Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರಾಮಚರಿತಮಾನಸದ ಈ ಶ್ಲೋಕಗಳು ನಿಮ್ಮ ಎಲ್ಲಾ ಆಸೆ ಪೂರೈಸುತ್ವೆ, ದೊಡ್ಡ ಸಮಸ್ಯೆ ಸಹ ದೂರವಾಗುತ್ವೆ!

28/06/2025 5:28 PM

Watch Video: ಗುತ್ತಿಗೆ ಸ್ಟಾಫ್ ನರ್ಸ್ ರಿನೀವಲ್ ಗೆ ಲಂಚಕ್ಕೆ ಬೇಡಿಕೆ ಇಟ್ಟ ವೈದ್ಯ: ಆಡಿಯೋ ವೈರಲ್

28/06/2025 5:26 PM

CBSE Important Notice 2025 : ‘ವಿದ್ಯಾರ್ಥಿ ವೇತನ’ಕ್ಕಾಗಿ ಅರ್ಜಿ ಆಹ್ವಾನ, ಯಾರೆಗೆಲ್ಲಾ ಲಭ್ಯ.? ಅರ್ಜಿ ಸಲ್ಲಿಕೆ ಹೇಗೆ ಗೊತ್ತಾ.?

28/06/2025 4:39 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಎಚ್ಚರ.! ಇನ್ಮುಂದೆ ರಾಜ್ಯದಲ್ಲಿ ‘ಕಲರ್ ಕಾಟನ್ ಕ್ಯಾಂಡಿ’ ಮಾರಾಟ ಮಾಡಿದ್ರೆ 7 ವರ್ಷ ಜೈಲು, 10 ಲಕ್ಷ ದಂಡ ಫಿಕ್ಸ್
KARNATAKA

ಎಚ್ಚರ.! ಇನ್ಮುಂದೆ ರಾಜ್ಯದಲ್ಲಿ ‘ಕಲರ್ ಕಾಟನ್ ಕ್ಯಾಂಡಿ’ ಮಾರಾಟ ಮಾಡಿದ್ರೆ 7 ವರ್ಷ ಜೈಲು, 10 ಲಕ್ಷ ದಂಡ ಫಿಕ್ಸ್

By kannadanewsnow0911/03/2024 2:31 PM

ಬೆಂಗಳೂರು: ರಾಜ್ಯಾಧ್ಯಂತ ಕಲರ್ ಕಾಟನ್ ಕ್ಯಾಂಡಿ ಮಾರಾಟವನ್ನು ನಿಷೇಧ ಮಾಡಿ, ರಾಜ್ಯ ಸರ್ಕಾರ ಆದೇಶಿಸಿದೆ. ಒಂದು ವೇಳಎ ನಿಯಮ ಮೀರಿ ಕಲರ್ ಕ್ಯಾಂಡಿ ಮಾರಾಟ ಮಾಡಿದ್ರೇ ಅಂತವರಿಗೆ 7 ವರ್ಷ ಜೈಲು, 10 ಲಕ್ಷ ದಂಡವನ್ನು ವಿಧಿಸುವುದಾಗಿ ಎಚ್ಚರಿಕೆ ನೀಡಿದೆ.

ಈ ಕುರಿತಂತೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಅದರಲ್ಲಿ ರಾಜ್ಯಾದ್ಯಂತ ಮಾರಾಟ ಮಾಡಲಾಗುತ್ತಿರುವ Cotton Candy ಗಳ ಗುಣಮಟ್ಟ ಕೃತಕ ಬಣ್ಣಗಳ ಬೆರೆಸುವಿಕೆಯಿಂದಾಗಿ ಉತ್ತಮವಾಗಿಲ್ಲದಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಮಾರಾಟ ಮಾಡಲಾಗುತ್ತಿರುವ Cotton Candy ಗಳ ಮಾದರಿಗಳನ್ನು ಸಂಗ್ರಹಿಸಿ ರಾಜ್ಯ ಪ್ರಯೋಗಾಲಯಗಳಲ್ಲಿ ವಿಶ್ಲೇಷಣೆಗೊಳಪಡಿಸಲಾಗಿರುತ್ತದೆ ಎಂದಿದ್ದಾರೆ.

