Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಮತಗಳ್ಳತನ: ಆ.11ರಂದು ರಾಷ್ಟ್ರವ್ಯಾಪಿ ಅಭಿಯಾನದ ಬಗ್ಗೆ ಚರ್ಚೆ ನಡೆಸದು ಸಭೆ ಕರೆದ ಎಐಸಿಸಿ

08/08/2025 8:09 PM

ಸೂರ್ಯನಿಗಿಂತ 36,000,000,000 ಪಟ್ಟು ಭಾರ! ಕ್ಷೀರಪಥವನ್ನೇ ನುಂಗಬಲ್ಲಷ್ಟು ದೊಡ್ಡ ‘ಕಪ್ಪು ಕುಳಿ’ ಪತ್ತೆ, ವಿಜ್ಞಾನ ಲೋಕದಲ್ಲಿ ಸಂಚಲನ

08/08/2025 8:05 PM

ಬೆಂಗಳೂರಲ್ಲಿ ಮತಗಳ್ಳತನ ವಿರುದ್ಧ ಪ್ರತಿಭಟನಾ ಸಮಾವೇಶದಲ್ಲಿ ರಾಹುಲ್ ಗಾಂಧಿ ಮಾತಿನ ಹೈಲೈಟ್ಸ್

08/08/2025 8:02 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಪೋಷಕರೇ ಎಚ್ಚರ : ʻಬಾಲ್ಯ ವಿವಾಹʼ ಮಾಡಿದ್ರೆ ದಾಖಲಾಗುತ್ತೆ ನಿಮ್ಮ ಮೇಲೆ ಕೇಸ್!
KARNATAKA

ಪೋಷಕರೇ ಎಚ್ಚರ : ʻಬಾಲ್ಯ ವಿವಾಹʼ ಮಾಡಿದ್ರೆ ದಾಖಲಾಗುತ್ತೆ ನಿಮ್ಮ ಮೇಲೆ ಕೇಸ್!

By kannadanewsnow5729/06/2024 10:38 AM

ದಾವಣಗೆರೆ : ಪ್ರಸಕ್ತ ವರ್ಷದ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ 26 ಬಾಲ್ಯ ವಿವಾಹ ಪ್ರಕರಣಗಳು ವರದಿಯಾಗಿದ್ದು ಇದರಲ್ಲಿ 25 ನ್ನು ತಡೆಗಟ್ಟಿ 2 ಪ್ರಕರಣಗಳಲ್ಲಿ ನ್ಯಾಯಾಲಯದಿಂದ ತಡೆಯಾಜ್ಞೆ ತರಲಾಗಿದೆ. ಎಲ್ಲಾದರೂ ಬಾಲ್ಯ ವಿವಾಹ ಕಂಡು ಬಂದಲ್ಲಿ, ಅಂತಹ ಪೋಷಕರ ಮೇಲೆ ಪ್ರಕರಣ ದಾಖಲಿಸುವಂತೆ ಜಿಲ್ಲಾಧಿಕಾರಿ ಡಾ; ವೆಂಕಟೇಶ್ ಎಂ.ವಿ ತಿಳಿಸಿದರು.

ಅವರು ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾ ಮಟ್ಟದ ಮಕ್ಕಳ ಕಲ್ಯಾಣ ಹಾಗೂ ರಕ್ಷಣಾ ಸಮಿತಿ ಪರಿಶೀಲನಾ ಸಭೆ, ಬಾಲ್ಯ ವಿವಾಹ ನಿಷೇಧ ಕಾಯ್ದೆ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬಾಲ್ಯವಿವಾಹ ಒಂದು ಸಾಮಾಜಿಕ ಪಿಡೂಗಾಗಿದ್ದು, ಇದನ್ನು ತಡೆಗಟ್ಟಲು ವ್ಯಾಪಕವಾಗಿ ಜನ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಕ್ಷಣ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಇನ್ನಿತರೆ ಇಲಾಖೆಗಳಿಂದ ಬರುವ ಜುಲೈ ತಿಂಗಳಲ್ಲಿ ಎಲ್ಲಾ ಶಾಲಾ, ಕಾಲೇಜುಗಳಲ್ಲಿ ಬಾಲ್ಯ ವಿವಾಹ ನಿಷೇಧ ಕಾಯ್ದೆ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಅಭಿಯಾನದ ರೀತಿ ಆಯೋಜಿಸಲು ಸೂಚಿಸಿದರು.

ಕಾರ್ಮಿಕರ ಮಕ್ಕಳು, ತಾಂಡಾಗಳಲ್ಲಿ ಮತ್ತು ಪರಿಶಿಷ್ಠ ಜಾತಿ ಹಾಗೂ ಪರಿಶಿಷ್ಠ ಪಂಗಡಗಳ ಕುಟುಂಬಗಳಲ್ಲಿ ಹೆಚ್ಚಾಗಿ ಬಾಲ್ಯ ವಿವಾಹಗಳು ವರದಿಯಾಗುತ್ತಿರುವುದರಿಂದ ಕಾರ್ಮಿಕ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗಳಿಂದ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂದು ತಿಳಿಸಿದರು.

ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅಭಿವೃದ್ಧಿ ಅಧಿಕಾರಿಗಳು ನರೇಗಾ ಕೂಲಿ ಕಾರ್ಮಿಕರಿಗೆ ಮತ್ತು ಸಾರ್ವಜನಿಕರಿಗೆ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ತಿಳಿಸಿ, ಬಾಲ್ಯವಿವಾಹ ನಡೆಯದೆ ಇರುವ ಮತ್ತು ಹದಿಹರೆಯದ ಬಾಲಕಿಯರು, ಗರ್ಭಿಣಿ ಆಗದೆ ಇರುವಂತಹ ಪ್ರಕರಣಗಳನ್ನು ಗಮನದಲ್ಲಿ ಇಟ್ಟುಕೊಂಡು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿರುವ ಗ್ರಾಮ ಪಂಚಾಯಿತಿಗಳಿಗೆ ಪ್ರಶಂಸನಾ ಪತ್ರ ನೀಡಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಮಾ. ಕರೆಣ್ಣವರ್ ಮಾತನಾಡಿ ಮಕ್ಕಳ ಬಾಲ್ಯ ವಿವಾಹದಿಂದಾಗುವ ಪರಿಣಾಮಗಳ ಬಗ್ಗೆ ತಿಳಿಸಬೇಕು. ಬಾಲ್ಯ ವಿವಾಹ ಮಾಡುವುದರಿಂದ ಉಂಟಾಗುವ ಕಾನೂನಾತ್ಮಕ ತೊಡಕುಗಳ ಬಗ್ಗೆ ಪೋಷಕರಲ್ಲಿ ಮನವರಿಕೆ ಮಾಡಿಕೊಡಬೇಕೆಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರಾದ ವಾಸಂತಿ ಉಪ್ಪಾರ್ ಮಾತನಾಡಿ ಪ್ರಸಕ್ತ ಸಾಲಿನಲ್ಲಿ 2024 ರ ಏಪ್ರಿಲ್, ಮೇ ತಿಂಗಳಲ್ಲಿ ಒಟ್ಟು 26 ದೂರುಗಳು ಬಂದಿದ್ದು, ಅವುಗಳಲ್ಲಿ 25 ಬಾಲ್ಯವಿವಾಹಗಳನ್ನು ತಡೆದು 2 ಪ್ರಕರಣಗಳಲ್ಲಿ ಕೋರ್ಟ್‍ನಿಂದ ತಡೆಯಾಜ್ಞೆ ಪಡೆಯಲಾಗಿದೆ. 1 ಪ್ರಕರಣದಲ್ಲಿ ಎಫ್‍ಐಆರ್ ದಾಖಲಿಸಲಾಗಿದೆ. ಬಾಲ ನ್ಯಾಯ ಮಂಡಳಿಯಲ್ಲಿ ಹಿಂದಿನ 54, ಹೊಸದಾಗಿ 20 ಸೇರಿ 74, ಇದರಲ್ಲಿ 11 ಖುಲಾಸೆಯಾಗಿವೆ. ಪೋಕ್ಸೊದಡಿ 10 ಪ್ರಕರಣಗಳಿದ್ದು 2 ಖುಲಾಸೆಯಾಗಿ 8 ಬಾಕಿ ಇವೆ. ಸರ್ಕಾರಿ ಬಾಲಕಿಯರ ಬಾಲ ಮಂದಿರದಲ್ಲಿ 61 ಹಾಗೂ ಬಾಲಕರ ಬಾಲ ಮಂದಿರದಲ್ಲಿ 32 ಮಕ್ಕಳಿದ್ದಾರೆ. ಇದರಲ್ಲಿ ಅನಾಥ ಮಕ್ಕಳು, ಏಕಪೋಷಕ ಮಕ್ಕಳು, ಇಬ್ಬರು ಪೋಷಕರಿರುವ ಮಕ್ಕಳು ಇದ್ದಾರೆ ಎಂದು ತಿಳಿಸಿದರು.

