ರಾಯಚೂರು: ಇಂದಿನಿಂದ ಮೂರು ದಿನಗಳ ಕಾಲ ಭಾರತ್ ಜೋಡೋ ಯಾತ್ರೆಯು ರಾಯಚೂರು ಜಿಲ್ಲೆಯಲ್ಲಿ ಮುಂದುವರೆಯಲಿದೆ. ಈ ಯಾತ್ರೆಯಲ್ಲಿ ರಾಹುಲ್ ಜೊತೆ ಪ್ರಿಯಾಂಕ ಗಾಂಧಿ ಕೂಡ ನಾಳೆ ಭಾಗವಹಿಸುವ ಸಾಧ್ಯತೆಯಿದೆ.
ನಿನ್ನೆ ರಾಹುಲ್ ಗಾಂಧಿಯವರು ಮಂತ್ರಾಲಯ ಮಠದಲ್ಲಿ ರಾಘವೇಂದ್ರ ಸ್ವಾಮಿಗಳ ಮೂಲ ಬೃಂದಾವನದ ದರ್ಶನ ಪಡೆದು, ಮಂತ್ರಾಲಯದಲ್ಲಿಯೇ ವಾಸ್ತವ್ಯ ಹೂಡಿದ್ದರು. ಭಾರತ್ ಜೋಡೋ ಯಾತ್ರೆಯು ಇಂದು ಮಂತ್ರಾಲಯದಿಂದ ರಾಷ್ಟ್ರೀಯ ಹೆದ್ದಾರಿ 167ರ ಮೂಲಕ ಸಾಗಲಿದೆ. ಅ. 23ರಂದು ರಾಯಚೂರಿನಿಂದ ಕೃಷ್ಣಾ ನದಿ ಸೇತುವೆ ಮಾರ್ಗವಾಗಿ ತೆಲಂಗಾಣ ರಾಜ್ಯವನ್ನು ಪ್ರವೇಶಿಸಲಿದೆ.
BIG NEWS: ವಿಜಯಪುರ ವಿಮಾನ ನಿಲ್ದಾಣಕ್ಕೆ ʻಬಸವಣ್ಣʼನವರ ಹೆಸರಿಡಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