ದಿನಾಂಕ:12.02.2024 ರಿಂದ ಇದುವರೆಗೆ ರಾಜ್ಯಾದ್ಯಂತ ಮಾರಾಟ ಮಾಡಲಾಗುತ್ತಿರುವ 25 Cotton Candy ಮಾದರಿಗಳನ್ನು ಸಂಗ್ರಹಿಸಿ ರಾಜ್ಯ ಪ್ರಯೋಗಾಲಯಗಳಲ್ಲಿ ವಿಶ್ಲೇಷಣೆಗೊಳಪಡಿಸಲಾಗಿರುತ್ತದೆ. ವಿಶ್ಲೇಷಣೆಗೊಳಪಡಿಸಲಾದ ಮಾದರಿಗಳಲ್ಲಿ 15 Cotton Candy ಮಾದರಿಗಳು ಕೃತಕ ಬಣ್ಣದಿಂದ (ಟಾರ್‌ಟ್ರಾಸೈನ್‌ ಕೃತಕ ಬಣ್ಣ 5 ಮಾದರಿಗಳು, ಸನ್ ಸೆಟ್ ಯೆಲ್ಲೋ 4 ಮಾದರಿಗಳು ಮತ್ತು ರೋಡಮೈನ್ಬಿ ಹೊಂದಿರುವ ಮಾದರಿಗಳು 6) ಕೂಡಿರುವುದರಿಂದ ಅಸುರಕ್ಷಿತ ಎಂದು ವಿಶ್ಲೇಷಣಾ ವರದಿಗಳಲ್ಲಿ ಕಂಡುಬಂದಿದ್ದು, The Food Safety and Standards Act, 2006 ರ ನಿಯಮ 3(1)(zz)(v)(viii)ರನ್ವಯ ಅಸುರಕ್ಷಿತ ಎಂದು ವರದಿ ಮಾಡಲ್ಪಟ್ಟಿರುತ್ತವೆ ಎಂದು ತಿಳಿಸಿದೆ.

The Food Safety and Standards (Food Products Standards and Food Additives) Regulations, 2011ರ ನಿಯಮಗಳಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಉಪಯೋಗಿಸಲು ಅವಕಾಶವಿಲ್ಲದೆ ಇರುವ ಕೃತಕ ಬಣ್ಣಗಳನ್ನು ಉಪಯೋಗಿಸುವಂತಿರುವುದಿಲ್ಲ. ಕೃತಕ ಬಣ್ಣಗಳು ಬಳಕೆದಾರರ ಆರೋಗ್ಯದ ಮೇಲೆ ತೀವ್ರ ಪರಿಣಾಮ ಉಂಟುಮಾಡಬಹುದಾಗಿರುತ್ತದೆ ಎಂದು ಎಚ್ಚರಿಸಿದ್ದಾರೆ.

ಈ ಹಿನ್ನೆಲೆಯಲ್ಲಿ Cotton Candy ಯ ತಯಾರಿಕೆಯಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಉಪಯೋಗಿಸಲು ಅವಕಾಶವಿಲ್ಲದೆ ಇರುವ ಕೃತಕ ಬಣ್ಣಗಳನ್ನು ಬಳಸುವುದಕ್ಕೆ The Food Safety and Standards Act, 2006 ನಿಯಮ 3(1)(zz)(v)(viii) ಉಪಯೋಗಿಸಲು ಅವಕಾಶವಿಲ್ಲದಿರುವುದರಿಂದ Cotton Candy ಯ ತಯಾರಿಕೆಯಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಕೃತಕ ಬಣ್ಣಗಳನ್ನು ಬಳಸುವುದನ್ನು ಮತ್ತು ರೋಡಮೈನ್-ಬಿ ಸೇರಿದಂತೆ ಅವಕಾಶವಿಲ್ಲದೆ ಇರುವ ಕೃತಕ ಬಣ್ಣಗಳನ್ನು ಬಳಸುವುದನ್ನು ನಿರ್ಬಂಧಿಸಿ ಆದೇಶಿಸಿದೆ.

ಉಲ್ಲಂಘನೆಯ ಪ್ರಕರಣಗಳು ಕಂಡುಬಂದಲ್ಲಿ ತಯಾರಿಸುವವರ ಮೇಲೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ- 2006ರ ನಿಯಮ 50ರಡಿ 7 ವರ್ಷಗಳಿಂದ ಜೀವಾವಧಿ ಅವಧಿಯವರೆಗೆ ಜೈಲು ಶಿಕ್ಷೆಯನ್ನು ಮತ್ತು .10.00 ಲಕ್ಷಗಳವರೆಗೆ ದಂಡವನ್ನು ವಿಧಿಸಲು ನ್ಯಾಯಾಲಯದಲ್ಲಿ ಮೊಕದ್ದಮೆಗಳನ್ನು ದಾಖಲಿಸಲಾಗುವುದು ಎಂಬುದಾಗಿ ಖಡಕ್ ಎಚ್ಚರಿಕೆ ನೀಡಿದ್ದಾರೆ.

BIG Alert: ನೀವು ‘ಗೋಬಿ ಮಂಚೂರಿ’ ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಿದ್ದೀರಾ.? ಹಾಗಿದ್ದರೇ ಇಲ್ಲಿದೆ ‘ಶಾಕಿಂಗ್ ನ್ಯೂಸ್’

ಬೆಂಗಳೂರಲ್ಲಿ ಹೊಸ ಆಸ್ತಿ ತೆರಿಗೆ ಪದ್ಧತಿ, ಖಾತಾ ವಿತರಣೆಯಲ್ಲಿ ಕ್ರಾಂತಿಕಾರಕ ಬದಲಾವಣೆ- DCM ಡಿಕೆಶಿ

