ಗಾಜಿಯಾಬಾದ್ : ವೈಶಾಲಿ ಅನ್ನೋ ಗಾಜಿಯಾಬಾದ್ ನಿವಾಸಿ ತನ್ನ ತಂದೆ 65 ವರ್ಷದ ತಂದೆ ರಾಕೇಶ್ ಜೈನ್’ಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಸಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಲು ಲೈಂಕಿಕ ಕಿರುಕುಳದ ಕರಾಳ ಮುಖ ತೆರೆದಿಟ್ಟಿದ್ದಾರೆ. ಅಸಲಿಗೆ ಈ ಪ್ರಕರಣವಾದ್ರು ಏನು.?
ಅಂದ್ಹಾಗೆ, 65 ವರ್ಷದ ರಾಕೇಶ್ ಜೈನ್ ಅವ್ರಿಗೆ ಕಳೆದ ಕೆಲವು ದಿನಗಳಿಂದ ಸುಲಿಗೆ ಕರೆಗಳು ಬರುತ್ತಿವೆ. ಮೊದ ಮೊದಲು, ಅವರ ಕುಟುಂಬ ಸದಸ್ಯರಿಗೆ ಈ ಕರೆಗಳು ಯಾಕೆ ಬರುತ್ತಿವೆ ಎಂದು ಅರ್ಥವಾಗಲಿಲ್ಲ. ನಂತ್ರ ರಾಕೇಶ್ ಜೈನ್ ಅವರನ್ನ ಡಿಕ್ಟೇಶನ್’ನ ಬಲಿಪಶುವನ್ನಾಗಿ ಮಾಡಲಾಗಿದೆ ಎಂದು ಬಹಿರಂಗವಾಗಿದೆ.
ಅಸಲಿಗೆ ಒಂದು ದಿನ ರಾಕೇಶ್ ಜೈನ್ಗೆ ಒಂದು ವೀಡಿಯೊ ಕರೆ ಬಂದಿದ್ದು, ಅದನ್ನ ಆತ ಎತ್ತಿಕೊಂಡ ಕೂಡಲೇ, ಅಶ್ಲೀಲ ವೀಡಿಯೋಗಳು ಪರದೆಯ ಮೇಲೆ ಕಾಣಿಸಿಕೊಳ್ಳಲು ಪ್ರಾರಂಭಿಸಿದವು. ಈ ವೀಡಿಯೋಗಳು ಯಾವ ವ್ಯಕ್ತಿಯೂ ತನ್ನ ಕುಟುಂಬದ ಮುಂದೆ ನೋಡಲಾಗದಷ್ಟು ಅಶ್ಲೀಲವಾಗಿದ್ದವು. ಆದ್ರೆ, ರಾಕೇಶ್ ಜೈನ್ ಇದನ್ನು ಅರ್ಥಮಾಡಿಕೊಂಡು ಫೋನ್ ಕತ್ತರಿಸುವ ಹೊತ್ತಿಗೆ, ವಂಚಕರು ಆತನ ಸ್ಕ್ರೀನ್ ಶಾಟ್ ತೆಗೆದುಕೊಂಡಿದ್ದಾರೆ. ಇದರ ನಂತ್ರ ವಂಚಕರು ತಮ್ಮ ಆಟ ಶುರುವಚ್ಚಿಕೊಂಡಿದ್ದು, ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ರಾಕೇಶ್ ಜೈನ್ ಹಣ ನೀಡಲು ನಿರಾಕರಿದಾಗ, ಆತನ ಫೋಟೋಗಳನ್ನ ಅವರ ಕುಟುಂಬ ಸದಸ್ಯರಿಗೆ ಕಳುಹಿಸುವುದಾಗಿ ಬೆದರಿಸಿದ್ದಾರೆ. ಆಗ ರಾಕೇಶ್ ಜೈನ್ ಭಯಭೀತರಾಗಿ 10,000 ರೂಪಾಯಿ ಪಾವತಿಸಿದ್ದಾರೆ. ಆದ್ರೆ, ಈ ಕರೆಗಳು ಇಲ್ಲಿಗೆ ಕೊನೆಗೊಂಡಿಲ್ಲ. ಇದರಿಂದಾಗಿ ಮನನೊಂದ ರಾಕೇಶ್ ಜೈನ್ ತನ್ನ ಫೋನ್ ಮತ್ತು ಇತರ ಬೆಲೆಬಾಳುವ ವಸ್ತುಗಳನ್ನ ಬಿಟ್ಟು ಮನೆ ಬಿಟ್ಟು ಎಲ್ಲೋ ಹೋಗಿದ್ದಾನೆ.
