ಮೈಸೂರು : ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯ ರಾಜಕಾರಣದಲ್ಲಿ ಚುನಾವಣಾ ಅಖಾಡ ರಂಗೇರಿದ್ದು, ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಮಹಾರಾಜ ಯದುವೀರ ಒಡೆಯರ್ ಅವರು ಸ್ಪರ್ಧಿಸಲಿದ್ದು ಅವರ ಕುರಿತಂತೆ ಎಚ್ಚರವಾಗಿ ಮಾತನಾಡಿ ಎಂದು ಮೈಸೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ನಾಯಕರಿಗೆ ಹಾಗೂ ಕಾರ್ಯಕರ್ತರಿಗೆ ಸಿಎಂ ಸಿದ್ದರಾಮಯ್ಯ ಕಿವಿಮಾತು ಹೇಳಿದರು.
ನಾಳೆಯಿಂದ 5,8 ಹಾಗೂ 9 ನೇ ತರಗತಿಗೆ `ಮೌಲ್ಯಾಂಕನ ಪರೀಕ್ಷೆ’ : ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ
ಈ ಕುರಿತಂತೆ ಕಾರ್ಯಕರ್ತರಿಗೆ ಹಾಗೂ ಕಾಂಗ್ರೆಸ್ ನಾಯಕರಿಗೆ ಕಿವಿಮಾತು ಹೇಳಿರುವ ಸಿದ್ದರಾಮಯ್ಯ, ಎಮೋಷನಲ್ ವಿಚಾರ ತಿರುಗಿಸುವಲ್ಲಿ ಬಿಜೆಪಿಗರು ನಿಸ್ಸಿಮರು ಯದುವೀರ್ ಒಡೆಯರ್ ಬಗ್ಗೆ ಮಾತನಾಡುವಾಗ ಎಚ್ಚರ ಇರಲಿ, ಮೈಸೂರಿನಲ್ಲಿ ಕಾಂಗ್ರೆಸ್ ಗೆಲ್ಲಿಸೋಕೆ ಸಿಎಂ ಸಿದ್ದರಾಮಯ್ಯ ಎಚ್ಚರಿಕೆ ಹೆಜ್ಜೆಯನ್ನು ಇಟ್ಟಿದ್ದಾರೆ ಎನ್ನಲಾಗುತ್ತಿದೆ.
ಒಡೆಯರ್ ಅವರನ್ನು ಟಾರ್ಗೆಟ್ ಮಾಡುವುದು ಬೇಡ ನಮಗೆ ಏನಿದ್ರೂ ಬಿಜೆಪಿ ಟಾರ್ಗೆಟ್ ಅಷ್ಟೇ. ಬಿಜೆಪಿಯನ್ನು ಮಾತ್ರ ಟಾರ್ಗೆಟ್ ಮಾಡೋಕೆ ಕಾಂಗ್ರೆಸ್ ಪ್ಲಾನ್ ಮಾಡಿಕೊಂಡಿದೆ.ನಿಮ್ಮ ಮಾತುಗಳಲ್ಲಿ ಮಾಧ್ಯಮಗಳಲ್ಲಿ ಕೊಡುವಂತಹ ಸ್ಟೇಟ್ಮೆಂಟ್ ಗಳಲ್ಲಿ ಸ್ವಲ್ಪ ಯೋಚನೆ ಇರಲಿ ಎಚ್ಚರಿಕೆಯಿಂದ ಹೇಳಿಕೆಗಳನ್ನು ನೀಡಿ ಎಂದು ಮೈಸೂರಿನ ಕಾಂಗ್ರೆಸ್ ನಾಯಕರಿಗೆ ಹಾಗೂ ಕಾರ್ಯಕರ್ತರಿಗೆ ಕಿವಿ ಮಾತನ್ನು ಹೇಳಿದ್ದಾರೆ.
BREAKING: ‘ಚಂದ್ರಯಾನ-3’ ಲ್ಯಾಂಡಿಂಗ್ ಸೈಟ್ ಹೆಸರು ‘ಶಿವ ಶಕ್ತಿ’ಗೆ ‘IAU ಅನುಮೋದನೆ’
ಪಕ್ಷ ಮಾತ್ರವಲ್ಲ ಅಲ್ಲಿನ ಜನರ ಭಾವನೆಗಳಿಗೆ ಧಕ್ಕೆ ಆಗುವಂತಹ ಯಾವುದೇ ಹೇಳಿಕೆಗಳನ್ನು ನೀಡಬೇಡಿ. ಯಾರೇ ಬಾಷಣ ಮಾಡುವುದಾದರೂ ಎಚ್ಚರಿಕೆಯಿಂದ ಮಾತನಾಡಿ. ಎಮೋಷನಲ್ ವಿಚಾರ ತಿರುಗಿಸುವಲ್ಲಿ ಬಿಜೆಪಿಗರು ಬಿಜೆಪಿ ಅವರಿಗೆ ನಮ್ಮ ಹೇಳಿಕೆಗಳು ಆಹಾರವಾಗಬಾರದು.ಯದುವಿರ್ ಒಡೆಯರ್ ಬಗ್ಗೆ ಮಾತನಾಡುವಾಗ ಎಚ್ಚರವಿರಲಿ ಎಂದು ಮೈಸೂರು ಲೋಕಸಭಾ ಅಖಾಡದಲ್ಲಿ ಸಿಎಂ ಸಿದ್ದರಾಮಯ್ಯ ಕಿವಿಮಾತು ಹೇಳಿದ್ದಾರೆ.
BREAKING: ಕೇಜ್ರಿವಾಲ್ ಬಂಧನ ಖಂಡಿಸಿ ಮಾ.31ರಂದು ‘I.N.D.I.A’ ಬಣದಿಂದ ಪ್ರತಿಭಟನಾ Rally
ಕಾಂಗ್ರೆಸ್ 20 ಕ್ಷೇತ್ರ ಗೆಲ್ಲುತ್ತೆ
ರಾಜ್ಯದಲ್ಲಿ 20 ಕ್ಷೇತ್ರಗಳನ್ನು ಗೆದ್ದೇ ಗೆಲ್ಲುತ್ತದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.ಬಿಜೆಪಿಯವರ ರೀತಿ ನಾವು ಸುಳ್ಳು ಹೇಳುವುದಿಲ್ಲ ಗ್ಯಾರಂಟಿ ಕೊಡುತ್ತೇವೆಅಂತ ಹೇಳಿದ್ದು ಕೂಡ ನಿಜ, ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದು ನಿಜ.ಬಿಜೆಪಿ ಜೆಡಿಎಸ್ ಮೈತ್ರಿಯಿಂದ ನಮಗೆ ಲಾಭವಿದೆ ಜೆಡಿಎಸ್ ಜೊತೆ ನಾವು ಮೈತ್ರಿ ಆಗಿದ್ದಾಗ ಸಮಸ್ಯೆ ಆಗಿತ್ತು. ಕಾಂಗ್ರೆಸ್ ಟಿಕೆಟ್ ಹಂಚಿಕೆಯಲ್ಲಿ ಯಾವುದೇ ಕಗ್ಗಂಟಾಗಿಲ್ಲ ಎಂದು ಮೈಸೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.