ಮೈಸೂರು : ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆ ಇಂದು ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ಮೈಸೂರಿನ ಹರ್ಡಿಂಗೆ ರಸ್ತೆಯಿಂದ ಕಾಂಗ್ರೆಸ್ನ 4ನೇ ದಿನದ ಪಾದಯಾತ್ರೆ ಆರಂಭವಾಗಿದೆ.
ಹೈದರಾಬಾದ್: ಈಜಲು ಬಾರದಿದ್ರೂ ಕೆರೆಗೆ ಇಳಿದ ನಾಲ್ವರು ಮಕ್ಕಳು ನೀರು ಪಾಲು
ಪಾದಯಾತ್ರೆ ವೇಳೆ ರಾಹುಲ್ ಗಾಂಧಿ ನಗರದ ಮಸೀದಿ, ಚರ್ಚ್ಗಳಿಗೆ ಭೇಟಿ ನೀಡಿದ್ದಾರೆ. ಶಾಸಕ ತನ್ವೀರ್ ಸೇಠ್ ಅವರೊಂದಿಗೆ ನಗರದ ಆಜಂ ಮಸೀದಿಗೆ ರಾಹುಲ್ ಗಾಂಧಿ ಭೇಟಿ ನೀಡಿದರು. ಹಾಗೂ ಇದೇ ವೇಳೆ ಮಸೀದಿ ಎದುರಲ್ಲಿರುವ ಮೈಸೂರಿನ ಪ್ರಸಿದ್ಧ ಸೇಂಟ್ ಫಿಲೋಮಿನಾ ಚರ್ಚ್ಗೂ ರಾಹುಲ್ ಗಾಂಧಿ ಭೇಟಿ ನೀಡಿದ್ದಾರೆ.
ಇಂದಿನ ಭಾರತ್ ಜೋಡೋ ಪಾದಯಾತ್ರೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ, ತನ್ವೀರ್ ಸೇಠ್, ಡಾ. ಯತೀಂದ್ರ ರಾಹುಲ್ ಗಾಂಧಿ ಜೊತೆಗೆ ಹೆಜ್ಜೆ ಹಾಕುತ್ತಿದ್ದಾರೆ.