ಕೆಎನ್ಎನ್ ಡಿಜಿಟಲ್ ಡೆಸ್ಕ್ : ಈ ವರ್ಷದ ವಿಶ್ವ ದೃಷ್ಟಿ ದಿನವನ್ನು ಅಕ್ಟೋಬರ್ 13ರ ಗುರುವಾರದಂದು ಆಚರಿಸಲಾಗುತ್ತಿದೆ. ಇದು ಕುರುಡುತನ ಮತ್ತು ದೃಷ್ಟಿ ದೌರ್ಬಲ್ಯದ ಬಗ್ಗೆ ಗಮನ ನೀಡಬೇಕಾದ ದಿನ ಎಂದರೆ ತಪ್ಪಗಲಾರದು
ರಾತ್ರಿ ವೇಳೆ ಸ್ಮಾರ್ಟ್ ಫೋನ್ಗಳು ಮತ್ತು ಡಿಜಿಟಲ್ ಸಾಧನಗಳ ಬಳಕೆಯು ದೃಷ್ಟಿಗೆ ಹಾನಿಯನ್ನುಂಟು ಮಾಡುತ್ತವೆ ಎಂದು ತಜ್ಞರು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ. ಇದರ ಜೊತೆಗೆ ದೃಷ್ಟಿಗೆ ಹಾನಿಯನ್ನುಂಟು ಮಾಡಿ ನಿಮ್ಮನ್ನು ಯಾವುದೇ ಸಮಯದಲ್ಲಿ ಅಂಧರನ್ನಾಗಿಸುವ ಇತರ ಕಾರಣಗಳೂ ಇವೆ.
ಕಣು, ಮಾನವ ಶರೀರದ ಅತ್ಯಂತ ಮುಖ್ಯ ಇಂದ್ರಿಯಗಳಲ್ಲಿ ಒಂದಾಗಿದ್ದು,ಅಂಧರಾಗಲು ಯಾರೂ ಬಯಸುವುದಿಲ್ಲ. ಟಿವಿಯ ಹತ್ತಿರ ಕುಳಿತು ನೋಡಬೇಡಿ,ಕಣ್ಣು ಹಾಳಾಗುತ್ತದೆ ಎಂದು ಮನೆಯಲ್ಲಿ ಹಿರಿಯರು ಮಕ್ಕಳಿಗೆ ಹೇಳುವುದನ್ನು ನೀವು ಕೇಳಿರಬಹುದು. ದೃಷ್ಟಿಗೆ ಹಾನಿಯನ್ನುಂಟು ಮಾಡಬಲ್ಲ ಮತ್ತು ಶಾಶ್ವತ ಅಂಧತ್ವಕ್ಕೆ ಕಾರಣವಾಗಬಹುದಾದ ಇತರ ಕಾರಣಗಳ ಬಗ್ಗೆ ಮಾಹಿತಿಯಿಲ್ಲಿದೆ.
BIGG NEWS: 382 ಮರಗಳನ್ನು ಕಡಿಯಲು ವಿಮಾನ ನಿಲ್ದಾಣ ಮೆಟ್ರೋ ಮಾರ್ಗಕ್ಕೆ ಚಾಲನೆ ನೀಡಿದ BMRCL
ಧೂಮಪಾನ
ಧೂಮಪಾನವು ಆರೋಗ್ಯಕ್ಕೆ ಕೆಟ್ಟದ್ದು. ಧೂಮಪಾನಿಗಳಿಗಂತೂ ಇದು ಚೆನ್ನಾಗಿ ಗೊತ್ತು,ಆದರೂ ಧೂಮ್ರಪಾನದ ಚಟವನ್ನು ಬಿಡುವುದಿಲ್ಲ. ಧೂಮ್ರಪಾನವು ಶ್ವಾಸಕೋಶಗಳಿಗೆ ಹಾನಿಯನ್ನುಂಟು ಮಾಡುತ್ತದೆ ಮತ್ತು ಕ್ಯಾನ್ಸರ್ಗೆ ಕಾರಣವಾಗುತ್ತದೆ. ಆದರೆ ಧೂಮಪಾನವು ಕಣ್ಣುಗಳಿಗೂ ಹಾನಿಯನ್ನುಂಟು ಮಾಡುತ್ತದೆ ಎನ್ನುವುದು ನಿಮಗೆ ಗೊತ್ತೇ? ಸಿಗರೇಟ್ನಲ್ಲಿರುವ ರಾಸಾಯನಿಕಗಳು ರಕ್ತನಾಳಗಳನ್ನು ಸಂಕುಚಿಸುವ ಮೂಲಕ ಕಣುಗಳಿಗೆ ಆಮ್ಲಜನಕ ಮತ್ತು ರಕ್ತದ ಹರಿವಿಗೆ ವ್ಯತ್ಯಯವನ್ನುಂಟು ಮಾಡುತ್ತವೆ. ಧೂಮ್ರಪಾನ ಮತ್ತು ಸಿಗರೇಟಿನ ಹೊಗೆ ಕ್ರಮೇಣ ಕಣ್ಣುಗಳ ಜೀವಕೋಶಗಳಿಗೆ ಶಾಶ್ವತ ಹಾನಿಯನ್ನುಂಟು ಮಾಡುತ್ತವೆ, ಇದು ಅಕ್ಷಿಪಟಲದ ಅವನತಿಗೆ ಮತ್ತು ಅಂತಿಮವಾಗಿ ಅಂಧತ್ವಕ್ಕೆ ಕಾರಣವಾಗಬಹುದು.
