ಬೆಂಗಳೂರು : ಸರ್ಕಾರಿ ಅಧಿಕಾರಿ ಸರ್ಕಾರಿ ಕಡತಗಳನ್ನು ನಾಶಪಡಿಸುವ ಬಗ್ಗೆ ಮತ್ತು ವಿಲೇವಾರಿ ಮಾಡುವಲ್ಲಿ ನಿಗದಿತ ಕ್ರಮ ಅನುಸರಿಸಲು ವಿಫಲವಾದಲ್ಲಿ ಅಂತಹ ಅಧಿಕಾರಿಗೆ “ದಿ ಕರ್ನಾಟಕ ಸ್ಟೇಟ್ ಪಬ್ಲಿಕ್ ರೆಕಾರ್ಡ್ಸ್ ಆಕ್ಟ್, 2010” ಪ್ರಕಾರ ಐದು ವರ್ಷ ಸಾಧಾರಣ ಜೈಲು ಶಿಕ್ಷೆ ವಿಧಿಸಲಾಗುತ್ತದೆ.
ರಾಜ್ಯ ಸರ್ಕಾರ “ದಿ ಕರ್ನಾಟಕ ಸ್ಟೇಟ್ ಪಬ್ಲಿಕ್ ರೆಕಾರ್ಡ್ ಆಕ್ಟ್, 2010” ಅನ್ನು ದಿನಾಂಕ 12.04.2011ರಿಂದ ಜಾರಿಗೊಳಿಸಿದ್ದು, ಕರ್ನಾಟಕ ರಾಜ್ಯಪತ್ರದಲ್ಲಿ ದಿನಾಂಕ 12.04.2011ರಂದು ಪ್ರಕಟವಾಗಿದ್ದು, ಈ ಕಾಯ್ದೆಯಂತೆ ಸಾರ್ವಜನಿಕ ಕಡತಗಳನ್ನು ನಾಶಪಡಿಸುವ ಬಗ್ಗೆ ಅಥವಾ ವಿಲೇವಾರಿ ಮಾಡುವ ಬಗ್ಗೆ ಸ್ಪಷ್ಟ ನಿರ್ದೇಶನ ನೀಡಿದ್ದು, ಈ ರೀತಿ ಸರ್ಕಾರಿ ಕಡತಗಳನ್ನು ನಾಶಪಡಿಸುವ ಬಗ್ಗೆ ಮತ್ತು ವಿಲೇವಾರಿ ಮಾಡುವಲ್ಲಿ ನಿಗದಿತ ಕ್ರಮ ಅನುಸರಿಸಲು ವಿಫಲರಾದಲ್ಲಿ, ಅಂತಹ ಅಧಿಕಾರಿಗಳಿಗೆ 5 ವರ್ಷ ಸಾದಾ ಜೈಲು ಶಿಕ್ಷೆ ವಿಧಿಸಲು ಅವಕಾಶ ಇದೆ.
ಕಡತ ನಿರ್ವಹಣೆಯಲ್ಲಿ ಸರ್ಕಾರಿ ಕಛೇರಿಗಳ ಹೊಣೆಗಾರಿಕೆ ಹೆಚ್ಚಾಗಿದ್ದು, ಮಾಹಿತಿ ಹಕ್ಕು ಕಾಯ್ದೆ, 2005ರ ಸೆಕ್ಷನ್ 4(1)(ಎ)ಅಡಿಯಲ್ಲಿ ಕಡತಗಳ ಕ್ರಮಬದ್ಧ ವರ್ಗೀಕರಣ ಹಾಗೂ ಸೂಚೀಕರಣ ಪಟ್ಟಿಯನ್ನು (ಕ್ಯಾಟಲಾಗಿಂಗ್ ಮತ್ತು ಇಂಡೆಂಕ್ಸಿಂಗ್) ತಯಾರಿಸುವುದು ಮತ್ತು ಪ್ರಕಟಿಸುವುದು ಅವಶ್ಯಕವಾಗಿದೆ ಎಂದು ತಿಳಿಸಿದೆ.