ಬೆಂಗಳೂರು : ಸಾರಿಗೆ ಸಿಬ್ಬಂದಿಗಳಿಗೆ “ಭರ್ಜರಿ ದಸರಾ ಗಿಫ್ಟ್” ನೀಡುತ್ತಿದ್ದು, ದಸರಾ ಹಬ್ಬದ ನಿಮಿತ್ತ ಅಕ್ಟೋಬರ್ 3 ರಂದು ಕರ್ತವ್ಯ ನಿರ್ವಹಿಸುವ ಎಲ್ಲ” ಸಿಬ್ಬಂದಿಗೆ ಗಳಿಕೆ ರಜೆ ನಗದೀಕರಣದ ಮೊತ್ತವನ್ನು ಪಾವತಿಸಲಾಗುತ್ತದೆ “ಎಂದು ಕೆಎಸ್ಆರ್ಟಿಸಿ ಎಂಡಿ ಅನ್ಬುಕುಮಾರ್ ತಿಳಿಸಿದ್ದಾರೆ.
BREAKING NEWS : ಫಿಫಾ ಮಾಜಿ ರೆಫರಿ ‘ಸುಮಂತ ಘೋಷ್’ ವಿಧಿವಶ |Former FIFA referee Sumanta Ghosh passes away
ಸಮಸ್ತ ಸಾರಿಗೆ ಸಿಬ್ಬಂದಿ ಹಾಗೂ ಅವರ ಕುಟುಂಬದವರಿಗೆ ಆಯುಧ ಪೂಜೆ ಹಾಗೂ ವಿಜಯದಶಮಿ ಹಬ್ಬವು ಸುಖ, ಸಮೃದ್ಧಿ ಹಾಗೂ ಸನ್ಮಂಗಳವನ್ನು ಉಂಟು ಮಾಡಲಿ ಎಂದು ಹಾರೈಸಿರುವ ಅನ್ಬುಕುಮಾರ್, ಕೋವಿಡ್ ಕಾರಣದಿಂದಾಗಿ ನಿಗಮವು ಹಲವಾರು ಸಂಕಷ್ಟಗಳನ್ನು ಎದುರಿಸುತ್ತಿದ್ದರೂ ಸಹ ತಮ್ಮೆಲ್ಲರ ದಕ್ಷತೆಯ ಸೇವೆಯಿಂದ ಕಾರ್ಯಾಚರಣೆಯಲ್ಲಿ ಸ್ಥಿರತೆಯನ್ನು ಸಾಧಿಸುವತ್ತ ಮಹತ್ತರವಾದ ಹೆಜ್ಜೆಯಿಡುತ್ತಾ, ಸಾರ್ವಜನಿಕರಿಗೆ ಸಮರ್ಪಕ ಸೇವೆ ಒದಗಿಸುವ ನಿಟ್ಟಿನಲ್ಲಿ ಮುನ್ನಡೆದಿದ್ದೇವೆ ಎಂದರು.
BREAKING NEWS : ಫಿಫಾ ಮಾಜಿ ರೆಫರಿ ‘ಸುಮಂತ ಘೋಷ್’ ವಿಧಿವಶ |Former FIFA referee Sumanta Ghosh passes away
ಅದೇ ರೀತಿ ಸಾರಿಗೆ ಸಂಸ್ಥೆಯ ಬೆನ್ನೆಲುಬಾದ ಕಾರ್ಮಿಕರ ಆಶೋತ್ತರಗಳಿಗೆ ಸ್ಪಂದಿಸುವುದು ತನ್ನ ಪ್ರಥಮ ಆದ್ಯತೆಯೆಂದೇ ಭಾವಿಸಿ, ಹಲವಾರು ಕಾರ್ಮಿಕ -ಸ್ನೇಹಿ ಸುಧಾರಣಾ ಕ್ರಮಗಳನ್ನು ಇತ್ತೀಚಿನ ದಿನಗಳಲ್ಲಿ ಜಾರಿಗೊಳಿಸಿದೆ. ಕಳೆದೆರಡು ವರುಷಗಳಲ್ಲಿ ನಿಗಮದ ಕ್ಲಿಷ್ಟಕರವಾದ ಆರ್ಥಿಕ ಪರಿಸ್ಥಿತಿಯಿಂದಾಗಿ ಸಿಬ್ಬಂದಿಗಳಿಗೆ ಪಾವತಿಸಬೇಕಾಗಿದ್ದ ಗಳಿಕೆ ರಜೆ ನಗದೀಕರಣವನ್ನು ಪಾವತಿಸಲು ಸಾಧ್ಯವಾಗಿರಲಿಲ್ಲ.
