್ಪು ಎಕ್ಸ್ ಪ್ರೆಸ್’ ಇನ್ಮುಂದೆ ‘ಒಡೆಯರ್ ಎಕ್ಸ್ ಪ್ರೆಸ್’ : ಬೋರ್ಡ್ ನೇತುಹಾಕಿದ ರೈಲ್ವೆ ಇಲಾಖೆ
ಆದರೆ ಈ ಹಬ್ಬದ ಆರಚಣೆ ಒಂದೊಂದು ಊರಿನಲ್ಲಿ ಒಂದೊಂದು ಥರ ಮಾಡುತ್ತಾರೆ. ಭಾರತೀಯ ಕೃಷಿ ಪರಂಪರೆಯಲ್ಲಿ ಕೃಷಿ ಭೂಮಿಯನ್ನು ತಾಯಿಯೆಂದೇ ಪರಿಗಣಿಸಲಾಗುತ್ತದೆ.ಹಳ್ಳಿಯಲ್ಲೂ ಅಂತು ಈ ಹಬ್ಬ ತುಂಬ ಗಮ್ಮತ್ತು ಆಗಿರುತ್ತದೆ. ಕರ್ನಾಟಕದಲ್ಲಿ ಈ ಹುಣ್ಣಿಮೆಯ ಆಚರಣೆ ಒಂದೊಂದು ರೀತಿಯಲ್ಲಿ ಆಚರಿಸಲಾಗುತ್ತದೆ. ನಾಳೆ ನಾಡಿನಾದ್ಯಂತ ಭೂಮಿ ಹುಣ್ಣಿಮೆಯ ಸಂಭ್ರಮ ಮನೆ ಮಾಡಿದೆ.
ಏನಿದು ಸೀಗೆ ಹುಣ್ಣಿಮೆ?
ಎಲ್ಲವನ್ನೂ ಕರುಣಿಸುವ ಭೂಮಿತಾಯಿಗೆ ಸೀಗೆ ಹುಣ್ಣಿಮೆ ದಿನದಂದು ಚರಗ ಚೆಲ್ಲುವ ಮೂಲಕ ಆಕೆಯನ್ನು ಸಂತುಷ್ಟಪಡಿಸುವ ದಿನ ಎಂದು ಕರೆಯಲಾಗುತ್ತದೆ. ಮತ್ತೊಂದು ಕಡೆ ಇದು ಭೂಮಿ ತಾಯಿಗೆ ಸೀಮಂತದ ಕ್ಷಣವೂ ಎಂದೂ ಹೇಳಲಾಗುತ್ತದೆ.
‘ಟಿಪ್ಪು ಎಕ್ಸ್ ಪ್ರೆಸ್’ ಇನ್ಮುಂದೆ ‘ಒಡೆಯರ್ ಎಕ್ಸ್ ಪ್ರೆಸ್’ : ಬೋರ್ಡ್ ನೇತುಹಾಕಿದ ರೈಲ್ವೆ ಇಲಾಖೆ
ಸೀಗಿ ಹುಣ್ಣಿಮೆ ಬುಟ್ಟಿಯ ಚಿತ್ತಾರ..
ಸೀಗಿ ಹುಣ್ಣಿಮೆ ಆಗಮನಕ್ಕೆ ಇನ್ನೊಂದು ವಾರ ಇದೆ ಎನ್ನುವಷ್ಟರಲ್ಲಿ ರೈತರ ಮನೆಯಲ್ಲಿ ಹಬ್ಬದ ಸಡಗರ. ಬಹುತೇಕ ಹಳ್ಳಿಗಾಡಿನಲ್ಲಿನ ಮನೆಗಳಲ್ಲಿ ಬಿದಿರಿನ ಬುಟ್ಟಿ ಇದ್ದೇ ಇರುತ್ತವೆ. ಕೆಮ್ಮಣ್ಣು ಸುಣ್ಣದ ಚಿತ್ತಾರದ ಸೀಗಿ ಹುಣ್ಣಿಮೆ ಬುಟ್ಟಿ ಎಂದೇ ಕರೆಯುವ ಬುಟ್ಟಿಯ ಮೇಲೆ ಚಿತ್ತಾಕರ್ಷಕ ಚಿತ್ತಾರ ಬರೆಯಲಾಗುತ್ತದೆ. ಆ ಬುಟ್ಟಿಯಲ್ಲಿಯೇ ಭೂತಾಯಿಗೆ ಬಗೆಬಗೆ ಖಾದ್ಯಗಳನ್ನು ಹೊತ್ತೊಯ್ಯಲಾಗುತ್ತದೆ. ಅದು ಹಿಂದಿನಿಂದಲೂ ನಡೆದುಕೊಂಡು ಬಂದ ಸಂಪ್ರದಾಯ. ಕರ್ನಾಟಕದ ಬಹುತೇಕ ಭಾಗಗಳಲ್ಲಿ ಈ ರೀತಿಯ ಆಚರಣೆ ಇದೆ.
‘ಟಿಪ್ಪು ಎಕ್ಸ್ ಪ್ರೆಸ್’ ಇನ್ಮುಂದೆ ‘ಒಡೆಯರ್ ಎಕ್ಸ್ ಪ್ರೆಸ್’ : ಬೋರ್ಡ್ ನೇತುಹಾಕಿದ ರೈಲ್ವೆ ಇಲಾಖೆ
ಪಾಂಡವರ ಪೂಜೆ..!
ಹೊಲದ ಮುಖ್ಯಭಾಗದಲ್ಲಿ ಸೀಗೆ ಹುಣ್ಣಿಮೆಯ ಹಿಂದಿನ ದಿನವೇ ಪಾಂಡವರನ್ನು ಪ್ರತಿಷ್ಟಾಪಿಸಲಾಗುತ್ತೆ. ಕಳ್ಳನ ಕಲ್ಲು ಎಂದೂ ಇನ್ನೊಂದು ಕಲ್ಲನ್ನು ಇರಿಸಲಾಗುತ್ತದೆ. ಐದು ಕಲ್ಲುಗಳನ್ನು ಕ್ರಮವಾಗಿ ಹೊಂದಿಸಿ, ಅವುಗಳನ್ನೇ ಪಂಚ ಪಾಂಡವರು ಎಂಬರ್ಥದಲ್ಲಿ ಪೂಜಿಸಲಾಗುತ್ತದೆ. ಆ ಕಲ್ಲುಗಳಿಗೆ ಸುಣ್ಣ ಬಳಿದು, ಕೆಮ್ಮಣ್ಣಿನ ಚುಕ್ಕೆ ಇಡಲಾಗುತ್ತದೆ. ಮಾರನೇ ದಿನ ಅವುಗಳ ಪೂಜೆ ಮಾಡಲಾಗುತ್ತದೆ. ಈ ಪಾಂಡವರ ಜತೆಗೆ ಕಳ್ಳನನ್ನೂ ಕೂರಿಸುವ ಆಚರಣೆ ಇದೆ.