‘ಹಳೆಯ ತಂತ್ರ, ಎಂದಿಗೂ ರಹಸ್ಯವಲ್ಲ’: ಬಿಜೆಪಿ ಸಂಸದರ ‘ಸಂವಿಧಾನ ಬದಲಾವಣೆ’ ಹೇಳಿಕೆಗೆ ಚಿದಂಬರಂ ತಿರುಗೇಟು

Share. Facebook Twitter LinkedIn WhatsApp Email

Related Posts

Watch Video: ಗುತ್ತಿಗೆ ಸ್ಟಾಫ್ ನರ್ಸ್ ರಿನೀವಲ್ ಗೆ ಲಂಚಕ್ಕೆ ಬೇಡಿಕೆ ಇಟ್ಟ ವೈದ್ಯ: ಆಡಿಯೋ ವೈರಲ್

28/06/2025 5:26 PM2 Mins Read

BREAKING : ಇಂದಿರಾಗಾಂಧಿಗೆ ಅವಹೇಳನ : ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಕೈ ಕಾರ್ಯಕರ್ತರು ವಶಕ್ಕೆ

28/06/2025 4:33 PM1 Min Read

BIG NEWS : ಸಂವಿಧಾನ ಮಾಡಿರೋದಲ್ಲ, ಪಾರ್ಲಿಮೆಂಟ್ ನಲ್ಲಿ ಚರ್ಚಿಸಿ ರಚನೆ ಆಗಿರೋದು : ಸಿಎಂ ಸಿದ್ದರಾಮಯ್ಯ

28/06/2025 4:20 PM1 Min Read
Recent News

ರಾಮಚರಿತಮಾನಸದ ಈ ಶ್ಲೋಕಗಳು ನಿಮ್ಮ ಎಲ್ಲಾ ಆಸೆ ಪೂರೈಸುತ್ವೆ, ದೊಡ್ಡ ಸಮಸ್ಯೆ ಸಹ ದೂರವಾಗುತ್ವೆ!

28/06/2025 5:28 PM

Watch Video: ಗುತ್ತಿಗೆ ಸ್ಟಾಫ್ ನರ್ಸ್ ರಿನೀವಲ್ ಗೆ ಲಂಚಕ್ಕೆ ಬೇಡಿಕೆ ಇಟ್ಟ ವೈದ್ಯ: ಆಡಿಯೋ ವೈರಲ್

28/06/2025 5:26 PM

CBSE Important Notice 2025 : ‘ವಿದ್ಯಾರ್ಥಿ ವೇತನ’ಕ್ಕಾಗಿ ಅರ್ಜಿ ಆಹ್ವಾನ, ಯಾರೆಗೆಲ್ಲಾ ಲಭ್ಯ.? ಅರ್ಜಿ ಸಲ್ಲಿಕೆ ಹೇಗೆ ಗೊತ್ತಾ.?

28/06/2025 4:39 PM

BREAKING : ಇಂದಿರಾಗಾಂಧಿಗೆ ಅವಹೇಳನ : ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಕೈ ಕಾರ್ಯಕರ್ತರು ವಶಕ್ಕೆ

28/06/2025 4:33 PM
State News
KARNATAKA

Watch Video: ಗುತ್ತಿಗೆ ಸ್ಟಾಫ್ ನರ್ಸ್ ರಿನೀವಲ್ ಗೆ ಲಂಚಕ್ಕೆ ಬೇಡಿಕೆ ಇಟ್ಟ ವೈದ್ಯ: ಆಡಿಯೋ ವೈರಲ್

By kannadanewsnow0928/06/2025 5:26 PM KARNATAKA 2 Mins Read

ಚಿತ್ರದುರ್ಗ: ಜಿಲ್ಲೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವಂತ ಸ್ಟಾಫ್ ನರ್ಸ್ ಒಪ್ಪರ ಕಾಂಟ್ರಾಕ್ಟ್ ಮುಂದುವರೆಸೋದಕ್ಕೆ, ರಿನೀವಲ್ ಮಾಡಿಕೊಡೋದಕ್ಕೆ ಸಾವಿರಾರು…

BREAKING : ಇಂದಿರಾಗಾಂಧಿಗೆ ಅವಹೇಳನ : ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಕೈ ಕಾರ್ಯಕರ್ತರು ವಶಕ್ಕೆ

28/06/2025 4:33 PM

BIG NEWS : ಸಂವಿಧಾನ ಮಾಡಿರೋದಲ್ಲ, ಪಾರ್ಲಿಮೆಂಟ್ ನಲ್ಲಿ ಚರ್ಚಿಸಿ ರಚನೆ ಆಗಿರೋದು : ಸಿಎಂ ಸಿದ್ದರಾಮಯ್ಯ

28/06/2025 4:20 PM

BIG NEWS : ಪ್ರವಾಸಿಗರೇ ಗಮನಿಸಿ : ಜೂ.30 ರಿಂದ ಜು.3ರವರೆಗೆ ನಂದಿಬೆಟ್ಟಕ್ಕೆ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧ

28/06/2025 4:00 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.