ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಯಲ್ಲಿ ಭಗವದ್ಗೀತೆ ಹೋಲುವ ಪುಸ್ತಕ ಮುದ್ರಿಸಿ ಮಾರಾಟ ಮಾಡಲಾಗಿದ್ದು, ಹಿಂದೂ ಧರ್ಮದ ಅವಹೇಳನ ಮಾಡಿದ ಹಿನ್ನೆಲೆ ಪ್ರಕರಣ ದಾಖಲಾಗಿದೆ.
‘ಗೀತೆ ನಿನ್ನ ಜ್ಞಾನ ಅಮೃತ’ ಎನ್ನುವ ಪುಸ್ತಕ ಮುದ್ರಿಸಿ ಮಾರಾಟ ಮಾಡಲಾಗಿದೆ. ಪುಸ್ತಕಗಳಲ್ಲಿ ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿ ಲೇಖನ ಪ್ರಕಟಿಸಲಾಗಿದೆ ಎನ್ನುವ ಆರೋಪ ಕೇಳಿಬಂದಿದೆ.
ಹಿಂದೂ ಧರ್ಮದ ದೇವರು ಸರಿಯಿಲ್ಲ, ಗ್ರಂಥಗಳು ಸರಿಯಿಲ್ಲ, ಯಾರೂ ಕೂಡ ಹಿಂದೂ ದೇವರನ್ನು ಪೂಜೆ ಮಾಡಬಾರದು ಎಂದು ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ. ಇದಕ್ಕಿಂತ ಬೈಬಲ್ ಹಾಗೂ ಕುರಾನ್ ಗ್ರಂಥಗಳೇ ಶ್ರೇಷ್ಟ ಎಂದು ಹೇಳಲಾಗಿದೆ.
ಭಗವದ್ಗೀತೆ ಹೋಲುವ ಪುಸ್ತಕ ಮುದ್ರಿಸಿ 100 ರೂ ಮುಖಬೆಲೆಯ ಪುಸ್ತಕಗಳನ್ನು 10 ರೂಗೆ ಮಾರಾಟ ಮಾಡಲಾಗುತ್ತಿದೆ. ಪ್ರಕರಣ ಸಂಬಂಧ ಪುಸ್ತಕ ಮಾರುತ್ತಿದ್ದವನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಭದ್ರಾವತಿ ಹಳೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಿಡಬ್ಲ್ಯುಎಫ್ ವಿಶ್ವ Rankingನಲ್ಲಿ ಅಗ್ರ 5 ಸ್ಥಾನಕ್ಕೇರಿದ ‘ಪಿವಿ ಸಿಂಧು’ | PV Sindhu
BIGG NEWS : ಬೆಂಗಳೂರಿನಲ್ಲಿ ಗ್ರಹಣದ ವೇಳೆ ‘ಉಪಹಾರ ಸೇವನೆ’ : ಹಣ್ಣು, ತಿಂಡಿ ಸೇವಿಸಿ ಮೌಢ್ಯಕ್ಕೆ ಸೆಡ್ಡು
WATCH VIDEIO: ರಿಪೇರಿ ಮಾಡುವ ವೇಳೆ ಮೊಬೈಲ್ ಸ್ಪೋಟ, ಸಿಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