ಮುಂಬೈ : ಉಸಿರಾಟ ಅಥವಾ ಜೀರ್ಣಾಂಗ ವ್ಯೂಹದ ಸೋಂಕಿನಿಂದ ಉಂಟಾಗುವ ಗಿಲೈನ್-ಬ್ಯಾರೆ ಸಿಂಡ್ರೋಮ್ (ಜಿಬಿಎಸ್) ಎಂಬ ವ್ಯಾಧಿಯಿಂದ ಮಹಾರಾಷ್ಟ್ರದ ಪುಣೆಯಲ್ಲಿ 100ಕ್ಕೂ ಹೆಚ್ಚು ಮಂದಿ ಬಳಲುತ್ತಿದ್ದಾರೆ. ಈ ಸೋಂಕಿಗೆ ಕಳೆದ ಜನವರಿ 28 ರಂದು ಸೋಲಾಪುರದಲ್ಲಿ ಒಬ್ಬ ವ್ಯಕ್ತಿ ಬಿಳಿಯಾಗಿದ್ದರು ಇದೀಗ ಮುಂಬೈನಲ್ಲಿ ಮತ್ತೊರ್ವ ವ್ಯಕ್ತಿ ಸಾವನಪ್ಪಿದ್ದಾರೆ.
ಹೌದು ಮಹಾರಾಷ್ಟ್ರದಲ್ಲಿ ಕಳೆದ ಹಲವು ದಿನಗಳಿಂದ ಹಲವಾರು ಜನರು ಈ ಒಂದು ಜಿಬಿಎಸ್ ವೈರಸ್ ನಿಂದ ಬಳಲುತ್ತಿದ್ದಾರೆ. ಕಳೆದ ಜನವರಿ 28ರಂದು ಸೊಲ್ಲಾಪುರದಲ್ಲಿ ಇದೆ ಬಿಜಿಎಸ್ ವೈರಸ್ ನಿಂದಾಗಿ ಮೊದಲ ಪ್ರಾಣ ಹೋಗಿದ್ದು, ಇದೀಗ ಮುಂಬೈನಲ್ಲಿ ಜಿಬಿಎಸ್ ವೈರಸ್ ನಿಂದ ಬಳಲುತ್ತಿದ್ದ 53 ವರ್ಷದ ವ್ಯಕ್ತಿಯೊರ್ವರು ಇದೀಗ ಸಾವನಪ್ಪಿದ್ದಾರೆ ಎಂದು ಬಲ್ಲಮೂಲಗಳಿಂದ ತಿಳಿದು ಬಂದಿದೆ.
ರೋಗ ಲಕ್ಷಣಗಳು
ಕೈ ಕಾಲುಗಳಲ್ಲಿ ಜೋಮು ಹಿಡಿಯುವುದು, ಶಕ್ತಿಹೀನತೆ (ದೌರ್ಬಲ್ಯ) ಮತ್ತು ಪಾರ್ಶ್ವವಾಯು ಮುಂತಾದವು ಜಿಬಿಎಸ್ನಿಂದ ಉಂಟಾಗಬಹುದು. ಈ ಲಕ್ಷಣಗಳು ಕಾಲುಗಳಿಂದ ಪ್ರಾರಂಭವಾಗಿ ದೇಹದ ಮೇಲ್ಭಾಗಕ್ಕೆ ವಿಸ್ತರಿಸುತ್ತದೆ. ವಾಕರಿಕೆ, ವಾಂತಿ, ಹೊಟ್ಟೆನೋವು, ಅತಿಸಾರ ಆರಂಭಿಕ ಲಕ್ಷಣಗಳಾಗಿದ್ದು, ಗಂಭೀರ ಹಂತಕ್ಕೆ ತಲುಪಿದಾಗ ಪಾರ್ಶ್ವವಾಯು ಸಂಭವಿಸುತ್ತದೆ.
ಇದೇ ಅಲ್ಲದೆ ಅಸ್ಥಿರ ನಡಿಗೆ, ಮೆಟ್ಟಿಲುಗಳನ್ನು ಏರಲು ಅಥವಾ ಇಳಿಯಲು ಅಸಮರ್ಥತೆ, ಮಾತನಾಡುವುದು, ಅಗಿಯುವುದು ಅಥವಾ ನುಂಗುವಾಗ ಮುಖ ಚಲನೆಯಲ್ಲಿ ತೊಂದರೆ, ದೃಷ್ಟಿಗೆ ಎರಡೆರಡಾಗಿ ಕಾಣಿಸುವುದು ಅಥವಾ ಕಣ್ಣುಗಳ ಚಲನೆಗೆ ಕಷ್ಟ ಮತ್ತು ನೋವಾಗುವುದು, ರಾತ್ರಿ ವೇಳೆ ಇನ್ನೂ ತುಂಬಾ ಕಷ್ಟವಾಗುವುದು, ಮೂತ್ರ ಮತ್ತು ಮಲ ವಿಸರ್ಜನೆ ಸಮಸ್ಯೆ, ಹೃದಯ ಬಡಿತ ಹೆಚ್ಚಳ, ಲೋ ಮತ್ತು ಹೈ ಬಿಪಿ ಹಾಗೂ ಉಸಿರಾಟಕ್ಕೆ ಸಮಸ್ಯೆ ಕೂಡ ಬಿಜಿಎಸ್ನ ಇತರ ಲಕ್ಷಣಗಳಾಗಿವೆ.
ಎಚ್ಚರಿಕೆ ಕ್ರಮಗಳು
ಸೋಂಕಿನ ಅಪಾಯ ತಡೆಯಲು ಆಹಾರ ನಿರ್ವಹಣೆ, ತಯಾರಿಕೆ ಮತ್ತು ಸೇವನೆಯಲ್ಲಿ ಎಚ್ಚರವಹಿಸಬೇಕು ಪಾಶ್ಚರೀಕರಿಸದ ಹಾಲು, ಡೈರಿ ಉತ್ಪನ್ನಗಳ ಬಳಕೆಯನ್ನು ತಪ್ಪಿಸಬೇಕು, ಈ ಹಾನಿಕಾರಕ ಬ್ಯಾಕ್ಟೀರಿಯಾ ತೆಗೆದುಹಾಕಲು ಆಹಾರವನ್ನು ಚೆನ್ನಾಗಿ ಬೇಯಿಸಬೇಕು,ಶುದ್ಧ ಆಹಾರ, ನೀರು ಸೇವನೆಯ ಜತೆಗೆ ಕೈ ಸೇರಿ ವೈಯಕ್ತಿಕ ಸ್ವಚ್ಛತೆಗೆ ಆದ್ಯತೆ ನೀಡಬೇಕು, ಕೋಳಿ ಮಾಂಸವನ್ನು ಚೆನ್ನಾಗಿ ತೊಳೆದು ಬೇಯಿಸಿ ಸೇವಿಸಬೇಕು, ಕಚ್ಚಾ ಮಾಂಸ ಮತ್ತು ಇತರ ಆಹಾರ ಪದಾರ್ಥಗಳಿಗೆ ಪ್ರತ್ಯೇಕ ಕತ್ತರಿಸುವ ಸಾಧನ ಹಾಗೂ ಪಾತ್ರೆಗಳನ್ನು ಬಳಸಿ.