ಬೆಂಗಳೂರು : ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಬಡವರಿಗೆ 10 ಕೆಜಿ ಅಕ್ಕಿ ಕೊಡುವುದಾಗಿ ಘೋಷಣೆ ಮಾಡಿತ್ತು. ಆದರೆ ಕೇಂದ್ರ ಸರ್ಕಾರದಿಂದ ಬರುವ ಐದು ಕೆಜಿ ಅಕ್ಕಿಯನ್ನು ರಾಜ್ಯ ಸರ್ಕಾರಕ್ಕೆ ನೀಡಲು ಕೇಂದ್ರ ಒಪ್ಪದಿದ್ದಾಗ ಐದು ಕೆಜಿ ಬದಲಾಗಿ ಸರ್ಕಾರ ಪಡಿತರ ಖಾತೆಗೆ ಹಣ ನೀಡಿತು. ಇದೀಗ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದ್ದು, ಕೇಂದ್ರ ಆಹಾರ ನಿಗಮದಲ್ಲಿ ಅಕ್ಕಿ ಕೊಳೆಯುತ್ತಿದೆ.ಭಾರತ್ ಬ್ರಾಂಡ್ ಕೇವಲ ಚುನಾವಣಾ ಗಿಮಿಕ್ ಆಗಿ ಉಳಿತಾ ಎಂದು ಪ್ರಶ್ನಿಸಿದೆ.
ಈ ಕುರಿತಂತೆ ಸಾಮಾಜಿಕ ಜಾಲತಾಣ ಟ್ವೀಟ್ ನಲ್ಲಿ ಪ್ರಧಾನಿ ಮೋದಿ ಹಾಗೂ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಬಡವರ ಹೊಟ್ಟೆಗೆ ವಂಚಿಸುವುದಕ್ಕಿಂತ ದೊಡ್ಡ ಕ್ರೌರ್ಯ ಇನ್ನೊಂದಿಲ್ಲ.18 ಮಿಲಿಯನ್ ಟನ್ ಅಕ್ಕಿ ಹುಳು ಹಿಡಿದರೂ ಪರವಾಗಿಲ್ಲ, ಬಡವರ ಹೊಟ್ಟೆಗೆ ಅನ್ನವಾಗಬಾರದು ಎನ್ನುವ ಕೇಂದ್ರ ಸರ್ಕಾರದ ಧೂರ್ತತನಕ್ಕೆ ಜನತೆ ಪಾಠ ಕಲಿಸಲಿದ್ದಾರೆ.
ಅನ್ನಭಾಗ್ಯ ಯೋಜನೆಗಾಗಿ ರಾಜ್ಯ ಸರ್ಕಾರ ಕೆಜಿಗೆ 34 ರೂಪಾಯಿಯಂತೆ ಖರೀದಿಗೆ ಕೇಳಿದರೂ ಕೊಡಲೊಪ್ಪದ ಕೇಂದ್ರ ಸರ್ಕಾರ ಈಗ ಗೋದಾಮುಗಳಲ್ಲಿ ದಾಸ್ತಾನಿರುವ ಅಕ್ಕಿಯನ್ನು ಖಾಲಿ ಮಾಡಲು ಪರದಾಡುತ್ತಿದೆ.
24 ರೂಪಾಯಿಯ ಭಾರತ್ ಅಕ್ಕಿ ಕೇವಲ ಚುನಾವಣಾ ಗಿಮಿಕ್ ಆಗಿ ಉಳಿಯಿತೇ? ಖಾಸಗಿ ಕಂಪೆನಿಗಳೂ ಸಹ ಕೇಂದ್ರ ಆಹಾರ ನಿಗಮದ ಅಕ್ಕಿಯನ್ನು ಖರೀದಿಸಲು ಮುಂದಾಗಲಿಲ್ಲವೇ? ಖಾಲಿ ಮಾಡಲಾಗದಷ್ಟು ಅಕ್ಕಿ ಇದ್ದರೂ ಕನ್ನಡಿಗರಿಗೆ ವಂಚಿಸಿದ್ದೇಕೆ?ನಮ್ಮ ಸರ್ಕಾರ ಕೆಜಿಗೆ ₹34 ಕೊಟ್ಟು ಖರೀದಿಸಿದ್ದಿದ್ದರೆ ಆಹಾರ ನಿಗಮಕ್ಕೆ ಲಾಭವಾಗುತ್ತಿತ್ತು, ಆ ಲಾಭವನ್ನು ತಪ್ಪಿಸಿ ನಷ್ಟಕ್ಕೆ ತಳ್ಳಿದ್ದೇಕೆ? ಕನ್ನಡಿಗರಿಗೆ ಅಕ್ಕಿ ನೀಡದೆ ದ್ರೋಹ ಮಾಡಿದಿರಲ್ಲ,ಕನ್ನಡಿಗರು ನಿಮಗೆ ಯಾವ ಜನ್ಮದ ಶತ್ರುಗಳು? ಎಂದು ಪ್ರಶ್ನಿಸಿದೆ.
ಬಡವರ ಹೊಟ್ಟೆಗೆ ವಂಚಿಸುವುದಕ್ಕಿಂತ ದೊಡ್ಡ ಕ್ರೌರ್ಯ ಇನ್ನೊಂದಿಲ್ಲ.
18 ಮಿಲಿಯನ್ ಟನ್ ಅಕ್ಕಿ ಹುಳು ಹಿಡಿದರೂ ಪರವಾಗಿಲ್ಲ, ಬಡವರ ಹೊಟ್ಟೆಗೆ ಅನ್ನವಾಗಬಾರದು ಎನ್ನುವ ಕೇಂದ್ರ ಸರ್ಕಾರದ ಧೂರ್ತತನಕ್ಕೆ ಜನತೆ ಪಾಠ ಕಲಿಸಲಿದ್ದಾರೆ.
ಅನ್ನಭಾಗ್ಯ ಯೋಜನೆಗಾಗಿ ರಾಜ್ಯ ಸರ್ಕಾರ ಕೆಜಿಗೆ 34 ರೂಪಾಯಿಯಂತೆ ಖರೀದಿಗೆ ಕೇಳಿದರೂ ಕೊಡಲೊಪ್ಪದ ಕೇಂದ್ರ… pic.twitter.com/N15Cc4FaDb
— Karnataka Congress (@INCKarnataka) May 14, 2024