ರಾಯಚೂರು: ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ರಾಯಚೂರು ಪ್ರವೇಶ ಮಾಡಿದೆ. ರಾಯರ ದರ್ಶನ ಮುಗಿಸಿ ರಾಯಚೂರು ಪ್ರವೇಶ ಮಾಡಿದ ರಾಹುಲ್ ಗಾಂಧಿಗೆ ರಾಯಚೂರಿನಲ್ಲಿ ಭರ್ಜರಿ ಸ್ವಾಗತ ಸಿಕ್ಕಿದೆ.
ರಾಯಚೂರು ಜಿಲ್ಲೆಯ ಗಡಿಭಾಗದ ಗಿಲ್ಲೆಸೊಗೂರು ಭಾಗದಲ್ಲಿ ಕಾಂಗ್ರೆಸ್ ಮುಖಂಡರು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಬಿ.ಕೆ. ಹರಿಪ್ರಸಾದ್, ಯು.ಟಿ. ಖಾದರ್, ಕೃಷ್ಣ ಬೈರೇಗೌಡ, ಸಲೀಂ ಅಹ್ಮದ್ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.
https://kannadanewsnow.com/kannada/negligence-of-burning-green-firecrackers-during-diwali-celebrations-director-of-minto-eye-hospital-warns/