ರಾಯಚೂರು : ಸಾಮಾನ್ಯವಾಗಿ ಗಂಡು ಅಥವಾ ಹೆಣ್ಣು ತಮಗೆ ಬಾಳ ಸಂಗಾತಿ ಸಿಗದೇ ಇರುವ ಯುವ ಜನತೆಗೆ ಅನುಕೂಲ ಆಗಲೆಂದೆ ಮ್ಯಾಟ್ರಿಮೊನಿ ಎಂಬ ಒಂದು ಆಪ್ ಪರಿಚಯಿಸಲಾಗಿದೆ. ಆದರೆ ಈ ಒಂದು ಆಪ್ ಇದೀಗ ದುರ್ಬಳಕೆ ಆಗುತ್ತಿದ್ದು, ಸರ್ಕಾರಿ ನೌಕರ ಒಬ್ಬ ಮ್ಯಾಟ್ರಿಮೊನಿಯಲ್ಲಿ ಚೆಂದದ ಯುವತಿಯನ್ನು ಬಲೆಗೆ ಬೀಳಿಸಿಕೊಂಡು ಮದುವೆಯಾಗಿ ನಂತರ ಬೀದಿಗೆ ತಳ್ಳುವ ಘಟನೆ ರಾಯಚೂರಿನಲ್ಲಿ ನಡೆದಿದೆ.
ಹೌದು ರಾಯಚೂರು ಜಿಲ್ಲೆ ಮಾನ್ವಿ ಜೆಸ್ಕಾಂ ಸಹಾಯಕ ಇಂಜಿನಿಯರ್ ಆಗಿರುವ ಗುರುರಾಜ್ ನಾಯಕ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ರಾಯಚೂರು ಜಿಲ್ಲೆ ಮಾನ್ವಿ ಪಟ್ಟಣದ ಅಮೃತಾ ಎಂಬ ಮಹಿಳೆ ಆರೋಪ ಮಾಡಿದವರಾಗಿದ್ದಾರೆ. ಈತನಿಗೆ ಮೊದಲೇ ಮದುವೆಯಾಗಿದ್ದರು ಕೂಡ ಸುಳ್ಳು ಹೇಳಿ ನನ್ನನ್ನು ಮದುವೆಯಾಗಿದ್ದಾನೆ ಎಂದು ಆರೋಪಿಸಿದ್ದಾರೆ.ಈ ಬಗ್ಗೆ ಸಂತ್ರಸ್ತ ಮಹಿಳೆ ಅಮೃತಾ ಎರಡು ಬಾರಿ ತನ್ನ ಪತಿ ವಿರುದ್ಧ ಮಾನ್ವಿ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.
ಮ್ಯಾಟ್ರಿಮೂನಿದಲ್ಲಿ ಅಮೃತಾ ಮತ್ತು ಗುರುರಾಜ್ ನಾಯಕ ಪರಿಚಯವಾಗಿದೆ. ನಾನು ನಿನ್ನನ್ನು ಮದುವೆ ಮಾಡಿಕೊಳ್ಳುತ್ತೇನೆ ಎಂದು ಭರವಸೆ ನೀಡಿದ ಸರ್ಕಾರಿ ನೌಕರ ಗುರುರಾಜ್ ನಾಯಕ ಅಮೃತಾಳನ್ನು 2021ರ ಜನವರಿ 10ರಂದು ಅಂತರ್ಜಾತಿ ವಿವಾಹ ಆಗಿದ್ದಾನೆ. ಇದಾದ ನಂತರ ಗುರುರಾಜನಿಗೆ ಮೊದಲೇ ಮದುವೆಯಾಗಿತ್ತು ಎಂಬ ವಿಚಾರ ಗೊತ್ತಾಗಿದೆ. ಬಳಿಕ ಮನೆಯಿಂದ ಹೊರ ಹೋಗುವಂತೆ ಅಮೃತ ಮೇಲೆ ಹಲ್ಲೆ ಮಾಡಿದ್ದಾನೆ.
ಜೊತೆಗೆ, ನನ್ನನ್ನು ಕೊಲೆ ಮಾಡುವುದಕ್ಕೆ ಪತಿ ಕಡೆಯವರು ಪ್ರಯತ್ನ ಮಾಡುತ್ತಿದ್ದಾರೆ ಎಂದು ಅಮೃತಾ ಆರೋಪ ಮಾಡಿದ್ದಾರೆ.ನೀನು ನನ್ನ ಮೇಲೆ ದೂರು ಕೊಟ್ಟರೆ ಫಸ್ಟ್ ನೈಟ್ ವಿಡಿಯೋ ವೈರಲ್ ಮಾಡುವುದಾಗಿ ಪತ್ನಿಗೆ ಪತಿ ಬೆದರಿಕೆ ಹಾಕುತ್ತಿದ್ದರಂತೆ. ಪತಿ ಬೆದರಿಕೆಯಿಂದ ಮುಖ ಮುಚ್ಚಿಕೊಂಡು ಓಡಾಡುವಂತಾಗಿದೆ. ಇನ್ನು ಮನೆಯಿಂದ ಹೊರಬಂದ್ರೆ ಟಿಪ್ಪರ್ ಹತ್ತಿಸಿ ಕೊಲೆ ಮಾಡುವುದಾಗಿ ಪತಿ ಗುರುರಾಜ್ ನಾಯಕ ಬೆದರಿಕೆ ಹಾಕಿದ್ದಾನೆ. ಹೀಗಾಗಿ, ಜೆಸ್ಕಾಂ ಮತ್ತು ಪೊಲೀಸ್ ಇಲಾಖೆ ತನ್ನ ಗಂಡ ಗುರುರಾಜ್ ವಿರುದ್ಧ ಕಾನೂನು ಕ್ರಮ ಕೈಒಳ್ಳುವಂತೆ ಆಗ್ರಹಿಸಿದ್ದಾರೆ.