BREAKING NEWS : ಫಿಫಾ ಮಾಜಿ ರೆಫರಿ ‘ಸುಮಂತ ಘೋಷ್’ ವಿಧಿವಶ |Former FIFA referee Sumanta Ghosh passes away
ಆದರೆ, ಕಾರ್ಮಿಕರ ಮನದಾಳವನ್ನು ಅರಿತಿರುವ ನಿಗಮವು, ಆರ್ಥಿಕ ಪರಿಸ್ಥಿತಿಯು ಇನ್ನೂ ಚೇತರಿಕೆ ಹಂತದಲ್ಲಿದ್ದರೂ ಸಹ, ನಮ್ಮ ಸಿಬ್ಬಂದಿ ಹಾಗೂ ಕುಟುಂಬದವರು ಎಲ್ಲರಂತೆ ನಾಡಹಬ್ಬ ದಸರಾವನ್ನು ಉತ್ಸಾಹ ಮತ್ತು ಸಡಗರದಿಂದ ಆಚರಿಸಲಿ ಎಂಬ ಸದುದ್ದೇಶದೊಂದಿಗೆ ಅಕ್ಟೋಬರ್ 3ನೇ ತಾರೀಖಿನಂದು 2021-22ನೇ ಸಾಲಿನ ಗಳಿಕೆ ರಜೆ ನಗದೀಕರಣದ ಮೊತ್ತವನ್ನು ನಿಗಮದ ಎಲ್ಲ ಅರ್ಹ ಸಿಬ್ಬಂದಿಗೆ ಪಾವತಿಸಲು ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಅಪಘಾತ ರಹಿತ ಕಾರ್ಯಾಚರಣೆ: ನಿಗಮದ ಪ್ರತಿಯೊಂದು ಹಂತದಲ್ಲಿಯೂ ಸುಧಾರಣೆ ತರುವ ನಿಟ್ಟಿನಲ್ಲಿ ಈಗಾಗಲೇ ಪ್ರತಿ ಮಾಹೆ ಒಂದೊಂದು ಅಭಿಯಾನವನ್ನು ಜಾರಿಗೆ ತರಲಾಗಿದ್ದು, ಸೆಪ್ಟೆಂಬರ್-2022ರ ‘ಸ್ವಚ್ಛತಾ ಮತ್ತು ವಾಹನ ನಿರ್ವಹಣಾ’ ಮಾಸಿಕವನ್ನು ಅತ್ಯಂತ ಯಶಸ್ವಿಯಾಗಿ ಅನುಷ್ಠಾನಗೊಳಿಸಿರುವುದಕ್ಕೆ ಸಿಬ್ಬಂದಿಗೆ ಅಭಿನಂದನೆ ಸಲ್ಲಿಸಿರುವ ವ್ಯವಸ್ಥಾಪಕ ನಿರ್ದೇಶಕರು, ಅಕ್ಟೋಬರ್-2022ರ ಮಾಹೆಯಲ್ಲಿ ‘ಅಪಘಾತ ರಹಿತ ಕಾರ್ಯಾಚರಣೆ ಹಾಗೂ ಸಾರಿಗೆ ಆದಾಯ ಹೆಚ್ಚಿಸುವ ಅಭಿಯಾನವನ್ನು ಹಮ್ಮಿಕೊಂಡಿದೆ,
BREAKING NEWS : ಫಿಫಾ ಮಾಜಿ ರೆಫರಿ ‘ಸುಮಂತ ಘೋಷ್’ ವಿಧಿವಶ |Former FIFA referee Sumanta Ghosh passes away
ಸೌಲಭ್ಯಗಳನ್ನು ಒದಗಿಸಲು ನಿಗಮ ಸಶಕ್ತ: ಬಸ್ಗಳ ಅಪಘಾತಗಳನ್ನು ತಡೆಗಟ್ಟಲು ಅಮೂಲ್ಯ ಜೀವಗಳನ್ನು ಉಳಿಸುವುದು ನಮ್ಮ ಬದ್ಧತೆಯಾಗಿರಬೇಕು. ಹಾಗೆಯೇ ಸಾರಿಗೆ ಆದಾಯ ಏರಿಕೆಯಾದಲ್ಲಿ ಮತ್ತಷ್ಟು ಸೌಲಭ್ಯಗಳನ್ನು ಕಾರ್ಮಿಕರಿಗೆ ಒದಗಿಸಲು ನಿಗಮವು ಸಶಕ್ತವಾಗುತ್ತದೆ. ಈ ಕಾರ್ಯಯೋಜನೆಗೆ ತಾವೆಲ್ಲರೂ ಸಹಕರಿಸಿ, ಯಶಸ್ವಿಗೊಳಿಸುವಿರಿ ಎನ್ನುವ ಆಶಯ ವ್ಯಕ್ತಪಡಿಸಿದ್ದಾರೆ.
BREAKING NEWS : ಫಿಫಾ ಮಾಜಿ ರೆಫರಿ ‘ಸುಮಂತ ಘೋಷ್’ ವಿಧಿವಶ |Former FIFA referee Sumanta Ghosh passes away