ಕೆಎನ್ ಎನ್ ಡಿಜಿಟಲ್ ಡೆಸ್ಕ್ : ದೇಹದ ಆರೋಗ್ಯದಂತೆ ಚರ್ಮದ ಆರೋಗ್ಯ ಕೂಡಾ ಬಹಳ ಮುಖ್ಯ. ಅದರಲ್ಲೂ ಮುಖದ ಸೌಂದರ್ಯಕ್ಕೆ ಜನರು ಹೆಚ್ಚಿನ ಒತ್ತು ನೀಡುತ್ತಾರೆ.
BIGG NEWS: ಹಿಂದೂ ಪದ ಅಶ್ಲೀಲವಲ್ಲ, ಕಾಂಗ್ರೆಸ್ ಅಶ್ಲೀಲ ; ಸತೀಶ್ ಜಾರಕಿಹೊಳಿ ವಿರುದ್ಧ ಆರಗ ಜ್ಞಾನೇಂದ್ರ ಕಿಡಿ
ಆದರೆ ಮೊಡವೆಗಳು, ಕಲೆಗಳು, ಟ್ಯಾನ್ ಮುಖದ ಅಂದವನ್ನು ಹಾಳು ಮಾಡುತ್ತದೆ. ಈ ಸಮಸ್ಯೆಗಳನ್ನು ತಪ್ಪಿಸಲು ಜನರು ನಾನಾ ರೀತಿಯ ಲೋಶನ್, ಫೇಶ್ ವಾಶ್, ಮಾಯಿಶ್ಚರೈಸರ್ಗಳನ್ನು ಬಳಸುತ್ತಾರೆ.
ಚರ್ಮದ ಕಾಂತಿಯನ್ನು ಹೆಚ್ಚಿಸುವಲ್ಲಿ ಫೇಸ್ ಸಿರಮ್ ಕೂಡಾ ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ಈಗಂತೂ ಬಹಳ ಜನರು ಫೇಸ್ ಸಿರಮ್ ಬಳಸುತ್ತಿದ್ದಾರೆ. ಮುಖಕ್ಕೆ ಹೊಳಪು ಮತ್ತು ತೇವಾಂಶ ಬಯಸುವವರು ಫೇಸ್ ಸೀರಮ್ ಅನ್ನು ಬಳಸಬೇಕು ಎಂದು ತಜ್ಞರು ಹೇಳುತ್ತಾರೆ. ಆದರೆ ನೀವು ಫೇಸ್ ಸಿರಮ್ ಖರೀದಿಸುವಾಗ ಬಹಳ ಎಚ್ಚರಿಕೆ ಅಗತ್ಯ. ಖರೀದಿಯಲ್ಲಿ ಸಣ್ಣ ತಪ್ಪಾದರೂ ನಿಮಗೆ ಫಲಿತಾಂಶಕ್ಕಿಂತ ಸಮಸ್ಯೆ ಹೆಚ್ಚಾಗುತ್ತದೆ. ಆದ್ದರಿಂದ ಫೇಸ್ ಸಿರಮ್ ಖರೀದಿಸುವಾಗಿ ಇಲ್ಲಿ ತಿಳಿಸಲಾಗುವ ಕೆಲವೊಂದು ಮಾಹಿತಿಗಳು ನಿಮ್ಮ ಗಮನದಲ್ಲಿರಲಿ.
BIGG NEWS: ಹಿಂದೂ ಪದ ಅಶ್ಲೀಲವಲ್ಲ, ಕಾಂಗ್ರೆಸ್ ಅಶ್ಲೀಲ ; ಸತೀಶ್ ಜಾರಕಿಹೊಳಿ ವಿರುದ್ಧ ಆರಗ ಜ್ಞಾನೇಂದ್ರ ಕಿಡಿ
ವಿಟಮಿನ್ ಸಿ ಗುಣಲಕ್ಷಣಗಳನ್ನು ಹೊಂದಿರುವ ಫೇಸ್ ಸಿರಮ್ ಅನ್ನು ಬಳಸಬಹುದು. ನಿಮ್ಮ ಮುಖದಲ್ಲಿ ನಸುಕಂದು ಮಚ್ಚೆಗಳು, ಟ್ಯಾನ್, ಫ್ರೀ ರಾಡಿಕಲ್ ಸಮಸ್ಯೆಗಳಿದ್ದರೆ ನಿಮಗೆ ಇದು ಬಹಳ ಉಪಯುಕ್ತ. ಇದು ನಿಮ್ಮ ತ್ವಚೆಯ ಆರೈಕೆಗೆ ಬಹಳ ಉತ್ತಮವಾಗಿದೆ.ಮಂದ ಚರ್ಮವನ್ನು ಸರಿಪಡಿಸಲು ಹೈಲುರಾನಿಕ್ ಆಸಿಡ್ ಫೇಸ್ ಸಿರಮ್ ಬಳಸಬಹುದು. ಇದಲ್ಲದೆ, ಎಣ್ಣೆಯುಕ್ತ ಚರ್ಮ ಹೊಂದಿರುವವರಿಗೆ ಕೂಡಾ ಇದು ಉತ್ತಮ ಆಯ್ಕೆ, ಈ ಸಿರಮ್ ಬಳಸುವುದರಿಂದ ಮುಖದ ರಂಧ್ರಗಳಲ್ಲಿ ಅಡಗಿರುವ ಕೊಳೆ ಸುಲಭವಾಗಿ ನಿವಾರಣೆಯಾಗುತ್ತದೆ.