ಬೆಂಗಳೂರು : ಶೂ ರ್ಯಾಕ್ ನಲ್ಲಿ ಮನೆಯ ಬೀಗ ಇಟ್ಟು ಹೊರಗಡೆ ಹೋಗುತ್ತಾರೆ ಆದರೆ ಈ ರೀತಿ ಕೀ ಇಡುವವರು ಈ ಸುದ್ದಿಯನ್ನು ಒಮ್ಮೆ ನೋಡಲೇಬೇಕು. ಬೆಂಗಳೂರಿನಲ್ಲಿ ಕಿ ಇಟ್ಟಿದ್ದವರಿಗೆ ಬಿಗ್ ಶಾಕ್ ಎದುರಾಗಿದೆ.
ಶೂ ರ್ಯಾಕ್ ನಲ್ಲಿ ಬೀಗ ಇಟ್ಟು ಹೋಗಿದ್ದ ಮನೆಯಲ್ಲಿಯೇ, ಇದೀಗ ಕಳ್ಳತನ ನಡೆದಿದೆ. ಶೂ ರ್ಯಾಕ್ ನಲ್ಲಿ ಕೀ ಇಟ್ಟಂತ ಮನೆಯಲ್ಲಿ ಈ ಒಂದು ಕಳ್ಳತನ ನಡೆದಿದೆ. 55 ಲಕ್ಷ ಮೌಲ್ಯದ 348 ಗ್ರಾಂ ಚಿನ್ನಾಭರಣ ಕಳ್ಳತನ ಮಾಡಿದ್ದಾರೆ. ಈಗಾಗಲೇ ಆರೋಪಿಯನ್ನು ಪೊಲೀಸರು ಅರೆಸ್ಟ್ ಕೂಡ ಮಾಡಿದ್ದಾರೆ. ವೈಟ್ ಫೀಲ್ಡ್ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬಾಡಿಗೆ ಮನೆ ಹುಡುಕಲು ಬಂದ ಫೋಟೋಗ್ರಾಫರ್ ಕಳ್ಳರಾಗಿದ್ದಾರೆ.
ನಾಗೊಂಡನಹಳ್ಳಿ ಬಾಡಿಗೆ ಮನೆಯನ್ನು ಆರೋಪಿ ಕಿರಣ್ ಹುಡುಕುತ್ತಿದ್ದ. To Let ಬೋರ್ಡ್ ನೋಡಿ ಬಿಲ್ಡಿಂಗ್ ಮೇಲೆ ಹೋಗಿದ್ದ ಈ ವೇಳೆ ಶೂ ರ್ಯಾಕ್ ನಲ್ಲಿ ಕೀ ಸಿಕ್ಕಿತ್ತು. ಕೀ ತೆಗೆದುಕೊಂಡು ಮನೆ ಡೋರ್ ಓಪನ್ ಮಾಡಿದ್ದ ಕಿರಣ್ ಮನೆಯಲ್ಲಿ ಇದ್ದ 55 ಲಕ್ಷ ಮೌಲ್ಯದ ಚಿನ್ನಾಭರಣ ಕದ್ದು ಪರಾರಿಯಾಗಿದ್ದಾನೆ. ಕಳ್ಳತನ ಮಾಡಿದ್ದರ ಕುರಿತು ಆತನಿಗೆ ಪಶ್ಚಾತಾಪ ಕಾಡಿದ್ದು, ಬಳಿಕ ಮಲೆ ಮಹದೇಶ್ವರ ಬೆಟ್ಟಕ್ಕೆ ಹೋಗಿ ದರ್ಶನ ಪಡೆದು ಬರುವಾಗ ಪೊಲೀಸರು ಬಂಧಿಸಿದ್ದಾರೆ.








