ಬೆಂಗಳೂರು : ಬೆಂಗಳೂರಲ್ಲಿ ಹೆಣ್ಣು ಮಕ್ಕಳ ಮೇಲು ಹಲ್ಲೆಯಾಗುತ್ತಿವೆ.ಭಜನೆ ಮಾಡಿದರು ಹಲ್ಲೆ ಮಾಡುತ್ತಿದ್ದಾರೆ ಬೀದಿ ಬೀದಿಯಲು ಸ್ಫೋಟವಾಗುತ್ತಿವೆ ಎಂದು ಬೆಂಗಳೂರು ಸಮಾವೇಶದಲ್ಲಿ ಪ್ರಧಾನಿ ಮೋದಿ ರಾಜ್ಯ ಸರ್ಕಾರದ ವಿರುದ್ಧ ಪ್ರಧಾನಿ ಮೋದಿ ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು, ಮೊದಲಿಗೆ ಕನ್ನಡದಲ್ಲಿ ಭಾಷಣ ಆರಂಭಿಸಿ ಮಾತನಾಡಿದ ಅವರು, ಬೆಂಗಳೂರಿನ ಜನತೆಗೆ ನನ್ನ ನಮಸ್ಕಾರಗಳು ಬೆಂಗಳೂರು ಅರಮನೆ ಮೈದಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಿದರು ತಾಯಿ ಭುವನೇಶ್ವರಿ ಅಣ್ಣಮ್ಮ ದೇವಿ ಬನಶಂಕರಿ ತಾಯಿ ದೊಡ್ಡ ಗಣಪತಿ ದೊಡ್ಡ ಬಸವಣ್ಣನ ಪಾದಗಳಿಗೆ ನನ್ನ ನಮನಗಳು
2014-19 ಚುನಾವಣೆಯಲ್ಲಿ ದಾಖಲೆ ಪ್ರಮಾಣದಲ್ಲಿ ಗೆಲ್ಲಿಸಿದ್ದೀರಿ. ಭಾರತದ ಬ್ಯಾಂಕಿಂಗ್ ವ್ಯವಸ್ಥೆ ಸಂಕಷ್ಟದಲ್ಲಿತ್ತು ಈಗ ಅದು ಬದಲಾಗಿದೆ 21ನೇ ಶತಮಾನದಲ್ಲಿ ಭಾರತದ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿದೆ, ಇಡೀ ದೇಶವೇ ನನ್ನ ಪರಿವಾರವಾಗಿದೆ.ಇಂಡಿಯಾ ಮೈತ್ರಿಕೂಟಕ್ಕೆ ಅವರವರ ಕುಟುಂಬವೇ ಮುಖ್ಯವಾಗಿದೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಇದೀಗ ಭಾರತದ ವೇಗವಾಗಿ ಬೆಳೆಯುತ್ತಿದೆ. ಮಧ್ಯಮ ವರ್ಗದ ಕುಟುಂಬ ಉತ್ತಮ ಜೀವನ ಅತ್ಯವಶ್ಯಕವಾಗಿದೆ. ಇದಕ್ಕಾಗಿ ಸಾಮಾಜಿಕ, ಆರ್ಥಿಕ ಹಾಗೂ ಡಿಜಿಟಲ್ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ದಾಖಲೆ ಪ್ರಮಾಣದಲ್ಲಿ ಅನುದಾನ ನೀಡಲಾಗಿದೆ. ಕಳೆದ 10 ವರ್ಷಗಳಲ್ಲಿ ಬಡವರಿಗೆ 1 ಕೋಟಿ ಮನೆ ನೀಡಲಾಗಿದೆ. ಇದರಲ್ಲಿ 84 ಸಾವಿರ ಮನೆ ಬೆಂಗಳೂರಿನ ಫಲಾನುಭವಿಗಲಿಗೆ ಸಿಕ್ಕಿದೆ ಎಂದಿದೆ.