BIGG NEWS: 382 ಮರಗಳನ್ನು ಕಡಿಯಲು ವಿಮಾನ ನಿಲ್ದಾಣ ಮೆಟ್ರೋ ಮಾರ್ಗಕ್ಕೆ ಚಾಲನೆ ನೀಡಿದ BMRCL
ಕಾಂಟ್ಯಾಕ್ಟ್ ಲೆನ್ಸ್ ಗಳು
ಕಾಂಟ್ರ್ಯಾಕ್ಟ್ ಲೆನ್ಸ್ ಅಥವಾ ಸ್ಪರ್ಶ ಮಸೂರಗಳೂ ಅಂಧತ್ವಕ್ಕೆ ಕಾರಣವಾಗುತ್ತದೆ ಎನ್ನುವುದು ಹೆಚ್ಚಿನವರಿಗೆ ಅಚ್ಚರಿ-ಆಘಾತವನ್ನುಂಟು ಮಾಡಬಹುದು. ಇವುಗಳನ್ನು ಸರಿಯಾಗಿ ಧರಿಸದಿದ್ದರೆ ಮತ್ತು ಸೂಕ್ತವಾಗಿ ನಿರ್ವಹಿಸದಿದ್ದರೆ ಕಣ್ಣುಗಳಿಗೆ ಹಾನಿಯುಂಟಾಗಬಹುದು. ಕಾಂಟ್ಯಾಕ್ಟ್ ಲೆನ್ಸ್ಗಳ ವಿಷಯದಲ್ಲಿ ಒಂದು ಸಣ್ಣ ತಪ್ಪು ಕೂಡ ಕಣ್ಣುಗಳಿಗೆ ಸೋಂಕನ್ನು ಮಾಡಬಲ್ಲದು ಮತ್ತು ಈ ಸೋಂಕು ಶಾಶ್ವತ ಅಂಧತ್ವಕ್ಕೆ ಕಾರಣವಾಗುತ್ತದೆ. ಈ ಲೆನ್ಸ್ಗಳನ್ನು ಧರಿಸಿಕೊಂಡು ಮಲಗಿದರೆ ಕಣ್ಣುಗಳಿಗೆ ಆಮ್ಲಜನಕದ ಪೂರೈಕೆಗೆ ಅಡ್ಡಿಯುಂಟಾಗುತ್ತದೆ ಮತ್ತು ದೃಷ್ಟಿನಾಶವುಂಟಾಗುತ್ತದೆ. ಅಲ್ಲದೆ ಕಾಂಟ್ಯಾಕ್ಟ್ ಲೆನ್ಸ್ಗಳನ್ನು ಸದಾ ಸ್ವಚ್ಛವಾಗಿರಿಸಿಕೊಳ್ಳುವುದು ಕೂಡ ತುಂಬ ಮುಖ್ಯವಾಗಿದೆ.
BIGG NEWS: 382 ಮರಗಳನ್ನು ಕಡಿಯಲು ವಿಮಾನ ನಿಲ್ದಾಣ ಮೆಟ್ರೋ ಮಾರ್ಗಕ್ಕೆ ಚಾಲನೆ ನೀಡಿದ BMRCL
ಔಷಧಿಗಳು
ಔಷಧಿಗಳ ಅಡ್ಡಪರಿಣಾಮಗಳು ಕಣ್ಣುಗಳಿಗೆ ಮತ್ತು ದೃಷ್ಟಿಗೆ ಭಾರೀ ಬೆದರಿಕೆಯಾಗಿವೆ. ದೃಷ್ಟಿಯು ಉತ್ತಮವಾಗಿರಲು ಕಣ್ಣುಗಳಿಗೆ ಸಾಕಷ್ಟು ರಕ್ತ ಪೂರೈಕೆಯಾಗುತ್ತಿರಬೇಕು.ಇಲ್ಲದಿದ್ದರೆ ಅಂಧತ್ವದ ಲಕ್ಷಣಗಳು ಕಂಡುಬರುತ್ತವೆ. ಕೆಲವು ಔಷಧಿಗಳ ಕಣಗಳು ಅಕ್ಷಿಪಟಲದ ಮೇಲೆ ಸಂಗ್ರಹಗೊಂಡು ದೃಷ್ಟಿ ದೌರ್ಬಲ್ಯಕ್ಕೆ ಕಾರಣವಾಗುತ್ತವೆ. ಹೆಚ್ಚಿನ ಡೋಸೇಜ್ಗಳಲ್ಲಿ ಸೇವಿಸಬೇಕಾದ ಔಷಧಿಗಳಲ್ಲಿ ಈ ಅಡ್ಡ ಪರಿಣಾಮವು ಹೆಚ್ಚಾಗಿ ಕಂಡು ಬರುತ್ತದೆ. ಇಂತಹ ಔಷಧಿಗಳನ್ನು ಸೇವಿಸುತ್ತಿದ್ದರೆ ವೈದ್ಯರೊಂದಿಗೆ ಸಮಾಲೋಚಿಸಿ ಪರ್ಯಾಯ ಔಷಧಿಗಳ ಬಗ್ಗೆ ತಿಳಿದುಕೊಳ್ಳಿ.
