ಶಿವಮೊಗ್ಗ: ಭಾಗ್ಯಲಕ್ಷ್ಮಿ ಬಾಂಡ್ ( bhagyalakshmi bond scheme) ಸ್ಥಗಿತಗೊಳಿಸಿಲ್ಲ. ಇದನ್ನು ನಿಲ್ಲಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಇದು ನಿರಂತರವಾಗಿ ನಡೆಯಲಿದೆ. ಮಗುವಿಗೆ 21 ವರ್ಷ ಮುಗಿದ ಬಳಿಕ ಬಾಂಡ್ ಮೊತ್ತ ಫಲಾನುಭವಿಗಳಿಗೆ ಸೇರುತ್ತದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟ ಪಡಿಸಿದ್ದಾರೆ.
ಭದ್ರಾವತಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಭಾನುವಾರ ಮಾತನಾಡಿದ ಸಚಿವರು, ರಾಜ್ಯದ ಬಹುತೇಕ ಜಲಾಶಯಗಳು 100 ವರ್ಷ, 50 ವರ್ಷ ಪೂರೈಸಿವೆ. ಹೀಗಾಗಿ ಸಣ್ಣಪುಟ್ಟ ತಾಂತ್ರಿಕ ಸಮಸ್ಯೆಗಳು ಉದ್ಭವಿಸುವುದು ಸಹಜ. ತುಂಗಭದ್ರಾ ಡ್ಯಾಂ ಗೇಟ್ನ ಚೈನ್ ಕಟ್ ಆಗಿರುವುದಕ್ಕೆ ಸರ್ಕಾರದ ನಿರ್ಲಕ್ಷ್ಯ ಎಂದು ಹೇಳಲು ಸಾಧ್ಯವಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರಾಜ್ಯದ ಎಲ್ಲಾ ಜಲಾಶಯಗಲ್ಲಿ ಮುಂಜಾಗ್ರತಾ ಕ್ರಮಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದರು.
ಭಾಗ್ಯಲಕ್ಷ್ಮೀ ಬಾಂಡ್ ಸ್ಥಗಿತಗೊಂಡಿಲ್ಲ
ಭಾಗ್ಯಲಕ್ಷ್ಮಿ ಬಾಂಡ್ ಸ್ಥಗಿತಗೊಳಿಸಿಲ್ಲ. ಇದನ್ನು ನಿಲ್ಲಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಇದು ನಿರಂತರವಾಗಿ ನಡೆಯಲಿದೆ. ಮಗುವಿಗೆ 21 ವರ್ಷ ಮುಗಿದ ಬಳಿಕ ಬಾಂಡ್ ಮೊತ್ತ ಫಲಾನುಭವಿಗಳಿಗೆ ಸೇರುತ್ತದೆ ಎಂದು ಸಚಿವರು ಹೇಳಿದರು.