Beware of parents: If you do 'child marriage' you will be booked! ಪೋಷಕರೇ ಎಚ್ಚರ : ʻಬಾಲ್ಯ ವಿವಾಹʼ ಮಾಡಿದ್ರೆ ದಾಖಲಾಗುತ್ತೆ ನಿಮ್ಮ ಮೇಲೆ ಕೇಸ್!
Share. Facebook Twitter LinkedIn WhatsApp Email

Related Posts

ಮತಗಳ್ಳತನ: ಆ.11ರಂದು ರಾಷ್ಟ್ರವ್ಯಾಪಿ ಅಭಿಯಾನದ ಬಗ್ಗೆ ಚರ್ಚೆ ನಡೆಸದು ಸಭೆ ಕರೆದ ಎಐಸಿಸಿ

08/08/2025 8:09 PM1 Min Read

ಬೆಂಗಳೂರಲ್ಲಿ ಮತಗಳ್ಳತನ ವಿರುದ್ಧ ಪ್ರತಿಭಟನಾ ಸಮಾವೇಶದಲ್ಲಿ ರಾಹುಲ್ ಗಾಂಧಿ ಮಾತಿನ ಹೈಲೈಟ್ಸ್

08/08/2025 8:02 PM5 Mins Read

ಇಡೀ ರಾಜ್ಯದಲ್ಲಿ ಮತದಾರರ ಪಟ್ಟಿ ಅಕ್ರಮದ ಪರಿಶೀಲನೆ ಮಾಡಲು ಚುನಾವಣಾ ಆಯೋಗಕ್ಕೆ ಮನವಿ: DKS

08/08/2025 7:52 PM4 Mins Read
Recent News

ಮತಗಳ್ಳತನ: ಆ.11ರಂದು ರಾಷ್ಟ್ರವ್ಯಾಪಿ ಅಭಿಯಾನದ ಬಗ್ಗೆ ಚರ್ಚೆ ನಡೆಸದು ಸಭೆ ಕರೆದ ಎಐಸಿಸಿ

08/08/2025 8:09 PM

ಸೂರ್ಯನಿಗಿಂತ 36,000,000,000 ಪಟ್ಟು ಭಾರ! ಕ್ಷೀರಪಥವನ್ನೇ ನುಂಗಬಲ್ಲಷ್ಟು ದೊಡ್ಡ ‘ಕಪ್ಪು ಕುಳಿ’ ಪತ್ತೆ, ವಿಜ್ಞಾನ ಲೋಕದಲ್ಲಿ ಸಂಚಲನ

08/08/2025 8:05 PM

ಬೆಂಗಳೂರಲ್ಲಿ ಮತಗಳ್ಳತನ ವಿರುದ್ಧ ಪ್ರತಿಭಟನಾ ಸಮಾವೇಶದಲ್ಲಿ ರಾಹುಲ್ ಗಾಂಧಿ ಮಾತಿನ ಹೈಲೈಟ್ಸ್

08/08/2025 8:02 PM

BREAKING: US ಸುಂಕ ನೀತಿ: ರಷ್ಯಾ ಅಧ್ಯಕ್ಷ ಪುಟಿನ್ ಜೊತೆ ಮಾತುಕತೆ ನಡೆಸಿದ ಪ್ರಧಾನಿ ಮೋದಿ

08/08/2025 8:01 PM
State News
KARNATAKA

ಮತಗಳ್ಳತನ: ಆ.11ರಂದು ರಾಷ್ಟ್ರವ್ಯಾಪಿ ಅಭಿಯಾನದ ಬಗ್ಗೆ ಚರ್ಚೆ ನಡೆಸದು ಸಭೆ ಕರೆದ ಎಐಸಿಸಿ

By kannadanewsnow0908/08/2025 8:09 PM KARNATAKA 1 Min Read

ನವದೆಹಲಿ: ಕರ್ನಾಟಕದಲ್ಲಿ ಮತಗಳ್ಳತನದ ಕುರಿತಂತೆ ಚರ್ಚಿಸಲು ಆಗಸ್ಟ್.11ಕ್ಕೆ ಎಐಸಿಸಿಯು ದೆಹಲಿಯಲ್ಲಿ ರಾಷ್ಟ್ರವ್ಯಾಪಿ ಅಭಿಯಾನ ನಡೆಸುವ ಬಗ್ಗೆ ಚರ್ಚಿಸಲು ಮಹತ್ವದ ಸಭೆ…

ಬೆಂಗಳೂರಲ್ಲಿ ಮತಗಳ್ಳತನ ವಿರುದ್ಧ ಪ್ರತಿಭಟನಾ ಸಮಾವೇಶದಲ್ಲಿ ರಾಹುಲ್ ಗಾಂಧಿ ಮಾತಿನ ಹೈಲೈಟ್ಸ್

08/08/2025 8:02 PM

ಇಡೀ ರಾಜ್ಯದಲ್ಲಿ ಮತದಾರರ ಪಟ್ಟಿ ಅಕ್ರಮದ ಪರಿಶೀಲನೆ ಮಾಡಲು ಚುನಾವಣಾ ಆಯೋಗಕ್ಕೆ ಮನವಿ: DKS

08/08/2025 7:52 PM

ರಾಹುಲ್ ಗಾಂಧಿ ಒಬ್ಬ ಹುಡುಗಾಟದ ಹುಡುಗ: ಛಲವಾದಿ ನಾರಾಯಣಸ್ವಾಮಿ

08/08/2025 7:50 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.