ಬಾಳೆಹೊನ್ನೂರು : ಮನೆಯಲ್ಲಿ ಸೀರೆ ಜೋಕಾಲಿ ಕಟ್ಟಿರುವ ಪೋಷಕರೇ ಎಚ್ಚರ. ಆಟವಾಡುತ್ತಿದ್ದಾಗ ಸೀರೆ ಜೋಕಾಲಿ ಕುತ್ತಿಗೆಗೆ ಬಿಗಿದು ಬಾಲಕನೊಬ್ಬ ಸಾವನ್ನಪ್ಪಿರುವ ಘಟನೆ ನಡೆದಿದೆ.
ಹೌದು ಮೇಲ್ಟಾಲ್ ಸಮೀಪದ ಕರ್ಕೇಶ್ವರ ಕೈಮರದಲ್ಲಿ 12 ವರ್ಷದ ಬಾಲಕನೊಬ್ಬ ಆಟವಾಡುತ್ತಿದ್ದಾಗ ಸೀರೆ ಜೋಕಾಲಿ ಕುತ್ತಿಗೆ ಬಿಗಿದು ಸಾವನ್ನಪ್ಪಿದ್ದಾನೆ.
ಕೈಮರದ ಸನ್ಮಯ್ ಮೃತಪಟ್ಟ ಬಾಲಕನಾಗಿದ್ದು, ಈತ ಮಂಗಳವಾರ ಸಂಜೆ ತನ್ನ ಮನೆಯಲ್ಲಿ ಸಹೋದರನೊಂದಿಗೆ ಮರಕ್ಕೆ ಸೀರೆಯಲ್ಲಿ ಜೋಕಾಲಿ ಮಾಡಿ ಕಟ್ಟಿಕೊಂಡು ಆಟವಾಡುತ್ತಿದ್ದನ್ನು. ಈ ವೇಳೆ ಆಕಸ್ಮಿಕವಾಗಿ ಜೋಕಾಲಿ ಬಾಲಕನ ಕುತ್ತಿಗೆಗೆ ಬಿಗಿದು ಸಾವನ್ನಪ್ಪಿದ್ದಾನೆ.