ರಾಕೇಶ್ ಜೈನ್ ಅವರ ಮಗಳು ನಿಕಿತಾ ಜೈನ್ ಸಧ್ಯ ಟ್ವಿಟ್ಟರ್ನಲ್ಲಿ ಜನರ ಸಹಾಯ ಕೋರಿದ್ದಾರೆ. “ನನ್ನ ತಂದೆ ರಾಕೇಶ್ ಜೈನ್ ನವೆಂಬರ್ 10 ರಿಂದ ಕಾಣೆಯಾಗಿದ್ದಾರೆ. ಅವರು ಕೊನೆಯ ಬಾರಿಗೆ ಮಧ್ಯಾಹ್ನ 3:30ರ ಸುಮಾರಿಗೆ ದಿಲ್ಶಾದ್ ಗಾರ್ಡನ್’ನಲ್ಲಿ ಕಾಣಿಸಿಕೊಂಡರು. ಕಳೆದ ಕೆಲವು ದಿನಗಳಿಂದ, ಅವ್ರಿಗೆ ಸುಲಿಗೆಯ ಕರೆಗಳು ಬರುತ್ತಿದ್ದವು. ದಯವಿಟ್ಟು ಅದನ್ನ ಸಾಧ್ಯವಾದಷ್ಟು ಹಂಚಿಕೊಳ್ಳಿ ಮತ್ತು ನಿಮಗೆ ಮಾಹಿತಿ ಸಿಕ್ಕರೆ ತಿಳಿಸಿ” ಎಂದು ಬರೆದುಕೊಂಡಿದ್ದಾರೆ.
ಈ ಹಗರಣ ಏನು.? ತಪ್ಪಿಸಿಕೊಳ್ಳೋದು ಹೇಗೆ.?
ಸ್ಕ್ಯಾಮರ್’ಗಳು 40 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಹೆಚ್ಚಿನ ಜನರಿಗೆ ವೀಡಿಯೊ ಕರೆ ಮಾಡುವ ಮೂಲಕ ಈ ಬಲೆಯಲ್ಲಿ ಬೀಳಿಸುತ್ತಾರೆ. ವಂಚಕರು, ವೀಡಿಯೊ ಕರೆಯಲ್ಲಿ, ಆಶ್ಲೀಲ ವೀಡಿಯೊಗಳನ್ನ ತೋರಿಸುವ ಮೂಲಕ ಸ್ಕ್ರೀನ್ ಶಾಟ್ ತೆಗೆದುಕೊಳ್ಳುತ್ತಾರೆ ಮತ್ತು ನಂತರ ಹೊಸ ಸಂಖ್ಯೆಗಳಿಂದ ಕರೆ ಮಾಡಲು ಪ್ರಾರಂಭಿಸುತ್ತಾರೆ. ಫೋಟೋಗಳನ್ನ ಕಳುಹಿಸುವ ಮೂಲಕ ಕುಟುಂಬಕ್ಕೆ ತಿಳಿಸುವುದಾಗಿ ಬೆದರಿಕೆ ಹಾಕುತ್ತಾರೆ ಮತ್ತು ನಂತರ ಹಣಕ್ಕಾಗಿ ಬೇಡಿಕೆ ಇಡುತ್ತಾರೆ. ಇದನ್ನು Sextortion ಎಂದು ಕರೆಯಲಾಗುತ್ತದೆ. ಸ್ಕ್ಯಾಮರ್’ಗಳು ಈ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿಯೂ ಹಾಕುವುದಾಗಿ ಬೆದರಿಸುತ್ತಾರೆ. ಅವರು ನಕಲಿ ಎಫ್ಐಆರ್ಗಳನ್ನ ಸಹ ತೋರಿಸುತ್ತಾರೆ. ಇನ್ನೀದು ಬಲಿಪಶುವನ್ನ ತುಂಬಾ ನರ್ವಸ್ ಮಾಡುತ್ತೆ. ಹೀಗಾಗಿ ಬ್ಲ್ಯಾಕ್ಮೇಲ್ ಮಾಡುವವರ ಬಲೆಗೆ ಬೀಳುತ್ತಾರೆ ಮತ್ತು ಅವ್ರಿಗೆ ಹಣವನ್ನು ನೀಡುತ್ತಾರೆ.
ಇದರ ಬಗ್ಗೆ ತಿಳಿದಿಲ್ಲದ ರಾಕೇಶ್ ಜೈನ್ ಕೂಡ ತುಂಬಾ ಹೆದರಿರಬೇಕು ಮತ್ತು ಅವರು ಮುಜುಗರಕ್ಕೆ ಒಳಗಾಗಿರಬೇಕು. ಅವರು ನಕಲಿ ಕರೆಗಳ ಬಲೆಗೆ ಬಿದ್ದಿದ್ದಾರೆ ಎಂದು ಅವರಿಗೆ ತಿಳಿದಿರಲಿಕ್ಕಿಲ್ಲ. ಅದ್ರಂತೆ, ಸಧ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ರಾಕೇಶ್ ಜೈನ್’ಗಾಗಿ ಹುಡುಕಾಟ ಪ್ರಾರಂಭಿಸಿದ್ದಾರೆ.
BIGG NEWS: ಭಾರತದ ಜಿ20 ಅಧ್ಯಕ್ಷ ಸ್ಥಾನವು ಅಂತರ್ಗತ, ನಿರ್ಣಾಯಕ, ಕಾರ್ಯ ಆಧಾರಿತವಾಗಿರುತ್ತದೆ : ಪ್ರಧಾನಿ ಮೋದಿ