ಸೂರ್ಯ
ಸೂರ್ಯಾಸ್ತವು ದಿನದ ಅತ್ಯಂತ ಸುಂದರ ಘಳಿಗೆಗಳಲ್ಲಿ ಒಂದಾಗಿದ್ದು ಎಲ್ಲರೂ ಅದನ್ನು ವೀಕ್ಷಿಸಲು ಬಯಸುತ್ತಾರೆ. ಆದರೆ ಸುದೀರ್ಘ ಸಮಯ ಸೂರ್ಯಾಸ್ತವನ್ನು ವೀಕ್ಷಿಸಿದರೆ ಸೂರ್ಯನ ಕಿರಣಗಳು ಅಂಧತ್ವಕ್ಕೆ ಕಾರಣವಾಗುತ್ತವೆ ಎಂದು ಕೆಲವು ಅಧ್ಯಯನಗಳು ಬಹಿರಂಗಗೊಳಿಸಿವೆ. ಇಳಿಸಂಜೆಯ ಸೂರ್ಯನ ಕಿರಣಗಳಿಗೆ ಹೆಚ್ಚು ಒಪ್ಪಿಕೊಳ್ಳುವುದರಿಂದ ಅವು ಕಣ್ಣುಗಳ ಅಕ್ಷಿಪಟಲವನ್ನು ದಹಿಸುವ ಮೂಲಕ ಅಂಧತ್ವವನ್ನುಂಟು ಮಾಡುತ್ತವೆ. ಆದರೆ ಹೀಗಾಗಲೇಬೇಕು ಎಂದೇನಿಲ್ಲ ಮತ್ತು ಎಲ್ಲರಿಗೂ ಇಂತಹ ಅಪಾಯವುಂಟಾಗುವುದಿಲ್ಲ ಆದರೂ ಮುಂಜಾಗ್ರತೆಯು ಚಿಕಿತ್ಸೆಗಿಂತ ಒಳ್ಳೆಯದು, ಸುದೀರ್ಘ ಸಮಯ ಸೂರ್ಯಾಸ್ತವನ್ನು ವೀಕ್ಷಿಸುವುದಿದ್ದರೆ ಕಣ್ಣುಗಳಿಗೆ ಯಾವುದೇ ಸಂಭಾವ್ಯ
ಹಾನಿಯನ್ನು ನಿವಾರಿಸಲು ಸಂರಕ್ಷಕ ಕನ್ನಡಕಗಳನ್ನು ಧರಿಸುವುದು ಒಳ್ಳೆಯದು.
ಮಹಿಳೆಯರು ಅವಧಿಗೆ ಮುನ್ನವೆ ಋತುಬಂಧಕ್ಕೊಳಗಾಗುವುದು ಅವರ ಶರೀರದಲ್ಲಿ ಬದಲಾವಣೆಗಳನ್ನು ತರುವ ಜೊತೆಗೆ ಡ್ರೈ ಸಮಸ್ಯೆಗಳಿಗೂ ಕಾರಣವಾಗಬಹುದು, ಋತುಬಂಧದ ಸಂದರ್ಭದಲ್ಲಿ ಹಾರ್ಮೋನ್ಗಳಲ್ಲಿ ಏರಿಳಿತಗಳು ದೃಷ್ಟಿ ದುರ್ಬಲಕ ಕಾರಣವಾಗಬಹುದು. ಇಂತಹ ಮಹಿಳೆಯರು ಅಂಧತ್ವದ ಅಪಾಯವನ್ನು ಹೆಚ್ಚಿಸುವ ನೇತ್ರರೋಗ ಡಾ.ಕೂಮಾಕ್ಕೆ ತುತ್ತಾಗಬಹುದು, ಹೀಗಾಗಿ 41 ವರ್ಷಕ್ರಮದಲ ಋತುಬಂಧವಾಗಿರುವ ಮಹಿಳೆಯರು ತಮ್ಮ ಕಣುಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ನಿಯಮಿತವಾಗಿ ಅವುಗಳ ತಪಾಸಣೆಯನ್ನು ಮಾಡಬೇಕು.
BIGG NEWS: 382 ಮರಗಳನ್ನು ಕಡಿಯಲು ವಿಮಾನ ನಿಲ್ದಾಣ ಮೆಟ್ರೋ ಮಾರ್ಗಕ್ಕೆ ಚಾಲನೆ ನೀಡಿದ BMRCL