ನವದೆಹಲಿ: ಕಾಂಗ್ರೆಸ್ ನಡೆಸುತ್ತಿರುವಂತ ಭಾರತ್ ಜೋಡೋ ಯಾತ್ರೆಯು ( Bharat Jodo Yatra ) ದೆಹಲಿಯನ್ನು ತಲುಪಿದೆ. ಈ ವೇಳೆಯಲ್ಲಿ ಅವರ ಕುಟುಂಬಸ್ಥರು ರಾಹುಲ್ ಗಾಂಧಿಯ ( Rahul Gandhi ) ಜೊತೆಗೆ ಹೆಜ್ಜೆ ಹಾಕಿದರು. ಇವರಷ್ಟೇ ಅಲ್ಲದೇ ಸೂಪರ್ ಸ್ಟಾರ್ ಕಮಲ್ ಹಾಸನ್ ( Superstar Kamal Haasan ) ಕೂಡ ಜೊತೆಯಾಗಿ ಹೆಜ್ಜೆಹಾಕಿ ಗಮನ ಸೆಳೆಯದರು.

ಜೆಡಿಎಸ್ ಅಧಿಕಾರಕ್ಕೆ ಬಂದರೇ 100 ದಿನದಲ್ಲಿ ಎನ್ ಪಿಎಸ್ ರದ್ದು – ಸಿ.ಎಂ ಇಬ್ರಾಹಿಂ | JDS Party

ಇಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವಂತ ಭಾರತ್ ಜೋಡೋ ಯಾತ್ರೆ ದೆಹಲಿಯನ್ನು ತಲುಪಿದೆ. ಕೇರಳ ಮಾರ್ಗವಾಗಿ ಸಾಗಿದಂತ ಯಾತ್ರೆ, ದೆಹಲಿಯನ್ನು ತಲುಪಿತ್ತಿದ್ದಂತೇ, ರಾಷ್ಟ್ರೀಯ ಕಾಂಗ್ರೆಸ್ ನಾಯಕರು ರಾಹುಲ್ ಗಾಂಧಿಗೆ ಸಾಥ್ ನೀಡಿದ್ದಾರೆ.

ವಿಕಲಚೇತನರಿಗೆ ಮಹತ್ವದ ಮಾಹಿತಿ: ಬಿಎಂಟಿಸಿ ಬಸ್ ಪಾಸ್ ಗೆ ಅರ್ಜಿ ಆಹ್ವಾನ, ಹಳೆಯ ಪಾಸ್ ಅವಧಿಯೂ ವಿಸ್ತರಣೆ

ರಾಹುಲ್ ಗಾಂಧಿಯ ಜೊತೆಗೆ ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ ಕೂಡ ಹೆಜ್ಜೆ ಹಾಕಿದ್ದು ಗಮನ ಸೆಳೆಯಿತು. ಇದನ್ನು ಅವರು, ಅವರಿಂದ ನಾನು ಪಡೆದ ಪ್ರೀತಿ, ನಾನು ಅದನ್ನು ದೇಶದೊಂದಿಗೆ ಹಂಚಿಕೊಳ್ಳುತ್ತಿದ್ದೇನೆ ಎಂಬುದಾಗಿ ಟ್ವಿಟ್ ಮಾಡಿ ತಿಳಿಸಿದ್ದಾರೆ.

ರಾಹುಲ್ ಗಾಂಧಿ ಕುಟುಂಬಸ್ಥರಲ್ಲದೇ, ನಟ ಕಮಲ್ ಹಾಸನ್ ಅವರು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ‘ಭಾರತ್ ಜೋಡೋ ಯಾತ್ರೆ’ಯಲ್ಲಿ ಪಾಲ್ಗೊಂಡರು. ಕಾಂಗ್ರೆಸ್ ನಡೆಯುಸುತ್ತಿರುವಂತ ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಜೊತೆಗೂ, ಅವರು ಹೆಜ್ಜೆಹಾಕಿ, ಗಮನ ಸೆಳೆಯದರು.

Share.
Exit mobile version